‘ನಮ್ಮ ಫ್ಯಾಮಿಲಿ ಅಂತಲ್ಲ.. ಫ್ಯಾಮಿಲಿ ಅಂದ್ರೆ ಚಿತ್ರರಂಗ’: ನಿನ್ನ ಸನಿಹಕೆ ಚಿತ್ರ ನೋಡಿದ ಬಳಿಕ ಪುನೀತ್​ ಮಾತು

ನಟ ಪುನೀತ್​ ರಾಜ್​ಕುಮಾರ್​ ಅವರು ‘ನಿನ್ನ ಸನಿಹಕೆ’ ಚಿತ್ರ ನೋಡಿ ಮೆಚ್ಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮತ್ತೆ ಜನರು ಚಿತ್ರಮಂದಿರದತ್ತ ಕಾಲಿಡುತ್ತಿರುವುದು ಅವರಿಗೆ ಖುಷಿ ನೀಡಿದೆ.

ಡಾ. ರಾಜ್​ಕುಮಾರ್​ ಮೊಮ್ಮಗಳು ಧನ್ಯಾ ರಾಮ್​ಕುಮಾರ್​ ಅಭಿನಯದ ಮೊದಲ ಸಿನಿಮಾ ‘ನಿನ್ನ ಸನಿಹಕೆ’ ರಿಲೀಸ್​ ಆಗಿದೆ. ಅಣ್ಣಾವ್ರ ಕುಟುಂಬದ ಸದಸ್ಯರು ಒಟ್ಟಿಗೆ ಕುಳಿತು ಸಿನಿಮಾ ನೋಡಿದ್ದಾರೆ. ನಟ ಪುನೀತ್​ ರಾಜ್​ಕುಮಾರ್​ ಅವರು ಚಿತ್ರ ನೋಡಿ ಮೆಚ್ಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮತ್ತೆ ಜನರು ಚಿತ್ರಮಂದಿರದತ್ತ ಕಾಲಿಡುತ್ತಿರುವುದು ಅವರಿಗೆ ಖುಷಿ ನೀಡಿದೆ. ‘ಡಿಂಪಿಯನ್ನು (ಧನ್ಯಾ) ನಾನು ಚಿಕ್ಕ ಮಗುವಿನಿಂದಲೂ ನೋಡಿದ್ದೇನೆ. ಈ ಸಿನಿಮಾ ಮಾಡಿದ ಇಡೀ ತಂಡಕ್ಕೆ ಒಳ್ಳೆಯದಾಗಲಿ’ ಎಂದು ಪುನೀತ್​ ಹಾರೈಸಿದರು.

‘ಫ್ಯಾಮಿಲಿ ಎಂದರೆ ಬರೀ ನಮ್ಮ ಫ್ಯಾಮಿಲಿ ಅಂತಲ್ಲ. ಫ್ಯಾಮಿಲಿ ಎಂದರೆ ಚಿತ್ರರಂಗ. ಇದರಲ್ಲಿ ಮತ್ತೆ ಕೆಲಸ ಶುರುವಾಗಿದೆ. ಹಾಗಾಗಿ ಎಲ್ಲರೂ ಥಿಯೇಟರ್​ಗೆ ಬರಲಿ. ಸಾಲು ಸಾಲು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ’ ಎಂದು ಪುನೀತ್​ ಹೇಳಿದರು. ಚಿತ್ರದ ಪ್ರೀಮಿಯರ್ ಶೋಗೆ ಶಿವರಾಜ್​ಕುಮಾರ್​, ರಾಘವೇಂದ್ರ ರಾಜ್​ಕುಮಾರ್​, ರಾಮ್​ಕುಮಾರ್​ ಮುಂತಾದವರು ಹಾಜರಿ ಹಾಕಿದ್ದರು.

ಇದನ್ನೂ ಓದಿ:

‘ನಿನ್ನ ಸನಿಹಕೆ’ ವಿಮರ್ಶೆ: ಯಶಸ್ಸಿನ ಸನಿಹಕ್ಕೆ ಸೂರಜ್​, ಧನ್ಯಾ; ಇದು ಹೊಸ ತಲೆಮಾರಿನ ಪ್ರೇಮಕಥೆ

‘ಮದುವೆ ಆಗದೇ ಮಕ್ಕಳು ಮಾಡಿಕೊಂಡವರು ಇದ್ದಾರೆ’; ‘ನಿನ್ನ ಸನಿಹಕೆ’ ಚಿತ್ರದ ಬಗ್ಗೆ ರಘು ದೀಕ್ಷಿತ್​ ಮಾತು

Click on your DTH Provider to Add TV9 Kannada