Sign In

By signing in or creating an account, you agree with Associated Broadcasting Company's Terms & Conditions and Privacy Policy.

RSS ಬಗ್ಗೆ ನೆಹರು, ಇಂದಿರಾ ಮಾತ್ನಾಡಿದಾಗಲೇ ನಾವು ಹಚಾ ಅಂದಿದ್ವಿ, ಇನ್ನು ಇವರು ಯಾರ್​ ರೀ? - ಸಚಿವ ಈಶ್ವರಪ್ಪ

RSS ಬಗ್ಗೆ ನೆಹರು, ಇಂದಿರಾ ಮಾತ್ನಾಡಿದಾಗಲೇ ನಾವು ಹಚಾ ಅಂದಿದ್ವಿ, ಇನ್ನು ಇವರು ಯಾರ್​ ರೀ? – ಸಚಿವ ಈಶ್ವರಪ್ಪ

TV9 Web
| Updated By: preethi shettigar

Updated on:Oct 08, 2021 | 1:14 PM

ಈಗ ದಲಿತರು, ಹಿಂದುಳಿದವರು ಬಿಜೆಪಿ ಜತೆ ಬಂದಾಯಿತು. ರಾಷ್ಟ್ರಭಕ್ತ ಮುಸ್ಲಿಮರು ಬಿಜೆಪಿಯಲ್ಲೇ ಇದ್ದಾರೆ. ಉಳಿದ ಮುಸ್ಲಿಮರೂ ನಮ್ಮ ಜೊತೆ ಬರುತ್ತಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

ಬಾಗಲಕೋಟೆ: ಆರ್​ಎಸ್​ಎಸ್​ ಬಗ್ಗೆ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ, ಬಾಗಲಕೋಟೆಯಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಆರ್​ಎಸ್​ಎಸ್​ ಬಗ್ಗೆ ನೆಹರು, ಇಂದಿರಾ ಗಾಂಧಿ ಮಾತಾಡಿದಾಗ ನಾವು ಹಚಾ (ಹಚಾ ನಾಯಿ ಓಡಿಸಲು ಬಳಸುವ ಪದ) ಅನ್ಕೊಂಡು ಹೋದ್ವಿ. ಇನ್ನು ಇವರು ಯಾರ್ ರೀ ನಮ್ಮ ಲೆಕ್ಕಕ್ಕೆ ಎಂದು ಬಾಗಲಕೋಟೆಯಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ದೇಶದ ಯುವಕರಲ್ಲಿ ರಾಷ್ಟ್ರಭಕ್ತಿಯನ್ನು ತುಂಬುವ ಶಕ್ತಿ ಆರ್​ಎಸ್​ಎಸ್​. ಆರ್​ಎಸ್​ಎಸ್​ ಇಲ್ಲದಿದ್ದರೆ ಈ ದೇಶ ಪಾಕಿಸ್ತಾನ ಆಗಿ ಹೋಗಿರುತ್ತಿತ್ತು. ಮುಸ್ಲಿಂ, ಕ್ರಿಶ್ಚಿಯನ್ ಮತಗಳ ಮೇಲೆ ಕಣ್ಣಿಟ್ಟು ಬೈತಾರೆ. ಆರ್​ಎಸ್​ಎಸ್​ಗೆ ಬೈದರೆ ತಮಗೆ ಮತ ಹಾಕುತ್ತಾರೆಂದು ಬೈತಾರೆ. ಇಂಥದ್ದೊಂದು ಭ್ರಮೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಇವೆ. ಈಗ ದಲಿತರು, ಹಿಂದುಳಿದವರು ಬಿಜೆಪಿ ಜತೆ ಬಂದಾಯಿತು. ರಾಷ್ಟ್ರಭಕ್ತ ಮುಸ್ಲಿಮರು ಬಿಜೆಪಿಯಲ್ಲೇ ಇದ್ದಾರೆ. ಉಳಿದ ಮುಸ್ಲಿಮರೂ ನಮ್ಮ ಜೊತೆ ಬರುತ್ತಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

ಐಎಎಸ್, ಐಪಿಎಸ್ ಮೂಲಕ ಆಡಳಿತ ನಡೆಸುತ್ತದೆ. ಇದು ಮೆದುಳಿಗೆ ಪೊರೆ ಬಂದಿರುವವರು ಹೇಳುವ ಮಾತು. ಎಲ್ಲ ಕ್ಷೇತ್ರಗಳಲ್ಲೂ ಆರ್​ಎಸ್​ಎಸ್​ ಇದೆ. ರಾಷ್ಟ್ರಪತಿ, ವಿಶ್ವದ ನಾಯಕ ನರೇಂದ್ರ ಮೋದಿ, ನಾವೆಲ್ರೂ ಆರ್​ಎಸ್​ಎಸ್​. ಮೊದಲು ಮುಸ್ಲಿಂ, ಕ್ರಿಶ್ಚನ್ ರಾಷ್ಟ್ರಗಳು ಪಾಕಿಸ್ತಾನ ಜೊತೆ ಇದ್ದವು. ಈಗ ಮೋದಿ ಪ್ರಧಾನಿಯಾದ ಬಳಿಕ ಇಡೀ ವಿಶ್ವವೇ ಮೋದಿ ಬಳಿ ಇದ್ದಾರೆ. ಇವತ್ತು ಪಾಕಿಸ್ತಾನ ಒಬ್ಬಂಟಿಯಾಗಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಇದನ್ನೂ ಓದಿ:
ಶಿವಮೊಗ್ಗ: ಸಚಿವ ಕೆ.ಎಸ್.ಈಶ್ವರಪ್ಪ ಹೆಸರಿನಲ್ಲಿ ಲಕ್ಷ ಲಕ್ಷ ಹಣ ವಂಚನೆ; ಇಬ್ಬರ ಬಂಧನ, ಮೂವರು ಪರಾರಿ

ಈಶ್ವರಪ್ಪಗೂ, ನನಗೂ ಲವ್ ಆ್ಯಂಡ್ ಹೇಟ್ ಫ್ರೆಂಡ್​ಶಿಪ್​ ಇದೆ ಎಂದ ವಿಪಕ್ಷ ನಾಯಕ ಸಿದ್ದರಾಮಯ್ಯ

Published on: Oct 08, 2021 01:11 PM