‘ಮದುವೆ ಆಗದೇ ಮಕ್ಕಳು ಮಾಡಿಕೊಂಡವರು ಇದ್ದಾರೆ’; ‘ನಿನ್ನ ಸನಿಹಕೆ’ ಚಿತ್ರದ ಬಗ್ಗೆ ರಘು ದೀಕ್ಷಿತ್​ ಮಾತು

ಧನ್ಯಾ ರಾಮ್​ಕುಮಾರ್​, ಸೂರಜ್​ ಗೌಡ ಜೋಡಿಯ ‘ನಿನ್ನ ಸನಿಹಕೆ’ ಚಿತ್ರ ಅ.8ರಂದು ತೆರೆಕಾಣುತ್ತಿದೆ. ಈ ಚಿತ್ರಕ್ಕೆ ರಘು ದೀಕ್ಷಿತ್​ ಸಂಗೀತ ನಿರ್ದೇಶನ ಮಾಡಿದ್ದಾರೆ. ಹಾಡುಗಳು ಹಿಟ್​ ಆಗಿರುವುದು ಚಿತ್ರತಂಡಕ್ಕೆ ಖುಷಿ ನೀಡಿದೆ.

ಅ.8ರಂದು ರಿಲೀಸ್​ ಆಗುತ್ತಿರುವ ‘ನಿನ್ನ ಸನಿಹಕೆ’ ಚಿತ್ರದಲ್ಲಿ ಲಿವ್​-ಇನ್​-ರಿಲೇಷನ್​ಶಿಪ್​ ಕಥೆ ಇದೆ ಎಂಬುದು ಟ್ರೇಲರ್ ನೋಡಿದರೆ ಗೊತ್ತಾಗುತ್ತದೆ. ಲಿವ್​-ಇನ್​-ರಿಲೇಷನ್​ಶಿಪ್​ಗೆ ಕಾನೂನಿನ ಸಮ್ಮತಿ ಇದ್ದರೂ ಕೂಡ ಅದನ್ನು ನಮ್ಮ ಸಮಾಜ ಒಪ್ಪಿಕೊಂಡಿಲ್ಲ. ಅದನ್ನು ಕಾಮಿಡಿ ಮೂಲಕ ಹೇಳಲು ಈ ಸಿನಿಮಾ ಪ್ರಯತ್ನಿಸಲಿದೆ. ಈ ಚಿತ್ರಕ್ಕೆ ರಘು ದೀಕ್ಷಿತ್​ ಸಂಗೀತ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಬಗ್ಗೆ ಹಲವು ವಿಚಾರಗಳನ್ನು ಈ ವಿಡಿಯೋದಲ್ಲಿ ಅವರು ಹಂಚಿಕೊಂಡಿದ್ದಾರೆ.

‘ಒಂದು ವರ್ಷದಿಂದಲೂ ಒಂದೊಂದೇ ಹಾಡುಗಳನ್ನು ರಿಲೀಸ್​ ಮಾಡುತ್ತ ಬಂದಿದ್ದೇವೆ. ಶುದ್ಧ ಕನ್ನಡದಲ್ಲಿ ಹಾಡುಗಳನ್ನು ರಚಿಸಲಾಗಿದೆ. ಸಾಂಗ್ಸ್​​ ಹಿಟ್​ ಆಗಲು ವಾಸುಕಿ ವೈಭವ್​ ಅವರ ಸಾಹಿತ್ಯ ಕಾರಣ. ಎಲ್ಲ 8 ಗೀತೆಗಳಿಗೆ ಅವರು ಸಾಹಿತ್ಯ ಬರೆದಿದ್ದಾರೆ. ಗಾಯಕರು ಮತ್ತು ನನ್ನ ಇಡೀ ತಂಡಕ್ಕೆ ಕ್ರೆಡಿಟ್​ ಸಲ್ಲುತ್ತದೆ. ಸ್ಫೂರ್ತಿ ನೀಡುವಂತ ಕಥೆ ಮತ್ತು ನಿರ್ದೇಶಕರು ಇರುವಾಗ ಹಿನ್ನೆಲೆ ಸಂಗೀತಕ್ಕೆ ಕೆಲಸ ಮಾಡುವುದು ಕೂಡ ಆನಂದ ನೀಡುತ್ತದೆ’ ಎಂದು ರಘು ದೀಕ್ಷಿತ್​ ಹೇಳಿದ್ದಾರೆ.

ಇದನ್ನೂ ಓದಿ:

‘ನಿನ್ನ ಸನಿಹಕೆ’ ಚಿತ್ರ ನೋಡಲಿರುವ ರಜನಿಕಾಂತ್​; ಧನ್ಯಾ ರಾಮ್​ಕುಮಾರ್​-ಸೂರಜ್​ಗೆ ತಲೈವಾ ಬೆಂಬಲ

Ninna Sanihake: ಬಸವರಾಜ ಬೊಮ್ಮಾಯಿ ಭೇಟಿ ಮಾಡಿದ ನಿನ್ನ ಸನಿಹಕೆ ಚಿತ್ರತಂಡ; ಪ್ರೀಮಿಯರ್ ಶೋಗೆ ಆಹ್ವಾನ

Click on your DTH Provider to Add TV9 Kannada