AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ninna Sanihake: ಬಸವರಾಜ ಬೊಮ್ಮಾಯಿ ಭೇಟಿ ಮಾಡಿದ ನಿನ್ನ ಸನಿಹಕೆ ಚಿತ್ರತಂಡ; ಪ್ರೀಮಿಯರ್ ಶೋಗೆ ಆಹ್ವಾನ

ಅಕ್ಟೋಬರ್ 7ರಂದು ನಡೆಯಲಿರುವ ಈ ಸಿನಿಮಾದ ಪ್ರೀಮಿಯರ್ ಶೋಗೆ ಚಿತ್ರ ನಾಯಕ‌, ನಿರ್ದೇಶಕ ಸೂರಜ್ ಗೌಡ, ಧನ್ಯ ರಾಮ್​ಕುಮಾರ್ ಮತ್ತು ನಿರ್ಮಾಪಕರಾದ ಅಕ್ಷಯ್ ರಾಜಶೇಖರ್ ಹಾಗೂ ರಂಗನಾಥ್ ಕೂಡ್ಲಿ ಆಹ್ವಾನ ನೀಡಿದ್ದಾರೆ.

Ninna Sanihake: ಬಸವರಾಜ ಬೊಮ್ಮಾಯಿ ಭೇಟಿ ಮಾಡಿದ ನಿನ್ನ ಸನಿಹಕೆ ಚಿತ್ರತಂಡ; ಪ್ರೀಮಿಯರ್ ಶೋಗೆ ಆಹ್ವಾನ
ಬಸವರಾಜ ಬೊಮ್ಮಾಯಿ ಭೇಟಿ ಮಾಡಿದ ನಿನ್ನ ಸನಿಹಕೆ ಚಿತ್ರತಂಡ
TV9 Web
| Updated By: ganapathi bhat|

Updated on: Oct 05, 2021 | 5:59 PM

Share

ಬೆಂಗಳೂರು: ಸೂರಜ್ ಗೌಡ ಹಾಗೂ ಧನ್ಯಾ ರಾಮ್​ಕುಮಾರ್ ಮುಖ್ಯ ಭೂಮಿಕೆಯ ನಿನ್ನ ಸನಿಹಕೆ ಚಿತ್ರವು ಅಕ್ಟೋಬರ್ 8 ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 7 ರಂದು ನಡೆಯಲಿರುವ ಸಿನಿಮಾದ ಪ್ರೀಮಿಯರ್ ಶೋಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಚಿತ್ರತಂಡ ಆಹ್ವಾನಿಸಿದೆ. ಸಿಎಂ ಬೊಮ್ಮಾಯಿ ಭೇಟಿ ಮಾಡಿರುವ ಚಿತ್ರತಂಡ ಬೊಮ್ಮಾಯಿಗೆ ಚಿತ್ರದ ಮೊದಲ ಟಿಕೆಟ್ ಕೊಟ್ಟು ಪ್ರೀಮಿಯರ್ ಶೋಗೆ ಆಹ್ವಾನ ನೀಡಿದ್ದಾರೆ. ಡಾ. ರಾಜ್ ಮೊಮ್ಮಗಳು ಧನ್ಯಾ ಅಭಿನಯಿಸಿರುವ ಸಿನಿಮಾದ ಹಾಡುಗಳು ಹಾಗೂ ಟ್ರೇಲರ್ ಈಗಾಗಲೇ ಭಾರೀ ಸದ್ದು ಮಾಡಿದ್ದು, ಸಿನಿಮಾ ಬಗ್ಗೆ ಹೆಚ್ಚು ನಿರೀಕ್ಷೆ ಮೂಡಿಸಿದೆ. ನಾಯಕ ನಟ ಸೂರಜ್ ಗೌಡ ಸ್ವತಃ ಸಿನಿಮಾ ನಿರ್ದೇಶಿಸಿರುವುದು ಸಿನಿಮಾದ ವಿಶೇಷ.

ಇದೀಗ ಅಕ್ಟೋಬರ್ 7ರಂದು ನಡೆಯಲಿರುವ ಈ ಸಿನಿಮಾದ ಪ್ರೀಮಿಯರ್ ಶೋಗೆ ಚಿತ್ರ ನಾಯಕ‌, ನಿರ್ದೇಶಕ ಸೂರಜ್ ಗೌಡ, ಧನ್ಯ ರಾಮ್​ಕುಮಾರ್ ಮತ್ತು ನಿರ್ಮಾಪಕರಾದ ಅಕ್ಷಯ್ ರಾಜಶೇಖರ್ ಹಾಗೂ ರಂಗನಾಥ್ ಕೂಡ್ಲಿ ಆಹ್ವಾನ ನೀಡಿದ್ದಾರೆ.

ಈ ಚಿತ್ರಕ್ಕೆ ರಘು ದೀಕ್ಷಿತ್​ ಸಂಗೀತ ನಿರ್ದೇಶನ ಮಾಡಿದ್ದಾರೆ. ಹಾಡುಗಳು ಹಿಟ್​ ಆಗಿರುವುದು ಚಿತ್ರತಂಡಕ್ಕೆ ಖುಷಿ ನೀಡಿದೆ. ‘ಒಂದು ವರ್ಷದಿಂದಲೂ ಒಂದೊಂದೇ ಹಾಡುಗಳನ್ನು ರಿಲೀಸ್​ ಮಾಡುತ್ತ ಬಂದಿದ್ದೇವೆ. ಶುದ್ಧ ಕನ್ನಡದಲ್ಲಿ ಹಾಡುಗಳನ್ನು ರಚಿಸಲಾಗಿದೆ. ಸಾಂಗ್ಸ್​​ ಹಿಟ್​ ಆಗಲು ವಾಸುಕಿ ವೈಭವ್​ ಅವರ ಸಾಹಿತ್ಯ ಕಾರಣ. ಎಲ್ಲ 8 ಗೀತೆಗಳಿಗೆ ಅವರು ಸಾಹಿತ್ಯ ಬರೆದಿದ್ದಾರೆ. ಗಾಯಕರು ಮತ್ತು ನನ್ನ ಇಡೀ ತಂಡಕ್ಕೆ ಕ್ರೆಡಿಟ್​ ಸಲ್ಲುತ್ತದೆ. ಸ್ಫೂರ್ತಿ ನೀಡುವಂತ ಕಥೆ ಮತ್ತು ನಿರ್ದೇಶಕರು ಇರುವಾಗ ಹಿನ್ನೆಲೆ ಸಂಗೀತಕ್ಕೆ ಕೆಲಸ ಮಾಡುವುದು ಕೂಡ ಆನಂದ ನೀಡುತ್ತದೆ’ ಎಂದು ರಘು ದೀಕ್ಷಿತ್​ ತಿಳಿಸಿದ್ದಾರೆ.

ತಮ್ಮ ಕೆಲಸದ ಬಗ್ಗೆ ಸೂರಜ್​ ಗೌಡ ಆತ್ಮವಿಶ್ವಾಸ ಇಟ್ಟುಕೊಂಡಿದ್ದಾರೆ. ‘ಇದು ನಮ್ಮೆಲ್ಲರ ಕನಸು. ಸಿನಿಮಾ ಶುರು ಮಾಡಿದಾಗಿನಿಂದಲೂ ಇದು ಡಿಫರೆಂಟ್​ ಆಗಿ ಮೂಡಿಬರಬೇಕು ಅಂದುಕೊಂಡಿದ್ವಿ. ಅದು ಈಡೇರಿದೆ. ಇದೊಂದು ರೊಮ್ಯಾಂಟಿಕ್​ ಕಾಮಿಡಿ ಚಿತ್ರ. ಈಗಿನ ಕಾಲದಲ್ಲಿ ಪ್ರೀತಿಯನ್ನು ನಾವು ಹೇಗೆ ಗ್ರಹಿಸುತ್ತೇವೆ ಎಂಬುದನ್ನು ಇದರಲ್ಲಿ ತೋರಿಸಿದ್ದೇವೆ. ಲಿವ್​-ಇನ್​-ರಿಲೇಷನ್​ಶಿಪ್​ ಬಗ್ಗೆ ಈ ಚಿತ್ರದ ಕಥೆ ಇದೆ ಎಂಬುದು ಟ್ರೇಲರ್ ನೋಡಿದರೆ ಗೊತ್ತಾಗುತ್ತದೆ. ಲಿವ್​-ಇನ್​-ರಿಲೇಷನ್​ಶಿಪ್​ಗೆ ಕಾನೂನಿನ ಸಮ್ಮತಿ ಇದ್ದರೂ ಕೂಡ ಅದನ್ನು ನಮ್ಮ ಸಮಾಜ ಒಪ್ಪಿಕೊಂಡಿಲ್ಲ. ಅದನ್ನು ಕಾಮಿಡಿ ಮೂಲಕ ಹೇಳುತ್ತಿದ್ದೇವೆ’ ಎಂದಿದ್ದಾರೆ​.

ತಮ್ಮ ಮೊದಲ ಸಿನಿಮಾದ ಬಿಡುಗಡೆ ಹೊಸ್ತಿಲಿನಲ್ಲಿ ನಿಂತಿರುವ ಧನ್ಯಾ ರಾಮ್​ಕುಮಾರ್​ ಅವರು ಈ ಚಿತ್ರದಲ್ಲಿ ಅಮೃತಾ ಎಂಬ ದಂತ ವೈದ್ಯೆಯ ಪಾತ್ರ ಮಾಡಿದ್ದಾರೆ. ‘ನೇರ ನಡೆ-ನುಡಿ ಇರುವಂಥ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ನನ್ನ ರಿಯಲ್​ ಲೈಫ್​ ವ್ಯಕ್ತಿತ್ವಕ್ಕೂ ಈ ಗುಣ ಮ್ಯಾಚ್​ ಆಗುತ್ತದೆ. ಹಾಗಾಗಿ ಈ ಪಾತ್ರ ನಿಭಾಯಿಸುವುದು ಸುಲಭ ಆಯಿತು’ ಎಂದಿದ್ದಾರೆ.

ಇದನ್ನೂ ಓದಿ: ‘ನಿನ್ನ ಸನಿಹಕೆ’ ಚಿತ್ರ ನೋಡಲಿರುವ ರಜನಿಕಾಂತ್​; ಧನ್ಯಾ ರಾಮ್​ಕುಮಾರ್​-ಸೂರಜ್​ಗೆ ತಲೈವಾ ಬೆಂಬಲ

ಇದನ್ನೂ ಓದಿ: ನಿನ್ನ ಸನಿಹಕೆ: ಸೂರಜ್​ ಜತೆ ಲಿವ್​ ಇನ್ ರಿಲೇಷನ್​ಶಿಪ್​ ಕಥೆ ಹೇಳ್ತಾರೆ ಡಾ. ರಾಜ್​ ಮೊಮ್ಮಗಳು ಧನ್ಯಾ