Paramathma: ಎದೆಯಲ್ಲಿ ಪ್ರೇಮ ಅಧ್ಯಾತ್ಮ ಅರಳಿಸಿದ ಪರಮಾತ್ಮನಿಗೆ 10 ವರ್ಷ

10 Years for Paramathma: ಪರವಶನಾದೆನು..ಅರಿಯುವ ಮುನ್ನವೇ ಎನ್ನುತ್ತಲೇ ಕತ್ಲಲ್ಲಿ ಕರಡಿಗೆ ಜಾಮೂನು ತಿನ್ನಿಸೋಕೆ ಹೊಗಬಾರದೆಂದು ಉಪದೇಶಿಸಿದ ಪರಮಾತ್ಮನ ಹಾಡುಗಳು ಕ್ಲಾಸಿಕ್ ಎಂದೇ ಹೇಳಬಹುದು.

Paramathma: ಎದೆಯಲ್ಲಿ ಪ್ರೇಮ ಅಧ್ಯಾತ್ಮ ಅರಳಿಸಿದ ಪರಮಾತ್ಮನಿಗೆ 10 ವರ್ಷ
ಪರಮಾತ್ಮ
Follow us
TV9 Web
| Updated By: guruganesh bhat

Updated on: Oct 06, 2021 | 1:37 PM

ಕನ್ನಡ ಚಿತ್ರಪ್ರೇಮಿಗಳಲ್ಲಿ ಹೊಸ ರೀತಿಯ ಸಂಚಲನವನ್ನೇ ಮೂಡಿಸಿದ್ದ ಪರಮಾತ್ಮ ಸಿನಿಮಾ ಬಿಡುಗಡೆಯಾಗಿ ಇಂದು ಬುಧವಾರ (ಅಕ್ಟೋಬರ್ 6) ಬರೋಬ್ಬರಿ 10 ವರ್ಷ. ಯೋಗರಾಜ್ ಭಟ್ ನಿರ್ದೇಶನ, ವಿ.ಹರಿಕೃಷ್ಣ ಸಂಗೀತ ನಿರ್ದೇಶನದ ಪರಮಾತ್ಮ ಕನ್ನಡಿಗರ ಎದೆಯಲ್ಲಿ ಅರಳಿಸಿದ ಪ್ರೇಮವನ್ನು ಎಂದೂ ಮರೆಯಲಾಗದು. 2011ರ ನವರಾತ್ರಿಗೆ ತೆರೆಗಪ್ಪಳಿಸಿ ಪರಮಾತ್ಮ ಪ್ರೇಮದಲ್ಲೂ ಅಧ್ಯಾತ್ಮವನ್ನು ಹುಡುಕುವ ಪ್ರಯತ್ನ ಮಾಡಿತು. ಬಿಡುಗಡೆಗೂ ಮುನ್ವವೇ 25 ಕೋಟಿಗಳನ್ನು ಬಾಚಿಕೊಂಡಿತ್ತು.

ಪರಂ (ಪುನೀತ್ ರಾಜ್​ಕುಮಾರ್) ಜೀವನದಲ್ಲಿ ನಾನಾ ರಿಸ್ಕ್ಗಳನ್ನು ಎದುರುನೋಡುವ ಭಯಂಕರ ಉತ್ಸಾಹದ ಹುಡುಗ. ದೀಪಾಳ (ದೀಪಾ ಸನ್ನಿಧಿ) ಜತೆ ಪರಂಗೆ ಪ್ರೇಮವುಂಟಾಗುತ್ತದೆ. ಆದರೆ ಈಕಡೆ ಸಾನ್ವಿ (ಐಂದ್ರಿರಾ ರೇ) ಪರಂನನ್ನು ಪ್ರೇಮಿಸುತ್ತಾಳೆ. ಇದೊಂದು ತ್ರಿಕೋನ ಪ್ರೇಮ ಕಥೆ ಎನಿಸಿದರೂ ಅದಲ್ಲದ ಬೇರೆಯದೇ ಆದ ವೀಕ್ಷಕನ ಮೈ ನೇವರಿಸುವಂತಹ ಕಥಾನಕ. ಪರಮಾತ್ಮದ ಆಳ ಲವ್ ಸ್ಟೋರಿ ವೀಕ್ಷಕರ ಕಣ್ಣೆವೆ ತೋಯಿಸಿತ್ತು. ಪ್ರೇಮವೆಂದರೆ ಪ್ರೇಮವಷ್ಟೇ ಅಲ್ಲ, ಸಹಿಸಲೇಬೇಕಾದ ನೋವಿನಂತಹ ಭಾವನೆ ಎಂದನಿಸುವಂತಿತ್ತು ಪರಮಾತ್ಮ. ಮರ ಸುತ್ತುವ ಹೀರೋ ಹೀರೋಯಿನ್, ಅದದೇ ಫೈಟ್, ಅದೇ ವಿಲನ್ ಎಂಬ ಪ್ರೇಮಕಥೆಗಳಲ್ಲಿ ರೋಸಿಹೋಗಿದ್ದ ವೀಕ್ಷಕ ಯೋಗರಾಜ ಭಟ್ಟರ ಪರಮಾತ್ಮನಲ್ಲಿ ಪುಳಕಗೊಂಡಿದ್ದ. ವಿಕ್ಷಕನ ನೋಟದಲ್ಲೊಂದೇ ಅಲ್ಲದೇ ಕಮರ್ಶಿಯಲಿ ಸಹ ಚಿತ್ರ ಹಿಟ್ ಆಗುತ್ತು. ಇಂದೂ ಸಹ ಪರಮಾತ್ಮನನ್ನು ನೆನೆಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಸಾವಿರಾರು ಅಭಿಮಾನಿಗಳು ಪೋಸ್ಟ್ ಮಾಡುತ್ತಿದ್ದಾರೆ ಎಂಬುದೇ ಪರಮಾತ್ಮನ ಶಕ್ತಿಗೆ ಸಾಕ್ಷಿ.

ಹಾಡುಗಳ ಸಾಲು ಪರವಶನಾದೆನು..ಅರಿಯುವ ಮುನ್ನವೇ ಎನ್ನುತ್ತಲೇ ಕತ್ಲಲ್ಲಿ ಕರಡಿಗೆ ಜಾಮೂನು ತಿನ್ನಿಸೋಕೆ ಹೊಗಬಾರದೆಂದು ಉಪದೇಶಿಸಿದ ಪರಮಾತ್ಮನ ಹಾಡುಗಳು ಕ್ಲಾಸಿಕ್ ಎಂದೇ ಹೇಳಬಹುದು. ಹೆಸರು ಪೂರ್ತಿ ಹೇಳದೇ..ತುಟಿಯ ಕಚ್ಚಿ ಕೊಳ್ಳದೇ ಆಗುವ ಪ್ರೀತಿ ಎಬಿಸಿಡನಾ ಆಲೂಗಡ್ಡೆನಾ ಗೋಡೆ ಹಲ್ಲಿನಾ ಯಾವನ್ನಿಗೊತ್ತು? ಎನ್ನಬಹುದಷ್ಟೇ. ಒಟ್ಟಿನಲ್ಲಿ ಮನಸು ಪೂರ್ತಿ ಮಾಗಿದವರ, ಮುಗ್ಧರ ಎಂದೆಂದಿಗೂ ಫೆವರೇಟ್ ಪ್ರೇಮ ಪರಮಾತ್ಮ.

ಇದನ್ನೂ ಓದಿ: 

ಪುನೀತ್, ಸಂತೋಷ್ ಆನಂದರಾಮ್, ಹೊಂಬಾಳೆ ಫಿಲ್ಮ್ಸ್ ಕಾಂಬಿನೇಷನ್​ನಲ್ಲಿ ಹೊಸ ಚಿತ್ರ; ಸೆಟ್ಟೇರೋದು ಯಾವಾಗ?

Puneeth Rajkumar: ಪ್ರಭುದೇವ ಜತೆ ಸ್ಟೆಪ್​ ಹಾಕಿದ ಪುನೀತ್​ ರಾಜ್​ಕುಮಾರ್​; ಏನಿದು ಸಮಾಚಾರ?

ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ