ಪುನೀತ್, ಸಂತೋಷ್ ಆನಂದರಾಮ್, ಹೊಂಬಾಳೆ ಫಿಲ್ಮ್ಸ್ ಕಾಂಬಿನೇಷನ್​ನಲ್ಲಿ ಹೊಸ ಚಿತ್ರ; ಸೆಟ್ಟೇರೋದು ಯಾವಾಗ?

TV9 Digital Desk

| Edited By: shivaprasad.hs

Updated on: Sep 19, 2021 | 11:15 AM

Puneeth Rajkumar: ಕನ್ನಡದ ಹಿಟ್ ಜೋಡಿಗಳಲ್ಲಿ ಒಂದಾದ ಸಂತೋಷ್ ಆನಂದರಾಮ್ ಹಾಗೂ ಪುನೀತ್ ರಾಜಕುಮಾರ್ ಅವರ ನೂತನ ಚಿತ್ರದ ಕುರಿತು ಮಾಹಿತಿ ಲಭ್ಯವಾಗಿದೆ. ಸುದ್ದಿ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

ಪುನೀತ್, ಸಂತೋಷ್ ಆನಂದರಾಮ್, ಹೊಂಬಾಳೆ ಫಿಲ್ಮ್ಸ್ ಕಾಂಬಿನೇಷನ್​ನಲ್ಲಿ ಹೊಸ ಚಿತ್ರ; ಸೆಟ್ಟೇರೋದು ಯಾವಾಗ?
ಸಂತೋಷ್ ಆನಂದ್​ರಾಮ್ ಮತ್ತು ಪುನೀತ್ ರಾಜಕುಮಾರ್

ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ನಟರ ಹೊಸ ಚಿತ್ರಗಳು ಇತ್ತೀಚೆಗೆ ಸಖತ್ ಸದ್ದು ಮಾಡುತ್ತಿವೆ. ಕಾರಣ, ದೊಡ್ಡ ತಾರಾ ಬಳಗ, ಅದ್ದೂರಿ ಬಜೆಟ್ ಹಾಗೂ ಸೂಪರ್ ಹಿಟ್ ಕಾಂಬಿನೇಷನ್ ನ ನಿರ್ದೇಶಕ- ನಟ ಜೋಡಿ ಒಂದಾಗಿ ಹೊಸ ಸಿನಿಮಾಗಳನ್ನು ಮಾಡುತ್ತಿರುವುದು. ಇದಕ್ಕೆ‌ ಉದಾಹರಣೆಯೆಂಬಂತೆ ಇತ್ತೀಚಿನ ಹಲವು ಚಿತ್ರಗಳನ್ನು ಗುರುತಿಸಬಹುದು. ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಸಂಸ್ಥೆಯೊಂದೇ ತನ್ನ ಬ್ಯಾನರ್​​ನಲ್ಲಿ ಬಿಗ್​ ಬಜೆಟ್​ನ ಹಲವು ಚಿತ್ರಗಳನ್ನು ಘೋಷಿಸಿದೆ. ಇದೀಗ ಆ ಸಾಲಿಗೆ ಹೊಸ ಚಿತ್ರವೊಂದು ಸೇರ್ಪಡೆಯಾಗಿದೆ. ಹೌದು. ಚಂದನವನದ ಹಿಟ್ ಕಾಂಬಿನೇಷನ್​ನಲ್ಲಿ ಒಂದಾದ ಸಂತೋಷ್ ಆನಂದರಾಮ್ ಮತ್ತು ಪುನೀತ್ ರಾಜಕುಮಾರ್ ಜೋಡಿ ಮತ್ತೆ ಒಂದಾಗುವುದು ಪಕ್ಕಾ ಆಗಿದೆ. ಈ ಕುರಿತು ಸಂತೋಷ್, ಮಾಹಿತಿ ನೀಡಿದ್ದಾರೆ.

ಟ್ವೀಟ್ ಮುಖಾಂತರ ಮಾಹಿತಿ ನೀಡಿರುವ ನಿರ್ದೇಶಕ ಸಂತೋಷ್ ಆನಂದರಾಮ್, ಹೊಂಬಾಳೆ ಫಿಲ್ಮ್ಸ್, ಪುನೀತ್ ರಾಜಕುಮಾರ್ ಹಾಗೂ ಅವರ ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ ಹೊಸ ಚಿತ್ರದ ಅಪ್ಡೇಟ್ ನೀಡಿದ್ದಾರೆ. ‘ಹೊಂಬಾಳೆ ಫಿಲ್ಮ್ಸ್, ಪುನೀತ್ ಹಾಗೂ ನನ್ನ ಕಾಂಬಿನೇಷನ್​ನ ಹೊಸ ಚಿತ್ರದ ಬಗ್ಗೆ ಎಲ್ಲರೂ ಕೇಳುತ್ತಿದ್ದಿರಿ. ಅವರಿಗೆಲ್ಲರಿಗೂ ಈ ಮಾಹಿತಿ. ನಮ್ಮ ಕಾಂಬಿನೇಷನ್​ನಲ್ಲಿ ಹೊಸ ಚಿತ್ರ ಮುಂದಿನ ವರ್ಷ ಸೆಟ್ಟೇರಲಿದೆ. ನಿಮ್ಮೆಲ್ಲರ ಅಭಿಮಾನ, ಹಾರೈಕೆಗೆ ಧನ್ಯವಾದಗಳು’ ಎಂದು ಅವರು ಟ್ವೀಟ್ ಮಾಡಿದ್ದಾರೆ. ಈ ಮೂಲಕ ಪುನೀತ್ ಅಭಿಮಾನಿಗಳಿಗೆ ಭರ್ಜರಿ ಸುದ್ದಿಯನ್ನು ನೀಡಿದ್ದು, ಹೊಸ ಸುದ್ದಿ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

ಹೊಂಬಾಳೆ ಫಿಲ್ಮ್ಸ್ ಬ್ಯಾನರ್​ನಲ್ಲಿ ಪುನೀತ್ ರಾಜಕುಮಾರ್ ಕಡೆಯದಾಗಿ ‘ಯುವರತ್ನ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ‘ರಾಜಕುಮಾರ’ ಚಿತ್ರದ ನಂತರ ಸಂತೋಷ್ ಆನಂದರಾಮ್ ಹಾಗೂ ಪುನೀತ್ ಜೋಡಿ ಈ ಚಿತ್ರಕ್ಕೆ ಒಂದಾಗಿತ್ತು. ಆದರೆ ಚಿತ್ರವು ಬೃಹತ್ ತಾರಾಗಣ, ಬಿಗ್ ಬಜೆಟ್​ನ ಹೊರತಾಗಿಯೂ ಮಿಶ್ರ ಪ್ರತಿಕ್ರಿಯೆ ಪಡೆದಿತ್ತು. ಸದ್ಯ ಪುನೀತ್ ಹೊಂಬಾಳೆ ಫಿಲ್ಮ್ಸ್ ಬ್ಯಾನರ್​ನಲ್ಲಿ ಲೂಸಿಯಾ ಪವನ್ ಕುಮಾರ್ ನಿರ್ದೇಶನದ ‘ದ್ವಿತ್ವ’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆ ಚಿತ್ರದ ನಂತರ ನೂತನ ಚಿತ್ರ ಸೆಟ್ಟೇರಲಿದೆ ಎನ್ನಲಾಗಿದೆ.

ಇದನ್ನೂ ಓದಿ: 

ಜನಪ್ರಿಯ ಒಟಿಟಿಗೆ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾದ ರಾಮ್​ ಚರಣ್; ಇದಕ್ಕೆ ಅವರು ಪಡೆಯೋ ಹಣ ಇಷ್ಟೊಂದಾ?

SIIMA Awards: ಒಂದೇ ಕಾರ್ಯಕ್ರಮದಲ್ಲಿ ರಕ್ಷಿತ್​ ಶೆಟ್ಟಿ-ರಶ್ಮಿಕಾ; ಪ್ರತಿಷ್ಠಿತ ಅವಾರ್ಡ್​ ಬಾಚಿಕೊಂಡ ಕಿರಿಕ್​ ಜೋಡಿ

(Santhosh Anandram Puneeth Rajkumar and Hombale Films collaborated for a new movie starts from next year)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada