AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Puneeth Rajkumar: ಪ್ರಭುದೇವ ಜತೆ ಸ್ಟೆಪ್​ ಹಾಕಿದ ಪುನೀತ್​ ರಾಜ್​ಕುಮಾರ್​; ಏನಿದು ಸಮಾಚಾರ?

‘ಲಕ್ಕಿ ಮ್ಯಾನ್’​ ಸಿನಿಮಾದ ಶೂಟಿಂಗ್​ ಮುಗಿದಿದೆ. ಹಾಡಿನ ಶೂಟಿಂಗ್​ ಮಾತ್ರ ಬಾಕಿ ಇದ್ದು ಅದನ್ನೂ ಈಗ ಪೂರ್ಣಗೊಳಿಸಲಾಗಿದೆ. ಸದ್ಯ, ಚಿತ್ರತಂಡ ಪೋಸ್ಟ್​ ಪ್ರೊಡಕ್ಷನ್​ಗಳಿಗೆ ಚಾಲನೆ ನೀಡಿದೆ.

Puneeth Rajkumar: ಪ್ರಭುದೇವ ಜತೆ ಸ್ಟೆಪ್​ ಹಾಕಿದ ಪುನೀತ್​ ರಾಜ್​ಕುಮಾರ್​; ಏನಿದು ಸಮಾಚಾರ?
ಪ್ರಭುದೇವ ಜತೆ ಸ್ಟೆಪ್​ ಹಾಕಿದ ಪುನೀತ್​ ರಾಜ್​ಕುಮಾರ್​; ಏನಿದು ಸಮಾಚಾರ?
TV9 Web
| Edited By: |

Updated on: Sep 16, 2021 | 5:38 PM

Share

ಪ್ರಭುದೇವ ಹಾಗೂ ಪುನೀತ್​ ರಾಜ್​ಕುಮಾರ್​ ಡ್ಯಾನ್ಸ್​ ಕಲೆ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಅದ್ಭುತ ಸ್ಟೆಪ್​ ಹಾಕುವುದರಲ್ಲಿ ಇವರನ್ನು ಮೀರಿಸುವವರು ಯಾರೂ ಇಲ್ಲ. ಇಬ್ಬರೂ ಒಟ್ಟಿಗೆ ಸೇರಿ ಸ್ಟೆಪ್​ ಹಾಕಿದರೆ ಹೇಗಿರುತ್ತದೆ? ಹೀಗೊಂದು ಸದಾವಕಾಶ ಒದಗಿ ಬಂದಿದೆ. ಪುನೀತ್​ ರಾಜ್​ಕುಮಾರ್​ ಹಾಗೂ ಪ್ರಭುದೇವ ಒಟ್ಟಾಗಿ ಹೆಜ್ಜೆ ಹಾಕಿದ್ದಾರೆ. ಈ ಖುಷಿಯ ಕ್ಷಣವನ್ನು ಪುನೀತ್​ ರಾಜ್​ಕುಮಾರ್​ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಡಾರ್ಲಿಂಗ್​ ಕೃಷ್ಣ ಅವರು ‘ಲಕ್ಕಿ ಮ್ಯಾನ್​’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತಮಿಳಿನ ‘ಓಹ್ ಮೈ ಕಡವುಳೆ’ ಸಿನಿಮಾದ ರಿಮೇಕ್​ ಇದು. ಈ ಚಿತ್ರದಲ್ಲಿ ಪುನೀತ್​​ ರಾಜ್​ಕುಮಾರ್​ ಪ್ರಮುಖ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಬರುವ ವಿಶೇಷ ಹಾಡಿನಲ್ಲಿ ಪ್ರಭುದೇವ ಮತ್ತು ಪುನೀತ್​ ರಾಜ್​ಕುಮಾರ್​ ಒಟ್ಟಿಗೆ ಹೆಜ್ಜೆ ಹಾಕುತ್ತಿದ್ದಾರೆ. ಈ ವಿಚಾರ ಕೇಳಿ ಅಭಿಮಾನಿಗಳು ಸಖತ್​ ಥ್ರಿಲ್​ ಆಗಿದ್ದಾರೆ.

ಈ ಸಿನಿಮಾದಲ್ಲಿ ಪ್ರಭುದೇವ ಹೆಜ್ಜೆ ಹಾಕೋಕು ಒಂದು ಕಾರಣ ಇದೆ. ಈ ಸಿನಿಮಾ ನಿರ್ದೇಶನ ಮಾಡುತ್ತಿರುವುದು ನಾಗೇಂದ್ರ ಪ್ರಸಾದ್​. ‘ಮನಸೆಲ್ಲಾ ನೀನೆ’ ಮೊದಲಾದ ಸಿನಿಮಾಗಳಲ್ಲಿ ಅವರು ನಟಿಸಿದ್ದರು. ಇವರು ಕೋರಿಯೋಗ್ರಾಫರ್​ ಕೂಡ ಹೌದು. ಇತ್ತೀಚೆಗೆ ತೆರೆಗೆ ಬಂದ ‘ತಲೈವಿ’ ಸೇರಿ ಸಾಕಷ್ಟು ಸಿನಿಮಾಗಳಿಗೆ ಅವರು ಕೋರಿಯೋಗ್ರಾಫಿ ಮಾಡಿದ್ದಾರೆ. ಈಗ ‘ಲಕ್ಕಿ ಮ್ಯಾನ್​’ ಸಿನಿಮಾ ಮೂಲಕ ಅವರು ನಿರ್ದೇಶಕರಾಗಿ ಬಡ್ತಿ ಪಡೆಯುತ್ತಿದ್ದಾರೆ. ಈ ನಾಗೇಂದ್ರ ಪ್ರಸಾದ್ ಅವರ ಅಣ್ಣನೇ ಪ್ರಭುದೇವ​. ತಮ್ಮನ ಸಿನಿಮಾದಲ್ಲಿ ಅಣ್ಣ ಪ್ರಭುದೇವ ವಿಶೇಷ ಹಾಡಿಗೆ ಹೆಜ್ಜೆ ಹಾಕುತ್ತಿದ್ದಾರೆ.

‘ಲಕ್ಕಿ ಮ್ಯಾನ್’​ ಸಿನಿಮಾದ ಶೂಟಿಂಗ್​ ಮುಗಿದಿದೆ. ಹಾಡಿನ ಶೂಟಿಂಗ್​ ಮಾತ್ರ ಬಾಕಿ ಇದ್ದು ಅದನ್ನೂ ಈಗ ಪೂರ್ಣಗೊಳಿಸಲಾಗಿದೆ. ಸದ್ಯ, ಚಿತ್ರತಂಡ ಪೋಸ್ಟ್​ ಪ್ರೊಡಕ್ಷನ್​ಗಳಿಗೆ ಚಾಲನೆ ನೀಡಿದೆ. ಡಾರ್ಲಿಂಗ್​ ಕೃಷ್ಣ ನಟನೆಯ ‘ಲವ್​ ಮಾಕ್ಟೇಲ್​’ ಸಿನಿಮಾ ಹಿಟ್​ ಆಗಿತ್ತು. ಇದಾದ ನಂತರದಲ್ಲಿ ಅವರು ಹಲವು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ.

ಇನ್ನು, ಪುನೀತ್​ ರಾಜ್​ಕುಮಾರ್​ ‘ಜೇಮ್ಸ್​’ ಹಾಗೂ ‘ದ್ವಿತ್ವ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಎರಡೂ ಸಿನಿಮಾಗಳ ಕೆಲಸಗಳು ಭರದಿಂದ ಸಾಗುತ್ತಿವೆ. ಈ ಚಿತ್ರಗಳ ಬಗ್ಗೆ ದೊಡ್ಡ ಭರವಸೆಯನ್ನು ಅಭಿಮಾನಿಗಳು ಇಟ್ಟುಕೊಂಡಿದ್ದಾರೆ.

ಇದನ್ನೂ ಓದಿ: ಕುರಿಗಾಹಿಗಳ ಜತೆ ಕಂಬಳಿ ಮೇಲೆ ಕುಳಿತು ಮಜ್ಜಿಗೆ ಊಟ ಮಾಡಿದ ಪುನೀತ್​ ರಾಜ್​ಕುಮಾರ್​; ಫೋಟೋ ವೈರಲ್

ಶೂಟಿಂಗ್​ ವೇಳೆ ಎಡವಟ್ಟು ಮಾಡಿಕೊಂಡ ತ್ರಿಶಾ ಕೃಷ್ಣನ್​; ಪುನೀತ್​ ಸಿನಿಮಾ ನಟಿಗೆ ಕಾಡುತ್ತಿದೆ ಬಂಧನ ಭೀತಿ

ಡ್ರ್ಯಾಗನ್ ಬೋಟಿಂಗ್​​: ಮೈಸೂರಿಗೆ ಬರುವವರು ಇದನ್ನು ಮಿಸ್ ಮಾಡ್ಬೇಡಿ
ಡ್ರ್ಯಾಗನ್ ಬೋಟಿಂಗ್​​: ಮೈಸೂರಿಗೆ ಬರುವವರು ಇದನ್ನು ಮಿಸ್ ಮಾಡ್ಬೇಡಿ
ಆಂಧ್ರದ ಶ್ರೀಕಾಕುಳಂನಲ್ಲಿ ರೈಲಿನ ಮೇಲೆ ಹತ್ತಿದ ಯುವಕನ ಹುಚ್ಚಾಟ
ಆಂಧ್ರದ ಶ್ರೀಕಾಕುಳಂನಲ್ಲಿ ರೈಲಿನ ಮೇಲೆ ಹತ್ತಿದ ಯುವಕನ ಹುಚ್ಚಾಟ
ಚಿಕ್ಕಮಗಳೂರು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: ವಿಡಿಯೋ ನೋಡಿ
ಚಿಕ್ಕಮಗಳೂರು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: ವಿಡಿಯೋ ನೋಡಿ
ಕುಡಿದ ಮತ್ತಿನಲ್ಲಿ ಮಗನನ್ನೇ ಕಡಿದ ಅಪ್ಪ, ಛಿದ್ರವಾದ ಕುಟುಂಬ
ಕುಡಿದ ಮತ್ತಿನಲ್ಲಿ ಮಗನನ್ನೇ ಕಡಿದ ಅಪ್ಪ, ಛಿದ್ರವಾದ ಕುಟುಂಬ
ಕೊಪ್ಪಳ ಅಜ್ಜನ ಜಾತ್ರೆ ದ್ರೋಣ್ ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ
ಕೊಪ್ಪಳ ಅಜ್ಜನ ಜಾತ್ರೆ ದ್ರೋಣ್ ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ
ಸಿದ್ದರಾಮಯ್ಯ ಹೊಸ ದಾಖಲೆ: ಬೆಂಬಲಿಗರಿಂದ ನಾಟಿ ಕೋಳಿ ಔತಣ
ಸಿದ್ದರಾಮಯ್ಯ ಹೊಸ ದಾಖಲೆ: ಬೆಂಬಲಿಗರಿಂದ ನಾಟಿ ಕೋಳಿ ಔತಣ
ಆಂಧ್ರದಲ್ಲಿ ಭಾರಿ ಅನಿಲ ಸೋರಿಕೆಯಾಗಿ ಬೆಂಕಿ ದುರಂತ; ಸ್ಥಳೀಯರ ಸ್ಥಳಾಂತರ
ಆಂಧ್ರದಲ್ಲಿ ಭಾರಿ ಅನಿಲ ಸೋರಿಕೆಯಾಗಿ ಬೆಂಕಿ ದುರಂತ; ಸ್ಥಳೀಯರ ಸ್ಥಳಾಂತರ
ಗವಿಸಿದ್ದೇಶ್ವರ ಮಹಾರಥೋತ್ಸವ: ಪುಣ್ಯ ಕ್ಷಣಕ್ಕೆ ಸಾಕ್ಷಿಯಾದ 5 ಲಕ್ಷ ಮಂದಿ
ಗವಿಸಿದ್ದೇಶ್ವರ ಮಹಾರಥೋತ್ಸವ: ಪುಣ್ಯ ಕ್ಷಣಕ್ಕೆ ಸಾಕ್ಷಿಯಾದ 5 ಲಕ್ಷ ಮಂದಿ
ಕೈ ಕೈ ಮಿಲಾಯಿಸಿದ ಶಾಸಕ, ಎಂಎಲ್​ಸಿ: ಹುಮ್ನಾಬಾದ್​​ನಲ್ಲಿ ನಿಷೇಧಾಜ್ಞೆ ಜಾರಿ
ಕೈ ಕೈ ಮಿಲಾಯಿಸಿದ ಶಾಸಕ, ಎಂಎಲ್​ಸಿ: ಹುಮ್ನಾಬಾದ್​​ನಲ್ಲಿ ನಿಷೇಧಾಜ್ಞೆ ಜಾರಿ
ಬ್ಯಾನರ್ ಗಲಾಟೆ: ಜನಾರ್ದನ ರೆಡ್ಡಿ ಕಚೇರಿಗೂ ಬಾಂಬ್ ನಿಷ್ಕ್ರಿಯ ದಳ ದೌಡು
ಬ್ಯಾನರ್ ಗಲಾಟೆ: ಜನಾರ್ದನ ರೆಡ್ಡಿ ಕಚೇರಿಗೂ ಬಾಂಬ್ ನಿಷ್ಕ್ರಿಯ ದಳ ದೌಡು