ಶೂಟಿಂಗ್ ವೇಳೆ ಎಡವಟ್ಟು ಮಾಡಿಕೊಂಡ ತ್ರಿಶಾ ಕೃಷ್ಣನ್; ಪುನೀತ್ ಸಿನಿಮಾ ನಟಿಗೆ ಕಾಡುತ್ತಿದೆ ಬಂಧನ ಭೀತಿ
ಶಿವಲಿಂಗ ಮತ್ತು ನಂದಿ ಮಧ್ಯದಲ್ಲಿ ತ್ರಿಶಾ ನಿಂತಿದ್ದು, ಅವರು ಚಪ್ಪಲ್ಲಿ ಧರಿಸಿರುವುದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗುತ್ತಿದೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಿನಿಮಾ ಶೂಟಿಂಗ್ ವೇಳೆ ನಟ-ನಟಿಯರು ಮಾಡಿಕೊಳ್ಳುವ ಎಡವಟ್ಟು ಅವರನ್ನು ಸಂಕಷ್ಟಕ್ಕೆ ತಳ್ಳುತ್ತದೆ. ಈಗ ದಕ್ಷಿಣ ಭಾರತದ ನಟಿ ತ್ರಿಶಾ ಕೃಷ್ಣನ್ ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಿನಿಮಾ ಸೆಟ್ನಲ್ಲಿ ಅವರು ಮಾಡಿಕೊಂಡ ಎಡವಟ್ಟಿನಿಂದ ಬಂಧನ ಭೀತಿಗೆ ತುತ್ತಾಗಿದ್ದಾರೆ. ಹಿಂದೂ ಸಂಘಟನೆಗಳು ಅವರನ್ನು ಬಂಧಿಸಬೇಕು ಎಂದು ಆಗ್ರಹಿಸುತ್ತಿವೆ.
ಮಣಿರತ್ನಂ ನಿರ್ದೇಶನ ಮಾಡುತ್ತಿರುವ ‘ಪೊನ್ನಿಯಿನ್ ಸೆಲ್ವನ್’ ಸಿನಿಮಾದಲ್ಲಿ ತ್ರಿಶಾ ಮುಖ್ಯಭೂಮಿಕೆ ನಿರ್ವಹಿಸುತ್ತಿದ್ದಾರೆ. ಇದು ತಮಿಳಿನ ಕಾದಂಬರಿ ಆಧಾರಿತ ಸಿನಿಮಾ. ಈ ಚಿತ್ರದ ಶೂಟಿಂಗ್ ಇಂದೋರ್ನ ಐತಿಹಾಸಿಕ ದೇವಸ್ಥಾನದಲ್ಲಿ ನಡೆಯುತ್ತಿದೆ. ಹೀಗಾಗಿ, ಇಡೀ ಚಿತ್ರತಂಡ ಕಳೆದ ಕೆಲ ದಿನಗಳಿಂದ ಅಲ್ಲಿ ಬೀಡುಬಿಟ್ಟಿದೆ. ಈ ಮಧ್ಯೆ, ಚಿತ್ರದ ಸೆಟ್ ದೃಶ್ಯಗಳು ಲೀಕ್ ಆಗಿವೆ. ಶೂಟಿಂಗ್ ಗ್ಯಾಪ್ನಲ್ಲಿ ತ್ರಿಶಾ ಅವರು ಚಪ್ಪಲಿ ಹಾಕಿಕೊಂಡು ದೇವಸ್ಥಾನದಲ್ಲಿ ಸುತ್ತಾಟ ನಡೆಸಿದ್ದಾರೆ. ಶಿವಲಿಂಗ ಮತ್ತು ನಂದಿ ಮಧ್ಯದಲ್ಲಿ ತ್ರಿಶಾ ನಿಂತಿದ್ದು, ಅವರು ಚಪ್ಪಲ್ಲಿ ಧರಿಸಿರುವುದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗುತ್ತಿದೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದೇವಸ್ಥಾನದಲ್ಲಿ ತ್ರಿಶಾ ಚಪ್ಪಲಿ ಧರಿಸಿದ್ದಾರೆ ಎನ್ನುವ ವಿಚಾರ ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಅಲ್ಲದೆ, ಈ ಬಗ್ಗೆ ಅವರು ಆಕ್ರೋಶ ಹೊರ ಹಾಕುತ್ತಿದ್ದಾರೆ. ತ್ರಿಶಾ ಮತ್ತು ಸಿನಿಮಾದ ನಿರ್ದೇಶಕ ಮಣಿರತ್ನಂ ಹಿಂದೂ ದೇವರಿಗೆ ಅವಮಾನ ಮಾಡಿದ್ದಾರೆ. ಅವರ ಬಂಧನ ಆಗಬೇಕು ಎಂದು ಆಗ್ರಹಿಸುತ್ತಿದ್ದಾರೆ.
‘ಪೊನ್ನಿಯನ್ ಸೆಲ್ವಮ್’ ಎರಡು ಪಾರ್ಟ್ಗಳಲ್ಲಿ ಮೂಡಿ ಬರುತ್ತಿದೆ. ಈ ಸಿನಿಮಾದಲ್ಲಿ ಐಶ್ವರ್ಯಾ ರೈ ಬಚ್ಚನ್, ಚಿಯಾನ್ ವಿಕ್ರಮ್, ಕಾರ್ತಿ, ಪ್ರಕಾಶ್ ರಾಜ್ ಸೇರಿ ಸಾಕಷ್ಟು ನಟರು ಇದ್ದಾರೆ. 2022ರಲ್ಲಿ ಇದರ ಮೊದಲ ಪಾರ್ಟ್ ರಿಲೀಸ್ ಆಗುವ ಸಾಧ್ಯತೆ ಇದೆ.
ಪುನೀತ್ ರಾಜ್ಕುಮಾರ್ ನಟನೆಯ ‘ದ್ವಿತ್ವ’ ಸಿನಿಮಾದಲ್ಲಿ ತ್ರಿಶಾ ನಟಿಸುತ್ತಿದ್ದಾರೆ. 2014ರಲ್ಲಿ ತೆರೆಗೆ ಬಂದ ಪುನೀತ್ ನಟನೆಯ ‘ಪವರ್ ***’ ಚಿತ್ರದಲ್ಲಿ ತ್ರಿಶಾ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಇದು ಅವರ ಮೊದಲ ಹಾಗೂ ಕೊನೆಯ ಕನ್ನಡ ಚಿತ್ರ. ಈ ಸಿನಿಮಾ ದೊಡ್ಡಮಟ್ಟದಲ್ಲಿ ಯಶಸ್ಸು ಕಂಡಿತ್ತು. ಇದಾದ ನಂತರದಲ್ಲಿ ಅವರು ಯಾವುದೇ ಕನ್ನಡ ಚಿತ್ರಗಳಲ್ಲಿ ನಟಿಸಿಲ್ಲ. ‘ಪವರ್’ ತೆರೆಕಂಡ ನಂತರದಲ್ಲಿ ತ್ರಿಶಾಗೆ ಬೇರೆ ಭಾಷೆಗಳಲ್ಲಿ ಒಳ್ಳೆಯ ಆಫರ್ ಬರೋಕೆ ಶುರುವಾದವು. ಹೀಗಾಗಿ, ಅವರು ಪರ ಭಾಷೆಯಲ್ಲಿ ಬ್ಯುಸಿಯಾದರು. ಈಗ ಅವರು ಮತ್ತೆ ಕನ್ನಡಕ್ಕೆ ಮರಳುತ್ತಿದ್ದಾರೆ.
ಇದನ್ನೂ ಓದಿ:
‘ಆ ಸಿದ್ದಾರ್ಥ್ ಬದಲು ಈ ಸಿದ್ದಾರ್ಥ್ ಸಾಯಬೇಕಿತ್ತು’ ಎಂದು ದ್ವೇಷಕಾರಿದ ನೆಟ್ಟಿಗರು; ನಟನ ಪ್ರತಿಕ್ರಿಯೆ ಏನು?