ನಟಿ ಸಂಜನಾ ಗಲ್ರಾನಿ ಅವಾಚ್ಯವಾಗಿ ನಿಂದಿಸಿದ್ದಾರೆಂದು ದೂರು ಸಲ್ಲಿಸಿದ ಕ್ಯಾಬ್ ಚಾಲಕ

TV9 Digital Desk

| Edited By: guruganesh bhat

Updated on:Oct 05, 2021 | 6:12 PM

ನಟಿ ಸಂಜನಾ ಗಲ್ರಾನಿ ಇಂದಿರಾನಗರದಿಂದ ಆರ್.ಆರ್.ನಗರಕ್ಕೆ ಹೋಗಬೇಕಿತ್ತು. ಆದರೆ ಅವರು ಕೆಂಗೇರಿಗೆ ಕಾರು ಬುಕ್ ಮಾಡಿದ್ದರು. ಹೀಗಾಗಿ ಲೊಕೇಷನ್ ಬದಲಿಸುವಂತೆ ಮನವಿ ಮಾಡಿದೆ. ಆದರೂ ಲೊಕೇಷನ್ ಬದಲಿಸದೇ ಕಿರಿಕ್ ಮಾಡಿದ್ದಾರೆ ಎಂದು ಕ್ಯಾಬ್ ಚಾಲಕ ಮಣಿ ದೂರು ಸಲ್ಲಿಸಿದ್ದಾರೆ.

ನಟಿ ಸಂಜನಾ ಗಲ್ರಾನಿ ಅವಾಚ್ಯವಾಗಿ ನಿಂದಿಸಿದ್ದಾರೆಂದು ದೂರು ಸಲ್ಲಿಸಿದ ಕ್ಯಾಬ್ ಚಾಲಕ
ಸಂಜನಾ ಗಲ್ರಾನಿ

Follow us on

ಕ್ಯಾಬ್ ಚಾಲಕನೋರ್ವರ ಬಳಿ ನಟಿ ಸಂಜನಾ ಗಲ್ರಾನಿ ಕಿರಿಕ್ ಮಾಡಿಕೊಂಡಿದ್ದಾರೆ. ಕ್ಯಾಬ್ ಚಾಲಕ ಕಾರಿನಲ್ಲಿ ಎಸಿ ಹಾಕದೆ ಕಿರಿಕ್ ಮಾಡಿದ್ದಾರೆ. ಇದರಿಂದ ತನಗೆ ತುಂಬಾ ತೊಂದರೆ ಆಗಿದೆ ಎಂದು ಸಂಜನಾ ಗಲ್ರಾನಿ ಆಕ್ರೋಶ ವ್ಯಕ್ತಪಡಿಸಿದ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಆದರೆ ಕ್ಯಾಬ್ ಚಾಲಕ ಸಹ ಪೊಲೀಸ್ ಠಾಣೆಯಲ್ಲಿ ಸಂಜನಾ ಗಲ್ರಾನಿ ವಿರುದ್ಧ ದೂರು ದಾಖಲಿಸಿದ್ದಾರೆ.

ಆದರೆ ನಟಿ ಸಂಜನಾ ಗಲ್ರಾನಿ ಇಂದಿರಾನಗರದಿಂದ ಆರ್.ಆರ್.ನಗರಕ್ಕೆ ಹೋಗಬೇಕಿತ್ತು. ಅವರು ಕೆಂಗೇರಿಗೆ ಕಾರು ಬುಕ್ ಮಾಡಿದ್ದರು. ಹೀಗಾಗಿ ಲೊಕೇಷನ್ ಬದಲಿಸುವಂತೆ ಮನವಿ ಮಾಡಿದೆ. ಲೊಕೇಷನ್ ಬದಲಿಸದೇ ಕಿರಿಕ್ ಮಾಡಿದ್ದಾರೆ ಎಂದು ಕ್ಯಾಬ್ ಚಾಲಕ ಮಣಿ ಅವರು ಸಹ ದೂರಿದ್ದು ಬೆಂಗಳೂರಿನ ಆರ್.ಆರ್.ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ತನಗೆ ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ಸಹ ಕ್ಯಾಬ್ ಚಾಲಕ ಮಣಿ ಅವರು ಆರೋಪ ಮಾಡಿದ್ದಾರೆ.

ಇದನ್ನೂ ಓದಿ: 

ಸಿದ್ಧಾರ್ಥ್​ ಶುಕ್ಲಾ ಜೊತೆ ಕೆಲಸ ಮಾಡಿದ್ದ ಸಂಜನಾ ಗಲ್ರಾನಿ; ಜೀವನ ಇಷ್ಟೇನಾ ಎಂದ ನಟಿ

ನಂಗೇನೂ ಗೊತ್ತಿಲ್ಲ, ಎಫ್​​ಎಸ್​ಎಲ್​ ವರದಿ ಬಗ್ಗೆ ಮಾಹಿತಿ ಇಲ್ಲ: ಡ್ರಗ್​ ಸೇವನೆ ಬಗ್ಗೆ ಪ್ರತಿಕ್ರಿಯಿಸದ ಸಂಜನಾ ಗಲ್ರಾನಿ

ತಾಜಾ ಸುದ್ದಿ

Related Stories

Most Read Stories

Click on your DTH Provider to Add TV9 Kannada