ಧನಂಜಯ್ ನಟನೆಯ ‘ರತ್ನನ್ ಪ್ರಪಂಚ’ ಬಿಡುಗಡೆಗೆ ಮುಹೂರ್ತ ನಿಗದಿ; ಅಕ್ಟೋಬರ್ 22ಕ್ಕೆ ಈ ಒಟಿಟಿಯಲ್ಲಿ ಚಿತ್ರ ರಿಲೀಸ್
Rathnan Prapancha: ಸ್ಯಾಂಡಲ್ವುಡ್ ನಟ ಧನಂಜಯ್ ರತ್ನಾಕರ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ರತ್ನನ್ ಪ್ರಪಂಚ’ ಚಿತ್ರವು ಅಕ್ಟೋಬರ್ 22ರಂದು ಬಿಡುಗಡೆಯಾಗಲಿದೆ. ಒಟಿಟಿ ಮೂಲಕ ನೇರವಾಗಿ ಚಿತ್ರವು ವೀಕ್ಷಕರನ್ನು ತಲುಪಲಿದೆ.
ಸ್ಯಾಂಡಲ್ವುಡ್ನ ಮುಂಚೂಣಿಯ ನಟರಲ್ಲಿ ಒಬ್ಬರಾಗಿ ಗುರುತಿಸಕೊಳ್ಳುತ್ತಿರುವ ಡಾಲಿ ಧನಂಜಯ ಅವರ ಬಹುನಿರೀಕ್ಷಿತ ‘ರತ್ನನ್ ಪ್ರಪಂಚ’ (Rathnan Prapancha) ಚಿತ್ರದ ಬಿಡುಗಡೆಯ ದಿನಾಂಕ ಘೋಷಣೆಯಾಗಿದೆ. ಅಭಿಮಾನಿಗಳಿಗೆ ಇದರಿಂದ ತುಸು ಅಚ್ಚರಿಯಾಗಿದೆ. ಕಾರಣ, ‘ರತ್ನನ್ ಪ್ರಪಂಚ’ ಅಕ್ಟೋಬರ್ 22ರಂದು ಆಮೆಜಾನ್ ಪ್ರೈಮ್ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಆಮೆಜಾನ್ ಪ್ರೈಮ್ ಹಾಗೂ ಧನಂಜಯ್ ಟ್ವೀಟ್ಗಳನ್ನು ಹಂಚಿಕೊಂಡಿದ್ದಾರೆ. ಆಮೆಜಾನ್ ಪ್ರೈಮ್ ಈ ಕುರಿತು ಟ್ವೀಟ್ ಮಾಡುತ್ತಾ, ‘ಒಂಬತ್ತು ಪಾತ್ರಗಳು, ಒಂದು ಕುತೂಹಲಕರ ಕತೆ’ ಎಂದು ಕ್ಯಾಪ್ಶನ್ ನೀಡಿದೆ.
ಆಮೆಜಾನ್ ಪ್ರೈಮ್ ಹಂಚಿಕೊಂಡಿರುವ ಟ್ವೀಟ್ ಇಲ್ಲಿದೆ:
9 characters and 1 interesting story, we welcome you to explore Mr Rathnakara’s world.
Watch #RathnanPrapanchaOnPrime, Oct 22.@Karthik1423 @Yogigraj @Dhananjayaka @Reba_Monica @therohitpadaki @AJANEESHB @KRG_Studios pic.twitter.com/uRopGkC5ku
— amazon prime video IN (@PrimeVideoIN) October 5, 2021
ಧನಂಜಯ್ ಹಂಚಿಕೊಂಡಿರುವ ಟ್ವೀಟ್ ಇಲ್ಲಿದೆ:
Laughter + twist & turns + romance = Rathnakara’s life.
Watch him tickle your funnybones in #RathnanPrapanchaOnPrime , Oct 22. @PrimeVideoIN@Karthik1423 @Yogigraj @Reba_Monica @therohitpadaki @AJANEESHB @KRG_Studios pic.twitter.com/vZlEAzmwOg
— Dhananjaya (@Dhananjayaka) October 5, 2021
‘ರತ್ನನ್ ಪ್ರಪಂಚ’ದ ನಾಯಕ ನಟ ಧನಂಜಯ್ ಟ್ವೀಟ್ ಹಂಚಿಕೊಳ್ಳುತ್ತಾ, ‘ನಗು+ ತಿರುವು+ ಪ್ರೀತಿ= ರತ್ನನ್ ಪ್ರಪಂಚ’ ಎಂದು ಬರೆದುಕೊಂಡಿದ್ದಾರೆ. ಈಗಾಗಲೇ ರತ್ನನ್ ಪ್ರಪಂಚ ತನ್ನ ಟ್ರೈಲರ್ ಮುಖಾಂತರ ಅಪಾರ ನಿರೀಕ್ಷೆ ಹುಟ್ಟುಹಾಕಿದೆ. ‘ದಯವಿಟ್ಟು ಗಮನಿಸಿ’ ಚಿತ್ರದ ಮುಖಾಂತರ ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ್ದ ರೋಹಿತ್ ಪದಕಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಕನ್ನಡದ ಹಿರಿಯ ನಟಿ ಉಮಾಶ್ರೀ ಈ ಚಿತ್ರದಲ್ಲಿ ಧನಂಜಯ್ ತಾಯಿಯ ಪಾತ್ರವನ್ನು ನಿರ್ವಹಿಸಿದ್ದು, ಟ್ರೈಲರ್ನಲ್ಲಿ ಅವರ ಪಾತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಇದನ್ನೂ ಓದಿ:
SBI PO Recruitment 2021: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ 2056 ಪ್ರೊಬೆಷನರಿ ಹುದ್ದೆಗೆ ಅರ್ಜಿ ಆಹ್ವಾನ
Dhananjay: ಇದು ಡಾಲಿ ಅಲ್ಲ ರತ್ನಾಕರ; ಹೊಸ ಪ್ರಪಂಚದ ಸ್ಯಾಂಪಲ್ ತೋರಿಸಿದ ಧನಂಜಯ್
Published On - 1:39 pm, Tue, 5 October 21