‘ಕ್ಯಾಬ್ ಚಾಲಕ ನನ್ನನ್ನು ಕಿಡ್ನಾಪ್ ಮಾಡ್ತಿದ್ದಾನೆ ಅಂತ ಭಯವಾಯ್ತು’; ಸಂಜನಾ ಗಲ್ರಾನಿ
ನಟಿ ಸಂಜನಾ ಗಲ್ರಾನಿ ತಮಗೆ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ ಎಂದು ಕ್ಯಾಬ್ ಚಾಲಕ ಆರೋಪ ಮಾಡಿದ್ದರು. ಅಲ್ಲದೆ, ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲು ಮಾಡಿದ್ದರು.
ನಟಿ ಸಂಜನಾ ಗಲ್ರಾನಿ ತಮಗೆ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ ಎಂದು ಕ್ಯಾಬ್ ಚಾಲಕ ಆರೋಪ ಮಾಡಿದ್ದರು. ಅಲ್ಲದೆ, ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲು ಮಾಡಿದ್ದರು. ಇದಕ್ಕೆ ಸಂಜನಾ ಪ್ರತಿಕ್ರಿಯೆ ನೀಡಿದ್ದಾರೆ.
‘ನನಗೆ ಶೂಟ್ ಇದ್ದಿದ್ದು ಆರ್.ಆರ್.ನಗರದಲ್ಲಿ. ಅವನು ನನ್ನನ್ನು ಕೆಂಗೇರಿ ಕಡೆ ಕರೆದೊಯ್ಯುತ್ತಿದ್ದ. ಆತ ನನ್ನನ್ನು ಕಿಡ್ನಾಪ್ ಮಾಡ್ತಿದ್ದಾನೆ ಅಂತ ಭಯವಾಯ್ತು. ನನ್ನ ಬಳಿ ಸ್ವಂತ ಕಾರು ಇಲ್ಲ. ಶೂಟಿಂಗ್ ಮಾಡೋಕೆ ಸಿನಿಮಾ ಕೂಡ ಇಲ್ಲ. ಈಗ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದೇನೆ. ಸಾಕ್ಷಿ ಇಲ್ಲದೆ ಇರುವ ಕೆಟ್ಟ ಆರೋಪಗಳು ಬಹಳ ಇವೆ’ ಎಂದಿದ್ದಾರೆ ಸಂಜನಾ.
ಇದನ್ನೂ ಓದಿ: ‘ನನ್ನ ಬಳಿ ಸ್ವಂತ ಕಾರು ಇಲ್ಲ, ಕೈಯಲ್ಲಿ ಸಿನಿಮಾ ಕೂಡ ಇಲ್ಲ’; ಇದು ಸಂಜನಾ ಗಲ್ರಾನಿ ಸದ್ಯದ ಪರಿಸ್ಥಿತಿ
Published on: Oct 06, 2021 03:05 PM
Latest Videos