‘ನನ್ನ ಬಳಿ ಸ್ವಂತ ಕಾರು ಇಲ್ಲ, ಕೈಯಲ್ಲಿ ಸಿನಿಮಾ ಕೂಡ ಇಲ್ಲ’; ಇದು ಸಂಜನಾ ಗಲ್ರಾನಿ ಸದ್ಯದ ಪರಿಸ್ಥಿತಿ

ಈ ಪ್ರಕರಣದ ಬಗ್ಗೆ ಸಂಜನಾ ಗಲ್ರಾನಿ ಮಂಗಳವಾರ (ಅಕ್ಟೋಬರ್​ 05) ಟ್ವೀಟ್​ ಒಂದನ್ನು ಮಾಡಿದ್ದರು. ಈ ವೇಳೆ ಅವರು ಕಾರು ಚಾಲಕನ ವಿರುದ್ಧ ಆರೋಪವನ್ನು ಮಾಡಿದ್ದರು.

‘ನನ್ನ ಬಳಿ ಸ್ವಂತ ಕಾರು ಇಲ್ಲ, ಕೈಯಲ್ಲಿ ಸಿನಿಮಾ ಕೂಡ ಇಲ್ಲ’; ಇದು ಸಂಜನಾ ಗಲ್ರಾನಿ ಸದ್ಯದ ಪರಿಸ್ಥಿತಿ
ಸಂಜನಾ

ನಟಿ ಸಂಜನಾ ಗಲ್ರಾನಿ ತಮಗೆ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ ಎಂದು ಕ್ಯಾಬ್​ ಚಾಲಕ ಆರೋಪ ಮಾಡಿದ್ದರು. ಅಲ್ಲದೆ, ಪೊಲೀಸ್​ ಠಾಣೆಯಲ್ಲಿ ದೂರು ಕೂಡ ದಾಖಲು ಮಾಡಿದ್ದರು. ಇದಕ್ಕೆ ಸಂಜನಾ ಪ್ರತಿಕ್ರಿಯೆ ನೀಡಿದ್ದಾರೆ. ಇದರಲ್ಲಿ ತಮ್ಮದು ಯಾವುದೇ ತಪ್ಪು ಇಲ್ಲ ಎಂದು ಅವರು ಅಲವತ್ತುಕೊಂಡಿದ್ದಾರೆ.

‘ನನಗೆ ಶೂಟ್ ಇದ್ದಿದ್ದು ಆರ್.ಆರ್.ನಗರದಲ್ಲಿ. ಅವನು ನನ್ನನ್ನು ಕೆಂಗೇರಿ ಕಡೆ ಕರೆದೊಯ್ಯುತ್ತಿದ್ದ. ಆತ ನನ್ನನ್ನು ಕಿಡ್ನಾಪ್ ಮಾಡ್ತಿದ್ದಾನೆ ಅಂತ ಭಯವಾಯ್ತು. ನನ್ನ ಬಳಿ ಸ್ವಂತ ಕಾರು ಇಲ್ಲ. ಶೂಟಿಂಗ್ ಮಾಡೋಕೆ ಸಿನಿಮಾ ಕೂಡ ಇಲ್ಲ. ಈಗ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದೇನೆ. ಸಾಕ್ಷಿ ಇಲ್ಲದೆ ಇರುವ ಕೆಟ್ಟ ಆರೋಪಗಳು ಬಹಳ ಇವೆ’ ಎಂದಿದ್ದಾರೆ ಸಂಜನಾ.

‘ಮಹಿಳೆಯರಿಗೆ ಏನಾದ್ರು ತೊಂದರೆಯಾದ್ರೆ, ಅವಳು ಅಲ್ಲಿಗೆ ಯಾಕೆ ಹೋದ್ರು ಅಂತ ಕೇಳ್ತಾರೆ. ಸಮಾಜದಲ್ಲಿ ಹೀಗೆ ಆಗಬಾರದು ಎಂದು ಹೇಳುತ್ತಿದ್ದೇನೆ. ತಪ್ಪು ದಾರಿಯಲ್ಲಿ ಕರೆದುಕೊಂಡು ಹೋದರೆ ಸುಮ್ಮನೆ ಇರೋದಕ್ಕೆ ಆಗುತ್ತ? ಜಿಪಿಎಸ್ ರೂಟ್ ಪ್ರಕಾರ ಅವರು ರಾಂಗ್ ರೂಟ್​ನಲ್ಲಿ ಕರೆದುಕೊಂಡು ಹೋಗಿದ್ದಾರೆ. ನಾನು ದೂರು ಕೊಟ್ಟರೆ ಅವರ ಜೀವನ ಹಾಳಾಗುತ್ತದೆ. ಈಗ ಚಾಲಕನೇ ಪೊಲೀಸ್ ಠಾಣೆಗೆ ಹೋಗಿದ್ದಾನೆ. ನಾನು ಕೆಟ್ಟಮಾತನಾಡಿದೆ ಎಂದು ದೂರು ಕೊಟ್ಟಿದ್ದಾನೆ. ಅವನ ತಾಯಿ, ತಂಗಿಯಾಗಿದ್ರೆ ಅವನು ಹೀಗೆ ಮಾಡುತ್ತಿದ್ದನಾ’ ಎಂದು ಸಂಜನಾ ಪ್ರಶ್ನೆ ಮಾಡಿದ್ದಾರೆ.

‘ಚಾಲಕ ಡಬಲ್​ ಮೀಟರ್​ ಕೇಳಿದ್ದಾನೆ. ಅವನು ನನ್ನನ್ನ ಬ್ಲಾಕ್ ಮೇಲ್ ಮಾಡಿದ್ದಾನೆ. ಈ ಚಾಲಕನ ಮೇಲೆ ಕಠಿಣ ಕ್ರಮ ಕೈಗೊಳ್ಳಿ, ಆದರೆ ಅವರನ್ನ ಕೆಲಸದಿಂದ ತೆಗಿಯಬೇಡಿ ಎಂದು ಹೇಳಿದ್ದೇನೆ. ಅವನಿಗೆ ಸಮಸ್ಯೆ ಆಗಬಾರದು. ನಾನು ಅಪಾಲಜಿ ಲೆಟರ್​ನನ್ನ ಬರೆಸಿಕೊಳ್ಳಿ ಎಂದು ಹೇಳಿದ್ದೇನೆ’ ಎಂದಿದ್ದಾರೆ ಸಂಜನಾ.

ಈ ಪ್ರಕರಣದ ಬಗ್ಗೆ ಸಂಜನಾ ಗಲ್ರಾನಿ ಮಂಗಳವಾರ (ಅಕ್ಟೋಬರ್​ 05) ಟ್ವೀಟ್​ ಒಂದನ್ನು ಮಾಡಿದ್ದರು. ಈ ವೇಳೆ ಅವರು ಕಾರು ಚಾಲಕನ ವಿರುದ್ಧ ಆರೋಪವನ್ನು ಮಾಡಿದ್ದರು. ಇದಾದ ಬೆನ್ನಲ್ಲೇ ಕ್ಯಾಬ್​ ಚಾಲಕ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದರು.

ಇದನ್ನೂ ಓದಿ: ಸಂಜನಾ ಗಲ್ರಾನಿ ಮನೆಯಲ್ಲಿ ಗಣೇಶ ಚತುರ್ಥಿ ಸಂಭ್ರಮ; ಇಲ್ಲಿವೆ ಫೋಟೋಗಳು

ನಟಿ ಸಂಜನಾ ಗಲ್ರಾನಿ ಅವಾಚ್ಯವಾಗಿ ನಿಂದಿಸಿದ್ದಾರೆಂದು ದೂರು ಸಲ್ಲಿಸಿದ ಕ್ಯಾಬ್ ಚಾಲಕ

Read Full Article

Click on your DTH Provider to Add TV9 Kannada