AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Do’s And Don’ts In Share Market: ಷೇರು ಮಾರ್ಕೆಟ್​ನಲ್ಲಿ ಮಾಡುವ ಹಾಗೂ ಮಾಡಬಾರದು ಕೆಲಸಗಳಿವು

TV9 Web
| Updated By: Srinivas Mata

Updated on: Oct 06, 2021 | 5:00 PM

ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಬೇಕು ಅಂತಿದ್ದೀರಾ? ಹಾಗಿದ್ದಲ್ಲಿ ನೀವು ಅನುಸರಿಸಬೇಕಾದ ಹಾಗೂ ಅನುಸರಿಸ ಬಾರದ ನಿಯಮಗಳನ್ನು ಹೂಡಿಕೆ ತಜ್ಞರಾದ ಡಿ.ಜಿ. ಬಾಲಾಜಿ ರಾವ್ ಅವರು ತುಂಬ ಸೊಗಸಾಗಿ ವಿವರಿಸಿದ್ದಾರೆ.

 

ಷೇರು ಮಾರುಕಟ್ಟೆಯಲ್ಲಿ ಹಣ ಹೂಡಬೇಕು ಎಂದಿರುವವರಿಗೆ ಏನು ಮಾಡಬೇಕು ಹಾಗೂ ಏನು ಮಾಡಬಾರದು ಎಂಬುದನ್ನು ಈ ಮೂಲಕ ತಿಳಿಸಲಾಗುವುದು. ಇದನ್ನೇ ಅನುಸರಿಸಿದರೆ ಸ್ಟಾಕ್​ ಮಾರ್ಕೆಟ್​ನಲ್ಲಿ ಯಶಸ್ಸು ಪಡೆಯುವುದಕ್ಕೆ ಸಹಾಯ ಆಗುತ್ತದೆ.

ಮೊದಲ ಅಂಶ:
ಯಾರೆಂದರೆ ಅವರು ಹೇಳಿದರೆಂದು ಷೇರು ಖರೀದಿ ಮಾಡಬಾರದು. ಇಂಥ ಷೇರನ್ನು ಖರೀದಿಸಿ ಎಂದು ಹೇಳಿದ ವ್ಯಕ್ತಿ ಯಾರು ಎಂಬುದನ್ನು ಗಮನಿಸಿ. ಷೇರು ಮಾರುಕಟ್ಟೆಯ ಬಗ್ಗೆ ಆ ವ್ಯಕ್ತಿಯ ಜ್ಞಾನ ಹೇಗಿದೆ ಎಂಬುದನ್ನು ತಿಳಿದುಕೊಂಡು ಮುಂದುವರಿಯಬೇಕು.

ಎರಡನೇ ಅಂಶ:
ಪ್ರತಿ ನಿತ್ಯ ಮಾಧ್ಯಮಗಳನ್ನು ಅನುಸರಿಸಿ. ಅದರಲ್ಲಿ ಬರುವ ಸುದ್ದಿಯನ್ನು ಓದಿ. ಒಂದೆರಡು ಉದಾಹರಣೆಯನ್ನು ಹೇಳ್ತೀನಿ ಕೇಳಿ. ಈಚೆಗೆ ಎರಡು ಬೇರೆ ಕಂಪೆನಿಗಳ (ಕೆಇಸಿ ಇಂಟರ್​ನ್ಯಾಷನಲ್ ಮತ್ತು ಜೆಎಸ್​ಪಿಎಲ್​) ಬಗ್ಗೆ ಮಾಧ್ಯಮಗಳಲ್ಲಿ ಓದಿದೆ. ವಾಣಿಜ್ಯ ವಿಷಯಕ್ಕೆ ಸಂಬಂಧಿಸಿದ ಸುದ್ದಿಯನ್ನು ನಿತ್ಯವೂ ಓದಬೇಕು. ಆಗ ಯಾವುದಾದರೂ ಕಂಪೆನಿಯ ಬೆಳವಣಿಗೆ, ಪ್ರಗತಿ ಬಗ್ಗೆ ಗೊತ್ತಾಗುತ್ತದೆ.

ಮೂರನೇ ಅಂಶ:
ಈ ಕಂಪೆನಿಯ ಷೇರಿನ ಬೆಲೆ ಜಾಸ್ತಿ ಇದೆ ಅಂತ ಖರೀದಿ ಮಾಡಕ್ಕಾಗಲ್ಲ ಅಂತ ಕಡಿಮೆ ಬೆಲೆಯದು ಕೊಳ್ಳುವುದಕ್ಕೆ ಮುಂದಾಗಬೇಡಿ. ಷೇರು ಖರೀದಿಯ ಸಂದರ್ಭದಲ್ಲಿ ಗುಣಮಟ್ಟಕ್ಕೆ ಹೆಚ್ಚಿನ ಮೌಲ್ಯ ನೀಡಿ. ಕಡಿಮೆ ಬೆಲೆಯ ನೂರು ಷೇರು ಖರೀದಿ ಮಾಡುವ ಕಡೆಗೆ ಒಂದೋ ಎರಡನ್ನೋ ತೆಗೆದುಕೊಳ್ಳಿ. ಆದರೆ ಗುಣಮಟ್ಟದ ಷೇರನ್ನೇ ಖರೀದಿಸೆ.

ನಾಲ್ಕನೇ ಅಂಶ:
ಉತ್ತಮ ಷೇರನ್ನು ಖರೀದಿ ಮಾಡಿದ ಮೇಲೆ ಅದರ ಬೆಲೆ ಇಳಿಕೆ ಆದರೂ ಗಾಬರಿ ಆಗದಿರುವ ಮನಸ್ಥಿತಿಯನ್ನು, ಆತ್ಮಸ್ಥೈರ್ಯ ಅಳವಡಿಸಿಕೊಳ್ಳಿ. ನೀವು ಖರೀದಿಸಿದ ಷೇರಿನ ಬೆಲೆ ಕುಸಿದರೆ ಇನ್ನೊಂದಿಷ್ಟು ಕೊಂಡುಕೊಳ್ಳಿ. ಉತ್ತಮ ಕಂಪೆನಿಯ ಷೇರಿನ ಬೆಲೆ ಕೆಳಗೆ ಬಿದ್ದರೆ ಗಾಬರಿ ಆಗದಿರಿ. ಅದು ಮತ್ತೆ ಏರಿಕೆ ಆಗಲೇಬೇಕು. ಆದ್ದರಿಂದ ಧೈರ್ಯವಾಗಿ ಖರೀದಿಸಿ. ಉದಾಹರಣೆಗೆ, ಇನ್ಫೋಸಿಸ್, ಟಿಸಿಎಸ್, ಹಿಂದೂಸ್ತಾನ್​ ಲಿವರ್, ಎಂಆರ್​ಎಫ್.. ಹೀಗೆ ಉತ್ತಮ ಷೇರನ್ನು ಯಾವುದೇ ಬೆಲೆಯಲ್ಲಿ ಕೊಳ್ಳಬಹುದು. ನಿಮ್ಮ ಹತ್ತಿರ ದುಡ್ಡಿದೆ. ಅದನ್ನು ಖರ್ಚು ಮಾಡಬೇಕಾ ಅಥವಾ ಹೂಡಿಕೆ ಮಾಡಬೇಕಾ ಅಂದಾಗ ಹೂಡಿಕೆ ಮಾಡಿ.

ಐದನೇ ಅಂಶ:
ಷೇರು ಮಾರ್ಕೆಟ್​ ಕೆಳಗೆ ಬಿದ್ದು ಹೋಯಿತು ಅಂದಾಗ ಗಾಬರಿ ಆಗಿ, ದೂರ ಉಳಿಯುವವರು ಇರುತ್ತಾರೆ. ಒಬ್ಬ ಮಾರುಕಟ್ಟೆ ವಿಶ್ಲೇಷಕರ ಪ್ರಕಾರ, ಷೇರು ಮಾರುಕಟ್ಟೆಯಲ್ಲಿ ರಕ್ತದೋಕುಳಿ (ಮಹಾ ಕುಸಿತ) ಕಾಣಿಸಿಕೊಂಡಿದೆ ಅಂದರೆ ಅದು ಖರೀದಿಗೆ ಸೂಕ್ತ ಕಾಲ ಎಂದು ಹೇಳಿದ್ದಾರೆ.

(ಹೂಡಿಕೆ ತಜ್ಞ ಡಿ.ಜಿ. ಬಾಲಾಜಿ ರಾವ್)

ಇದನ್ನೂ ಓದಿ: Stock Market Tips: 60 ಸಾವಿರ ಪಾಯಿಂಟ್ಸ್​ ತಲುಪಿದ ನಂತರ ಷೇರು ಮಾರ್ಕೆಟ್​ ಮುಂದೆ ಏನಾಗಬಹುದು?