125 ಸಿಸಿ ಸೆಗ್ಮೆಂಟ್ನಲ್ಲಿ ಪಾರಮ್ಯ ಮೆರೆಯಲು ಟಿವಿಎಸ್ ಸಂಸ್ಥೆ ಜೂಪಿಟರ್ 125 ಸ್ಕೂಟರ್ ಲಾಂಚ್ ಮಾಡಿದೆ
ತಜ್ಞರ ಪ್ರಕಾರ ಹೊಸ ಜೂಪಿಟರ್ 125 ಸಿಸಿ ತನ್ನ ಪ್ರತಿಸ್ಪರ್ಧಿಗಳಿಗಿಂತ ಹೆಚ್ಚಿನ ಫೀಚರ್ಗಳೊಂದಿಗೆ ಗ್ರಾಹಕರಿಗೆ ಲಭ್ಯವಾಗಲಿದೆ. ಹೊಂಡ ಆಕ್ಟೀವಾ ಮತ್ತು ಸುಜುಕಿ ಆಕ್ಸಿಸ್ 125 ಈ ಸೆಗ್ಮೆಂಟ್ ಜನಪ್ರಿಯ ವಾಹನಗಳು.
ಟಿವಿಎಸ್ ಮೋಟಾರು ಕಂಪನಿಯು ತನ್ನ ಹೊಸ ಜೂಪಿಟರ್ 125 ಸಿಸಿ ಸ್ಕೂಟರ್ ಅನ್ನು ಗುರುವಾರದಂದು ಲಾಂಚ್ ಮಾಡಿದೆ. ನಿಮಗೆ ನೆನಪಿರಬಹುದು, ಕೆಲ ದಿನಗಳ ಹಿಂದೆ ತಮಿಳುನಾಡಿನ ಹೊಸೂರಿನಲ್ಲಿ ವಾಹನ ತಯಾರಿಕೆ ಘಟಕ ಹೊಂದಿರುವ ಕಂಪನಿಯು ಒಂದು ಟೀಸರ್ ಅನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ಕಂಡ ಹಾಗೆಯೇ, ಹೊಸ ಜೂಪಿಟರ್ ಸ್ಕೂಟರ್ ಮುಂಭಾಗದಲ್ಲಿ ಎಲ್ಇಡಿ ಡಿಅರ್ಎಲ್ಗಳನ್ನು ಬಳಸಲಾಗಿದೆ. ಹಾಗೆ ನೋಡಿದರೆ, ಕಂಪನಿಯು ತನ್ನ ಹೊಸ ಸ್ಕೂಟರ್ ನ ತಾಂತ್ರಿಕ ವಿವರಗಳನ್ನು ಬಹಿರಂಗಗೊಳಿಸಿಲ್ಲವಾದರೂ ಎನ್ಟ್ರಾಕ್ 125 ವಾಹನದ ಉತ್ಪಾದನೆಯಲ್ಲಿ ಬಳಸಿರುವ ಎಂಜಿನ್ ಅನ್ನೇ ಇದರಲ್ಲೂ ಬಳಸಲಾಗಿದೆ.
ಹೊಸ ಜೂಪಿಟರ್ 125 ಸಿಸಿ ಸ್ಕೂಟರ್ ಲಾಂಚ್ ಮಾಡುವ ಮೂಲಕ 125 ಸಿಸಿ ಸ್ಕೂಟರ್ಗಳ ಸೆಗ್ಮೆಂಟ್ನಲ್ಲಿ ತನ್ನ ಬಲ ಹೆಚ್ಚಿಸಿಕೊಂಡಿದೆ. ಈ ಸೆಗ್ಮೆಂಟ್ ಸ್ಕೂಟರ್ಗಳಿಗೆ ಭಾರತದಲ್ಲಿ ಅತಿಹೆಚ್ಚು ಬೇಡಿಕೆಯಿದೆ. ಸಂಸ್ಥೆಯು ಇತ್ತೀಚಿಗೆ ತನ್ನ ಹೊಸ ರೈಡರ್ 125 ಸಿಸಿ ಮೊಬೈಕ್ ಅನ್ನು ಲಾಂಚ್ ಮಾಡುವ ಬಗ್ಗೆಯೂ ಹೇಳಿಕೆ ನೀಡಿತ್ತು. ಇದರರ್ಥ 125 ಸಿಸಿ ಬೈಕ್ಗಳ ಸೆಗ್ಮೆಂಟ್ನಲ್ಲಿ ಅದು ಪಾರಮ್ಯ ಮೆರೆಯುವ ದೊಡ್ಡ ಇರಾದೆ ಇಟ್ಟುಕೊಂಡಿದೆ.
ತಜ್ಞರ ಪ್ರಕಾರ ಹೊಸ ಜೂಪಿಟರ್ 125 ಸಿಸಿ ತನ್ನ ಪ್ರತಿಸ್ಪರ್ಧಿಗಳಿಗಿಂತ ಹೆಚ್ಚಿನ ಫೀಚರ್ಗಳೊಂದಿಗೆ ಗ್ರಾಹಕರಿಗೆ ಲಭ್ಯವಾಗಲಿದೆ. ಹೊಂಡ ಆಕ್ಟೀವಾ ಮತ್ತು ಸುಜುಕಿ ಆಕ್ಸಿಸ್ 125 ಈ ಸೆಗ್ಮೆಂಟ್ ಜನಪ್ರಿಯ ವಾಹನಗಳು.
ಹಾಗಾದರೆ ಹೊಸ ಜೂಪಿಟರ್ 125 ಸಿಸಿ ಬೆಲೆ ಎಷ್ಟಿರಬಹುದೆಂದು ಊಹಿಸಿರುವಿರಾ? ಬೆಂಗಳೂರಿನಲ್ಲಿ ಸ್ಕೂಟರ್ ನ ಎಕ್ಸ್ ಶೋರೂಮ್ ಬೆಲೆ ರೂ 75,000 ಗಳಿಂದ ರೂ. 81,000 ಆಗಿರಲಿದೆ.