ದೊಡ್ಮನೆ ಮಗಳ ಚಿತ್ರ ನೋಡಿ ಅಣ್ಣಾವ್ರ ಮಕ್ಕಳು ಹೇಳಿದ್ದೇನು? ಒಂದೇ ಫ್ರೇಮ್​ನಲ್ಲಿ ಶಿವಣ್ಣ, ರಾಘಣ್ಣ, ಪುನೀತ್​

ಡಾ. ರಾಜ್​ ಫ್ಯಾಮಿಲಿಯಿಂದ ಬಂದ ಮೊದಲ ಹೀರೋಯಿನ್​ ಎನಿಸಿಕೊಂಡಿರುವ ಧನ್ಯಾ ಅವರ ಮೊದಲ ಚಿತ್ರಕ್ಕೆ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ. ಈ ಚಿತ್ರಕ್ಕೆ ಸೂರಜ್​ ಗೌಡ ನಿರ್ದೇಶನ ಮಾಡಿದ್ದಾರೆ.

ಧನ್ಯಾ ರಾಮ್​ಕುಮಾರ್​ ಮತ್ತು ಸೂರಜ್​ ಗೌಡ ಮುಖ್ಯಭೂಮಿಕೆ ನಿಭಾಯಿಸಿರುವ ‘ನಿನ್ನ ಸನಿಹಕೆ’ ಸಿನಿಮಾ ಇಂದು (ಅ.8) ಬಿಡುಗಡೆ ಆಗಿದೆ. ಅ.7ರ ರಾತ್ರಿ ಚಿತ್ರದ ಪ್ರೀಮಿಯರ್ ಶೋಗೆ ಶಿವರಾಜ್​ಕುಮಾರ್​, ರಾಘವೇಂದ್ರ ರಾಜ್​ಕುಮಾರ್​, ಪುನೀತ್​ ರಾಜ್​ಕುಮಾರ್​, ರಾಮ್​ಕುಮಾರ್​ ಮುಂತಾದವರು ಹಾಜರಿ ಹಾಕಿದ್ದರು. ಡಾ. ರಾಜ್​ ಫ್ಯಾಮಿಲಿಯಿಂದ ಬಂದ ಮೊದಲ ಹೀರೋಯಿನ್​ ಎನಿಸಿಕೊಂಡಿರುವ ಧನ್ಯಾ ಅವರ ಮೊದಲ ಚಿತ್ರಕ್ಕೆ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ. ಈ ಚಿತ್ರಕ್ಕೆ ಸೂರಜ್​ ಗೌಡ ನಿರ್ದೇಶನ ಮಾಡಿದ್ದಾರೆ.

‘ನಟನೆ ಎನ್ನುವುದು ನಮ್ಮ ಕುಟುಂಬದ ರಕ್ತದಲ್ಲೇ ಇದೆ. ಅದು ಎಲ್ಲೂ ಹೋಗುವುದಿಲ್ಲ. ನಾವು ನಿರೀಕ್ಷೆ ಮಾಡಿದ್ದಕ್ಕಿಂತಲೂ ಚೆನ್ನಾಗಿ ಧನ್ಯಾ ನಟನೆ ಮಾಡಿದ್ದಾಳೆ. ಧ್ವನಿ ಏರಿಳಿತ ಚೆನ್ನಾಗಿದೆ. ಸೂರಜ್​ ಗೌಡ ಕೆಲಸ ಅತ್ಯುತ್ತಮವಾಗಿದೆ. ಎಲ್ಲ ಪಾತ್ರಧಾರಿಗಳ ಅಭಿನಯ ಚೆನ್ನಾಗಿದೆ’ ಎಂದು ಶಿವರಾಜ್​ಕುಮಾರ್​ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:

‘ನಿನ್ನ ಸನಿಹಕೆ’ ವಿಮರ್ಶೆ: ಯಶಸ್ಸಿನ ಸನಿಹಕ್ಕೆ ಸೂರಜ್​, ಧನ್ಯಾ; ಇದು ಹೊಸ ತಲೆಮಾರಿನ ಪ್ರೇಮಕಥೆ

‘ನಮ್ಮ ಫ್ಯಾಮಿಲಿ ಅಂತಲ್ಲ.. ಫ್ಯಾಮಿಲಿ ಅಂದ್ರೆ ಚಿತ್ರರಂಗ’: ನಿನ್ನ ಸನಿಹಕೆ ಚಿತ್ರ ನೋಡಿದ ಬಳಿಕ ಪುನೀತ್​ ಮಾತು

Click on your DTH Provider to Add TV9 Kannada