ದೀಪಾವಳಿಗೆ ಪಟಾಕಿ ಸಿಡಿಸಬಾರದು ಎಂಬ ಜಾಹೀರಾತು ಹಿಂಪಡೆಯಲು ಸಿಯೆಟ್ ಕಂಪೆನಿಗೆ ಅನಂತಕುಮಾರ್ ಹೆಗಡೆ ಪತ್ರ

ಸಿಯೆಟ್ ಕಂಪೆನಿಯ ಬಾಲಿವುಡ್ ನಟ ಆಮೀರ್ ಖಾನ್ ನಟಿಸಿರುವ ಜಾಹೀರಾತು ದೀಪಾವಳಿಗೆ ಪಟಾಕಿ ಸಿಡಿಸಬಾರದೆಂದು ಹೇಳಿದೆ. ಈ ಬಗ್ಗೆ ಸಿಯೆಟ್ ಕಂಪನಿಗೆ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಪತ್ರ ಬರೆದಿದ್ದಾರೆ.

ದೀಪಾವಳಿಗೆ ಪಟಾಕಿ ಸಿಡಿಸಬಾರದು ಎಂಬ ಜಾಹೀರಾತು ಹಿಂಪಡೆಯಲು ಸಿಯೆಟ್ ಕಂಪೆನಿಗೆ ಅನಂತಕುಮಾರ್ ಹೆಗಡೆ ಪತ್ರ
ಅನಂತ್​ ಕುಮಾರ್ ಹೆಗಡೆ

ಬೆಂಗಳೂರು: ದೀಪಾವಳಿಗೆ ಪಟಾಕಿ ಸಿಡಿಸಬಾರದೆಂಬ ಜಾಹೀರಾತು ನೀಡಿದ ಹಿನ್ನೆಲೆ ಜಾಹೀರಾತು ಹಿಂಪಡೆಯುವಂತೆ ಸಿಯೆಟ್ ಕಂಪನಿಗೆ ಉತ್ತರ ಕನ್ನಡ ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ಪತ್ರ ಬರೆದಿದ್ದಾರೆ. ಆ ಮೂಲಕ, ಹಿಂದೂಗಳ ಭಾವನೆಗೆ ಧಕ್ಕೆ ಬರದಂತೆ ನೋಡಿಕೊಳ್ಳಲು ಮನವಿ ಮಾಡಿದ್ದಾರೆ. ಸಿಯೆಟ್ ಕಂಪೆನಿಯ ಬಾಲಿವುಡ್ ನಟ ಆಮೀರ್ ಖಾನ್ ನಟಿಸಿರುವ ಜಾಹೀರಾತು ದೀಪಾವಳಿಗೆ ಪಟಾಕಿ ಸಿಡಿಸಬಾರದೆಂದು ಹೇಳಿದೆ. ಈ ಬಗ್ಗೆ ಸಿಯೆಟ್ ಕಂಪನಿಗೆ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಪತ್ರ ಬರೆದಿದ್ದಾರೆ.

ದೀಪಾವಳಿ ಜಾಹೀರಾತಿನಿಂದ ವಿವಾದಕ್ಕೀಡಾದ ಫ್ಯಾಬ್ ​ಇಂಡಿಯಾದಿಂದ ಸ್ಪಷ್ಟನೆ
ಜನಪ್ರಿಯ ವಸ್ತ್ರ ಬ್ರ್ಯಾಂಡ್​ ಫ್ಯಾಬ್​ ಇಂಡಿಯಾ (Fabindia) ಇದೀಗ ಭರ್ಜರಿ ಸುದ್ದಿಯಲ್ಲಿದೆ. ಒಂದೇ ಒಂದು ಜಾಹಿರಾತಿನಿಂದ ಸಿಕ್ಕಾಪಟೆ ಟ್ರೋಲ್​ ಆಗಿ, ಇದೀಗ ಆ ಜಾಹೀರಾತನ್ನೇ ಹಿಂಪಡೆದಿದೆ. ಹಿಂದುಗಳ ಹಬ್ಬ ದೀಪಾವಳಿಗೆ ಉರ್ದು ಲಿಂಕ್​ ಮಾಡಿ, ಜೈಷ್ನ್​ ಎ ರಿವಾಜ್ (Jashn-e-Riwaaz)​ ಎಂದು ಕರೆದಿತ್ತು. ಅಂದರೆ ದೀಪಾವಳಿಯ ಹೊಸ ಬಟ್ಟೆ ಕಲೆಕ್ಷನ್​​ಗೆ ಉರ್ದುವಿನಲ್ಲಿ ಜೈಷ್ನ್​ ಎ ರಿವಾಜ್​ ಎಂದು ಹೆಸರಿಟ್ಟಿತ್ತು. ಆದರೆ ಅದು ಕೆಲವೇ ಕ್ಷಣಗಳಲ್ಲಿ ಸಿಕ್ಕಾಪಟೆ ಆಕ್ರೋಶಕ್ಕೆ ಕಾರಣವಾದ ನಂತರ ತನ್ನ ಟ್ವೀಟ್ ಡಿಲೀಟ್​ ಮಾಡಿ, ಜಾಹೀರಾತನ್ನೇ ಹಿಂಪಡೆದಿದೆ.

ಜಾಹೀರಾತು ಹಿಂಪಡೆದ ಕಂಪನಿ ಇದೀಗ ಒಂದು ಸ್ಪಷ್ಟೀಕರಣ ಬಿಡುಗಡೆ ಮಾಡಿದೆ. ಜೈಷ್ನ್​ ಎ ರಿವಾಜ್​ ಎಂಬುದು ಕಂಪನಿಯು ದೀಪಾವಳಿ ಬಟ್ಟೆ ಕಲೆಕ್ಷನ್​​ಗೆ ಇಟ್ಟಿದ್ದ ಹೆಸರಲ್ಲ. ದೀಪಾವಳಿ ಕಲೆಕ್ಷನ್​ ಝಿಲ್​ ಮಿಲ್​ ಸೆ ದಿವಾಲಿ ಇನ್ನೂ ಬಿಡುಗಡೆಯಾಗಿಲ್ಲ ಎಂದು ಹೇಳಿಕೊಂಡಿದೆ. ಈ ಫ್ಯಾಬ್​ ಇಂಡಿಯಾ ಕಂಪನಿ ಪ್ರತಿ 15ದಿನಗಳಿಗೊಮ್ಮೆ ಹೊಸ ಕಲೆಕ್ಷನ್​ ಬಿಡುಗಡೆ ಮಾಡುತ್ತದೆ ಎಂದೂ ಹೇಳಲಾಗಿದೆ. ಅಂದರೆ ನಿನ್ನೆ ಬಿಡುಗಡೆಯಾಗಿದ್ದು ದೀಪಾವಳಿ ಕಲೆಕ್ಷನ್​ ಆಗಿರಲಿಲ್ಲ ಎಂಬುದು ಕಂಪನಿಯ ಸ್ಪಷ್ಟನೆ.

ಇದನ್ನೂ ಓದಿ: ದೀಪಾವಳಿ ಜಾಹೀರಾತಿನಿಂದ ವಿವಾದಕ್ಕೀಡಾದ ಫ್ಯಾಬ್ ​ಇಂಡಿಯಾದಿಂದ ಸ್ಪಷ್ಟನೆ; ಇದು ದೀಪಾವಳಿ ಕಲೆಕ್ಷನ್​ ಅಲ್ಲವೆಂದ ಕಂಪನಿ !

ಇದನ್ನೂ ಓದಿ: Big Diwali Sale: ಫ್ಲಿಪ್​ಕಾರ್ಟ್​ನಲ್ಲಿ ದೀಪಾವಳಿ ಆಫರ್: ಕೇವಲ 6,499 ರೂ. ಗೆ ಖರೀದಿಸಿ ಈ ಸ್ಮಾರ್ಟ್​ಫೋನ್

Click on your DTH Provider to Add TV9 Kannada