AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Big Diwali Sale: ಫ್ಲಿಪ್​ಕಾರ್ಟ್​ನಲ್ಲಿ ದೀಪಾವಳಿ ಆಫರ್: ಕೇವಲ 6,499 ರೂ. ಗೆ ಖರೀದಿಸಿ ಈ ಸ್ಮಾರ್ಟ್​ಫೋನ್

ಇನ್ಫಿನಿಕ್ಸ್ ಸ್ಮಾರ್ಟ್ 5ಎ ಸ್ಮಾರ್ಟ್‌ಫೋನ್‌ ಫ್ಲಿಪ್‌ಕಾಟ್‌ ದೀಪಾವಳಿ ಬಿಗ್‌ ಸೇಲ್‌ನಲ್ಲಿ ಬಿಗ್‌ ಡಿಸ್ಕೌಂಟ್‌ ಪಡೆದಿದೆ. ಈ ಸ್ಮಾರ್ಟ್‌ಫೋನ್‌ ಫ್ಲಿಪ್‌ಕಾರ್ಟ್‌ ಸೇಲ್‌ನಲ್ಲಿ ಕೇವಲ 6,499 ರೂ.ಗಳಿಗೆ ಲಭ್ಯವಾಗುತ್ತಿದೆ.

Big Diwali Sale: ಫ್ಲಿಪ್​ಕಾರ್ಟ್​ನಲ್ಲಿ ದೀಪಾವಳಿ ಆಫರ್: ಕೇವಲ 6,499 ರೂ. ಗೆ ಖರೀದಿಸಿ ಈ ಸ್ಮಾರ್ಟ್​ಫೋನ್
flipkart diwali sale
Follow us
TV9 Web
| Updated By: Vinay Bhat

Updated on: Oct 17, 2021 | 1:07 PM

ಫ್ಲಿಪ್​ಕಾರ್ಟ್​ನಲ್ಲಿ (Flipkart) ಬಿಗ್‌ ಬಿಲಿಯನ್‌ ಡೇಸ್‌ ಸೇಲ್‌ (Big Billion Days sale) ಆಫರ್‌ ಮಿಸ್‌ ಮಾಡಿಕೊಂಡವರಿಗೆ ಮತ್ತೊಂದು ಬಂಪರ್ ಮೇಳ ಶುರುವಾಗಿದೆ. ದೀಪಾವಳಿ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಲು ಅಕ್ಟೋಬರ್ 17 ರಿಂದ ದೀಪಾವಳಿ ಬಿಗ್‌ ಸೇಲ್‌ ಆಯೋಜಿಸಿದೆ. ಈ ಸೇಲ್‌ ಅಕ್ಟೋಬರ್ 23 ರವರೆಗೆ ಮುಂದುವರಿಯಲಿದೆ. ಈ ಬಿಗ್ ದೀಪಾವಳಿ ಸೇಲ್‌ (Flipkart Big Diwali Sale) ಮೂಲಕ ಮೊಬೈಲ್‌ಗಳು, ಟ್ಯಾಬ್ಲೆಟ್‌ಗಳು, ಸ್ಮಾರ್ಟ್​​ ಟಿವಿಗಳು (Smart TV) ಮತ್ತು ಇತರ ಎಲೆಕ್ಟ್ರಾನಿಕ್ಸ್‌ಗಳಲ್ಲಿ ಕೆಲವು ರೋಮಾಂಚಕಾರಿ ಡೀಲ್‌ಗಳನ್ನು ಪಡೆಯಬಹುದಾಗಿದೆ. ಪ್ರಮುಖವಾಗಿ ಇನ್ಫಿನಿಕ್ಸ್​ನ ಈ ಸ್ಮಾರ್ಟ್​ಫೋನ್ (Infinix Smartphone) ಮೇಲೆ ಭರ್ಜರಿ ಆಫರ್ ನೀಡಲಾಗಿದೆ.

ಇನ್ಫಿನಿಕ್ಸ್ ಹಾಟ್ 10 ಪ್ಲೇ ಸ್ಮಾರ್ಟ್‌ಫೋನ್‌ ಫ್ಲಿಪ್‌ಕಾಟ್‌ ದೀಪಾವಳಿ ಬಿಗ್‌ ಸೇಲ್‌ನಲ್ಲಿ ಬಿಗ್‌ ಡಿಸ್ಕೌಂಟ್‌ ಪಡೆದಿದೆ. 8,299 ರೂ. ಬೆಲೆಗೆ ಬಿಡುಗಡೆ ಆಗಿದ್ದ ಈ ಸ್ಮಾರ್ಟ್‌ಫೋನ್‌ ಫ್ಲಿಪ್‌ಕಾರ್ಟ್‌ ಸೇಲ್‌ನಲ್ಲಿ ಕೇವಲ 7,799 ರೂ. ಗೆ ಲಭ್ಯವಾಗುತ್ತಿದೆ. ಈ ಸ್ಮಾರ್ಟ್‌ಫೋನಿನ 4GB RAM ಮತ್ತು 64 B ರೂಪಾಂತರವು 8,499 ರೂ. ಗಳಿಗೆ ಮಾರಾಟವಾಗುತ್ತಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 6.82-ಇಂಚಿನ HD+ ಡ್ರಾಪ್ ನಾಚ್ ಡಿಸ್‌ಪ್ಲೇ ಹೊಂದಿದೆ. ಇದು ಮೀಡಿಯಾ ಟೆಕ್‌ ಹಿಲಿಯೋ G35 ಪ್ರೊಸೆಸರ್‌ ಅನ್ನು ಹೊಂದಿದೆ. 13MP AI ಡ್ಯುಯಲ್ ರಿಯರ್‌ ಕ್ಯಾಮೆರಾ ಹೊಂದಿದೆ. ಜೊತೆಗೆ ಕ್ವಾಡ್-ಎಲ್ಇಡಿ ಫ್ಲ್ಯಾಷ್, 6000mAh ಬ್ಯಾಟರಿಯನ್ನು ಹೊಂದಿದೆ.

ಇದರ ಜೊತೆಗೆ ಇನ್ಫಿನಿಕ್ಸ್ HOT 10S ಸ್ಮಾರ್ಟ್‌ಫೋನ್‌ ದೀಪಾವಳಿ ಬಿಗ್‌ ಸೇಲ್‌ನಲ್ಲಿ 4GB ರೂಪಾಂತರಕ್ಕೆ 9,499 ರೂ.ಬೆಲೆ ನಿಗಧಿಪಡಿಸಲಾಗಿದೆ. ಜೊತೆಗೆ 6+64 GB ರೂಪಾಂತರವು 10,499 ರೂ.ಬೆಲೆಗೆ ಸೇಲ್‌ ಆಗಲಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 6.82 ಇಂಚಿನ ಹೆಚ್‌ಡಿ + ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್‌ ಅನ್ನು ಹೊಂದಿದೆ. ಇದು ಮಿಡಿಯಾ ಟೆಕ್‌ ಹಿಲಿಯೋ G85 SoC ಪ್ರೊಸೆಸರ್‌ ಅನ್ನು ಒಳಗೊಂಡಿದ್ದು, ಆಂಡ್ರಾಯ್ಡ್ 11 ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48MP ಸೆನ್ಸಾರ್‌ ಹೊಂದಿದೆ. ಇದಲ್ಲದೆ 8MP AI ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ 6000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.

ಇನ್ಫಿನಿಕ್ಸ್ ಸ್ಮಾರ್ಟ್ 5ಎ ಸ್ಮಾರ್ಟ್‌ಫೋನ್‌ ಫ್ಲಿಪ್‌ಕಾರ್ಟ್‌ ದೀಪಾವಳಿ ಬಿಗ್‌ ಸೇಲ್‌ನಲ್ಲಿ ಕೇವಲ 6,499 ರೂ.ಗಳಿಗೆ ಲಭ್ಯವಾಗಲಿದೆ. ಇನ್ನು ಈ ಸ್ಮಾರ್ಟ್‌ಫೋನ್ 6.52 ಇಂಚಿನ ಹೆಚ್‌ಡಿ ಪ್ಲಸ್‌ IPS LCD ಡಿಸ್‌ಪ್ಲೇಯನ್ನು ಪಡೆದಿದೆ. ಇದು ಮೀಡಿಯಾ ಟೆಕ್ ಹೆಲಿಯೊ A20 SoC ಪ್ರೊಸೆಸರ್‌ ಅನ್ನು ಹೊಂದಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 11 ಗೋ ಓಎಸ್‌ ಸಪೋರ್ಟ್‌ ನೀಡಲಾಗಿದೆ. ಹಾಗೆಯೇ ಈ ಫೋನ್ 2GB RAM ಮತ್ತು 32GB ಇಂಟರ್ನಲ್ ಸ್ಟೋರೇಜ್ ಆಯ್ಕೆಯನ್ನು ಹೊಂದಿದೆ. ಅದರೊಂದಿಗೆ ಎಸ್‌ಡಿ ಕಾರ್ಡ್‌ ಮೂಲಕ 256GB ವರೆಗೆ ಬಾಹ್ಯ ಮೆಮೊರಿ ವಿಸ್ತರಿಸುವ ಅವಕಾಶ ಪಡೆದಿದೆ. ಈ ಸ್ಮಾರ್ಟ್‌ಫೋನ್‌ ಡ್ಯುಯೆಲ್‌ ರಿಯರ್‌ ಕ್ಯಾಮೆರಾ ಸೆಟಅಪ್‌ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 8 ಮೆಗಾ ಪಿಕ್ಸಲ್ ಸೆನ್ಸಾರ್‌ ಹೊಂದಿದೆ. ಇದು 5000 mAh ಬ್ಯಾಟರಿ ಸಾಮರ್ಥ್ಯ ಪಡೆದುಕೊಂಡಿದೆ.

OnePlus 9RT: ಭಾರತದಲ್ಲಿ ಕೇವಲ ಬೆಲೆಯಿಂದಲೇ ಸುದ್ದಿಯಾಗುತ್ತಿದೆ ಚೀನಾದಲ್ಲಿ ಧೂಳೆಬ್ಬಿಸಿದ ಈ ಸ್ಮಾರ್ಟ್​ಫೋನ್

Infinix note 11: ಬೆಲೆ ಬಹಿರಂಗ ಪಡಿಸದೆ ಎರಡು ಹೊಸ ಸ್ಮಾರ್ಟ್​ಫೋನ್ ಅನಾವರಣ ಮಾಡಿದ ಇನ್‌ಫಿನಿಕ್ಸ್

(After Big Billion Days sale Flipkart is back with Big Diwali Sale and offering scores of deals on smartphones)

ತಮ್ಮ ಪಕ್ಷದ ಅಧ್ಯಕ್ಷರಿಗೆ ಮಾಲೆ ಹಾಕಿ, ಕಪಾಳಕ್ಕೆ ಬಾರಿಸಿದ ನಾಯಕ
ತಮ್ಮ ಪಕ್ಷದ ಅಧ್ಯಕ್ಷರಿಗೆ ಮಾಲೆ ಹಾಕಿ, ಕಪಾಳಕ್ಕೆ ಬಾರಿಸಿದ ನಾಯಕ
ರಾಜಸ್ಥಾನ ತಂಡದಲ್ಲಿ ಸ್ಥಾನ ಕೊಡಿಸುವುದಾಗಿ ಬೆಳಗಾವಿ ಕ್ರಿಕೆಟರ್​​ಗೆ ವಂಚನೆ
ರಾಜಸ್ಥಾನ ತಂಡದಲ್ಲಿ ಸ್ಥಾನ ಕೊಡಿಸುವುದಾಗಿ ಬೆಳಗಾವಿ ಕ್ರಿಕೆಟರ್​​ಗೆ ವಂಚನೆ
ನನ್ನ ವಯಸ್ಸು 35, ಶಿವಣ್ಣ ಚಿತ್ರರಂಗಕ್ಕೆ ಬಂದೇ 40 ವರ್ಷ ಆಗಿದೆ: ಧ್ರುವ
ನನ್ನ ವಯಸ್ಸು 35, ಶಿವಣ್ಣ ಚಿತ್ರರಂಗಕ್ಕೆ ಬಂದೇ 40 ವರ್ಷ ಆಗಿದೆ: ಧ್ರುವ
ಫೋಟೋ, ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ಜಲಪಾತಗಳ ಬಂಡೆಗಳೇ ಆಗಬೇಕೇ?
ಫೋಟೋ, ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ಜಲಪಾತಗಳ ಬಂಡೆಗಳೇ ಆಗಬೇಕೇ?
ರಾಜ್ಯ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ: ಕಾಗೇರಿ
ರಾಜ್ಯ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ: ಕಾಗೇರಿ
ಅಪಾರ್ಟ್​ಮೆಂಟ್​​ನಲ್ಲಿ ಬೆಂಕಿ ಅವಘಡ; ಮಹಡಿಯಿಂದ ಹಾರಿದ ತಂದೆ, ಮಕ್ಕಳ ಸಾವು
ಅಪಾರ್ಟ್​ಮೆಂಟ್​​ನಲ್ಲಿ ಬೆಂಕಿ ಅವಘಡ; ಮಹಡಿಯಿಂದ ಹಾರಿದ ತಂದೆ, ಮಕ್ಕಳ ಸಾವು
ಅಪ್ಪು ಇದ್ದ ಕಡೆ ನಗುವಿಗೆಲ್ಲಿ ಕೊರತೆ, ಅಪ್ಪು ಹಳೆ ವಿಡಿಯೋ
ಅಪ್ಪು ಇದ್ದ ಕಡೆ ನಗುವಿಗೆಲ್ಲಿ ಕೊರತೆ, ಅಪ್ಪು ಹಳೆ ವಿಡಿಯೋ
ಜಾತಿಗಣತಿಯ ಮರುಸರ್ವೇ ಮಾಡಿಸಲು ಹೈಕಮಾಂಡ್ ಸೂಚಿಸಿದೆ: ಸಿದ್ದರಾಮಯ್ಯ
ಜಾತಿಗಣತಿಯ ಮರುಸರ್ವೇ ಮಾಡಿಸಲು ಹೈಕಮಾಂಡ್ ಸೂಚಿಸಿದೆ: ಸಿದ್ದರಾಮಯ್ಯ
ಶಾಂತಿಯುತವಾಗಿ ಹೋರಾಟ ಮಾಡುವ ವಾಟಾಳ್ ಇವತ್ತು ಭಿನ್ನವಾಗಿ ಕಂಡರು
ಶಾಂತಿಯುತವಾಗಿ ಹೋರಾಟ ಮಾಡುವ ವಾಟಾಳ್ ಇವತ್ತು ಭಿನ್ನವಾಗಿ ಕಂಡರು
ಸಿದ್ದರಾಮಯ್ಯ ಬಚಾವಾಗಲು ಸಾಧ್ಯವೇ ಇಲ್ಲ ಎಂದ ಸ್ನೇಹಮಯಿ ಕೃಷ್ಣ
ಸಿದ್ದರಾಮಯ್ಯ ಬಚಾವಾಗಲು ಸಾಧ್ಯವೇ ಇಲ್ಲ ಎಂದ ಸ್ನೇಹಮಯಿ ಕೃಷ್ಣ