ದೀಪಾವಳಿ ಜಾಹೀರಾತಿನಿಂದ ವಿವಾದಕ್ಕೀಡಾದ ಫ್ಯಾಬ್ ​ಇಂಡಿಯಾದಿಂದ ಸ್ಪಷ್ಟನೆ; ಇದು ದೀಪಾವಳಿ ಕಲೆಕ್ಷನ್​ ಅಲ್ಲವೆಂದ ಕಂಪನಿ !

Fabindia: ಫ್ಯಾಬ್​ ಇಂಡಿಯಾ ಕಂಪನಿ ಪ್ರತಿ 15ದಿನಗಳಿಗೊಮ್ಮೆ ಹೊಸ ಕಲೆಕ್ಷನ್​ ಬಿಡುಗಡೆ ಮಾಡುತ್ತದೆ ಎಂದೂ ಹೇಳಲಾಗಿದೆ. ಅಂದರೆ ನಿನ್ನೆ ಬಿಡುಗಡೆಯಾಗಿದ್ದು ದೀಪಾವಳಿ ಕಲೆಕ್ಷನ್​ ಆಗಿರಲಿಲ್ಲ.

ದೀಪಾವಳಿ ಜಾಹೀರಾತಿನಿಂದ ವಿವಾದಕ್ಕೀಡಾದ ಫ್ಯಾಬ್ ​ಇಂಡಿಯಾದಿಂದ ಸ್ಪಷ್ಟನೆ; ಇದು ದೀಪಾವಳಿ ಕಲೆಕ್ಷನ್​ ಅಲ್ಲವೆಂದ ಕಂಪನಿ !
ಫ್ಯಾಬ್​ ಇಂಡಿಯಾ ಬಿಡುಗಡೆ ಮಾಡಿದ್ದ ಜಾಹೀರಾತು
Follow us
TV9 Web
| Updated By: Lakshmi Hegde

Updated on:Oct 19, 2021 | 2:54 PM

ದೆಹಲಿ: ಜನಪ್ರಿಯ ವಸ್ತ್ರ ಬ್ರ್ಯಾಂಡ್​ ಫ್ಯಾಬ್​ ಇಂಡಿಯಾ (Fabindia) ಇದೀಗ ಭರ್ಜರಿ ಸುದ್ದಿಯಲ್ಲಿದೆ. ಒಂದೇ ಒಂದು ಜಾಹಿರಾತಿನಿಂದ ಸಿಕ್ಕಾಪಟೆ ಟ್ರೋಲ್​ ಆಗಿ, ಇದೀಗ ಆ ಜಾಹೀರಾತನ್ನೇ ಹಿಂಪಡೆದಿದೆ. ಹಿಂದುಗಳ ಹಬ್ಬ ದೀಪಾವಳಿಗೆ ಉರ್ದು ಲಿಂಕ್​ ಮಾಡಿ, ಜೈಷ್ನ್​ ಎ ರಿವಾಜ್ (Jashn-e-Riwaaz)​ ಎಂದು ಕರೆದಿತ್ತು. ಅಂದರೆ ದೀಪಾವಳಿಯ ಹೊಸ ಬಟ್ಟೆ ಕಲೆಕ್ಷನ್​​ಗೆ ಉರ್ದುವಿನಲ್ಲಿ ಜೈಷ್ನ್​ ಎ ರಿವಾಜ್​ ಎಂದು ಹೆಸರಿಟ್ಟಿತ್ತು. ಆದರೆ ಅದು ಕೆಲವೇ ಕ್ಷಣಗಳಲ್ಲಿ ಸಿಕ್ಕಾಪಟೆ ಆಕ್ರೋಶಕ್ಕೆ ಕಾರಣವಾದ ನಂತರ ತನ್ನ ಟ್ವೀಟ್ ಡಿಲೀಟ್​ ಮಾಡಿ, ಜಾಹೀರಾತನ್ನೇ ಹಿಂಪಡೆದಿದೆ. 

ಜಾಹೀರಾತು ಹಿಂಪಡೆದ ಕಂಪನಿ ಇದೀಗ ಒಂದು ಸ್ಪಷ್ಟೀಕರಣ ಬಿಡುಗಡೆ ಮಾಡಿದೆ.  ಜೈಷ್ನ್​ ಎ ರಿವಾಜ್​ ಎಂಬುದು ಕಂಪನಿಯು ದೀಪಾವಳಿ ಬಟ್ಟೆ ಕಲೆಕ್ಷನ್​​ಗೆ ಇಟ್ಟಿದ್ದ ಹೆಸರಲ್ಲ. ದೀಪಾವಳಿ ಕಲೆಕ್ಷನ್​ ಝಿಲ್​ ಮಿಲ್​ ಸೆ ದಿವಾಲಿ ಇನ್ನೂ ಬಿಡುಗಡೆಯಾಗಿಲ್ಲ ಎಂದು ಹೇಳಿಕೊಂಡಿದೆ.  ಈ ಫ್ಯಾಬ್​ ಇಂಡಿಯಾ ಕಂಪನಿ ಪ್ರತಿ 15ದಿನಗಳಿಗೊಮ್ಮೆ ಹೊಸ ಕಲೆಕ್ಷನ್​ ಬಿಡುಗಡೆ ಮಾಡುತ್ತದೆ ಎಂದೂ ಹೇಳಲಾಗಿದೆ. ಅಂದರೆ ನಿನ್ನೆ ಬಿಡುಗಡೆಯಾಗಿದ್ದು ದೀಪಾವಳಿ ಕಲೆಕ್ಷನ್​ ಆಗಿರಲಿಲ್ಲ ಎಂಬುದು ಕಂಪನಿಯ ಸ್ಪಷ್ಟನೆ.

ದೆಹಲಿಯ ಪ್ರಸಿದ್ಧ ವಸ್ತ್ರದ ಬ್ರ್ಯಾಂಡ್​ ಆಗಿರುವ ಫ್ಯಾಬ್​ ಇಂಡಿಯಾ ನಿನ್ನೆ ಈ ಜಾಹಿರಾತು ಬಿಡುಗಡೆ ಮಾಡುತ್ತಿದ್ದಂತೆ ನೆಟ್ಟಿಗರು ಕಿಡಿಕಾರಿದ್ದರು. ದೀಪಾವಳಿಗಾಗಿ ಬಿಡುಗಡೆ ಮಾಡಿದ ಬಟ್ಟೆಯ ಕಲೆಕ್ಷನ್​ಗೆ ಜೈಷ್ನ್​ ಎ ರಿವಾಜ್​ ಎಂದು ಯಾಕೆ ಹೆಸರಿಡಬೇಕು ಎಂಬುದು ಪ್ರಶ್ನೆ. ಇನ್ನು ಸಂಸದ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಕೂಡ ಟ್ವೀಟ್​ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದರು. ದೀಪಾವಳಿಯೆಂಬುದು ಜೈಷ್ನ್​ ಎ ರಿವಾಜ್​ ಅಲ್ಲ. ಹೀಗೆ ಉದ್ದೇಶಪೂರ್ವಕವಾಗಿ ಮಾಡುವ ದುಷ್ಕೃತ್ಯಗಳಿಗಾಗಿ  ಫ್ಯಾಬ್​ ಇಂಡಿಯಾ ಆರ್ಥಿಕ ವೆಚ್ಚ ಎದುರಿಸಬೇಕಾಗುತ್ತದೆ ಎಂದು ಹೇಳಿದ್ದರು. ತೇಜಸ್ವಿ ಸೂರ್ಯನಷ್ಟೇ ಅಲ್ಲದೆ ಇನ್ನೂ ಹಲವರು ವಿರೋಧ ವ್ಯಕ್ತಪಡಿಸಿದ್ದರು.  ಟ್ವಿಟರ್​ನಲ್ಲಿ Boycott Fabindia ಹ್ಯಾಷ್​ಟ್ಯಾಗ್​ ಟ್ರೆಂಡ್​ ಕೂಡ ಆಗಿತ್ತು.

ಇದನ್ನೂ ಓದಿ: ಬಾಂಗ್ಲಾದೇಶಿ ಹಿಂದೂಗಳನ್ನು ರಕ್ಷಿಸಲು ಸಿಎಎಗೆ ತಿದ್ದುಪಡಿ ಮಾಡಿ: ಕಾಂಗ್ರೆಸ್ ನಾಯಕ ಮಿಲಿಂದ್ ದೆವರಾ

ಶಿವಮೊಗ್ಗ ಕೃಷಿ ಕಾಲೇಜು ಉಪನ್ಯಾಸಕ ಶವ ಹೊನ್ನಾಳಿ ತಾಂಡಾ ಕೆರೆಯಲ್ಲಿ ಪತ್ತೆ; ಚಿಂತಾಮಣಿಯಲ್ಲಿ ಮೂವರು ಬಾಲಕರು ಕೆರೆಪಾಲು

Published On - 2:52 pm, Tue, 19 October 21

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ