ಪಾಕಿಸ್ತಾನದಿಂದ ನಮ್ಮ ಸೈನಿಕರು ಸತ್ತಿದ್ದಾರೆ, ನೀವು ಟಿ20 ಆಡುತ್ತೀರಾ?; ಪ್ರಧಾನಿ ಮೋದಿ ವಿರುದ್ಧ ಓವೈಸಿ ವಾಗ್ದಾಳಿ
ICC T20 World Cup 2021: ಕಾಶ್ಮೀರದಲ್ಲಿ ಪಾಕಿಸ್ತಾನ ಭಾರತದ ಜನರ ಜೀವನದ ಜೊತೆಗೆ ಪ್ರತಿ ದಿನವೂ 20-20 ಮ್ಯಾಚ್ ಆಡುತ್ತಿದೆ. ಪಾಕಿಸ್ತಾನದಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ 9 ಭಾರತೀಯ ಸೈನಿಕರು ಮೃತಪಟ್ಟಿದ್ದಾರೆ. ಆದರೆ ಅಕ್ಟೋಬರ್ 24ರಂದು ಭಾರತ ಪಾಕಿಸ್ತಾನದ ವಿರುದ್ಧ ಟ್ವೆಂಟಿ-20 ಆಡುತ್ತಿದೆ ಎಂದು ಓವೈಸಿ ಕಿಡಿ ಕಾರಿದ್ದಾರೆ.
ನವದೆಹಲಿ: ಪಾಕಿಸ್ತಾನದಿಂದಾಗಿ ನಮ್ಮ ಸೈನಿಕರು ಸತ್ತಿದ್ದಾರೆ, ಸಾಯುತ್ತಲೇ ಇದ್ದಾರೆ. ಆದರೆ, ನೀವು ಟಿ-20 ಮ್ಯಾಚ್ ಆಡುತ್ತಿದ್ದೀರಾ? ಕಾಶ್ಮೀರದಲ್ಲಿ ಪಾಕಿಸ್ತಾನ ಭಾರತದ ಜನರ ಜೀವನದ ಜೊತೆಗೆ ಪ್ರತಿ ದಿನವೂ 20-20 ಮ್ಯಾಚ್ ಆಡುತ್ತಿದೆ. ಕಾಶ್ಮೀರದಲ್ಲಿ ಟಾರ್ಗೆಟ್ ಮಾಡಿ ಭಾರತೀಯರನ್ನು ಹತ್ಯೆ ಮಾಡಲಾಗುತ್ತಿದೆ. ಜನರ ಜೀವವನ್ನು ರಕ್ಷಣೆ ಮಾಡುವಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ವಿಫಲವಾಗಿದೆ. ಬಿಹಾರದ ಬಡ ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ. ಹಾಗಾದರೆ ಗುಪ್ತಚರ ಇಲಾಖೆ, ಗೃಹ ಸಚಿವ ಅಮಿತ್ ಶಾ ಏನು ಮಾಡುತ್ತಿದ್ದಾರೆ? ಎಂದು ಎಐಎಂಐಎಂ (All India Majlis-e-Ittehadul Muslimeen) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕಿಡಿ ಕಾರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಇಂಧನ ಬೆಲೆಗಳಲ್ಲಿನ ಏರಿಕೆ ಹಾಗೂ ಲಡಾಖ್‌ನಲ್ಲಿ ನಮ್ಮ ಗಡಿಯೊಳಗೆ ಚೀನಾ ಪಡೆ ನೆಲೆಯೂರಿರುವ ಬಗ್ಗೆ ಯಾವುದೇ ಹೇಳಿಕೆಗಳನ್ನು ನೀಡುವುದಿಲ್ಲ. ಚೀನಾ ವಿರುದ್ಧ ಮಾತನಾಡಲು ನರೇಂದ್ರ ಮೋದಿಗೆ ಬಹಳ ಹೆದರಿಕೆ. ಹೀಗಾಗಿಯೇ ಲಡಾಖ್ ವಿಷಯದ ಬಗ್ಗೆ ಅವರು ಮಾತನಾಡುವುದಿಲ್ಲ ಎಂದು ಅಸಾದುದ್ದೀನ್ ಓವೈಸಿ ಟೀಕಿಸಿದ್ದಾರೆ.
ತೆಲಂಗಾಣದಲ್ಲಿ ನಡೆದ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ಅವರು, ‘ಜಮ್ಮು ಮತ್ತು ಕಾಶ್ಮೀರದಲ್ಲಿ 9 ಭಾರತೀಯ ಸೈನಿಕರು ಮೃತಪಟ್ಟಿದ್ದಾರೆ. ಆದರೆ ಅಕ್ಟೋಬರ್ 24ರಂದು ಭಾರತ ಪಾಕಿಸ್ತಾನದ ವಿರುದ್ಧ ಟ್ವೆಂಟಿ-20 ಆಡುತ್ತಿದೆ’ ಎಂದು ಓವೈಸಿ ವ್ಯಂಗ್ಯವಾಡಿದ್ದಾರೆ.
#WATCH | PM Modi never speaks on 2 things — rise in petrol and diesel prices & China sitting in our territory in Ladakh. PM is afraid of speaking on China. Our 9 soldiers died (in J&K) & on Oct 24 India-Pakistan T20 match will happen: AIMIM chief Asaduddin Owaisi, in Hyderabad pic.twitter.com/Q0AabFZ0BU
— ANI (@ANI) October 19, 2021
ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳ ನಡುವೆ ಅ. 24ರಂದು ಟ್ವೆಂಟಿ-20 ವಿಶ್ವಕಪ್‌ನ ಪಂದ್ಯ ನಡೆಯಲಿದೆ. ಯುಎಇಯಲ್ಲಿ ನಡೆಯುತ್ತಿರುವ ಈ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಪಂದ್ಯ ಇರಲಿದೆ.
ಐಸಿಸಿ ಟಿ-20 ವಿಶ್ವಕಪ್ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ರದ್ದುಗೊಳಿಸಬೇಕು ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಕೂಡ ಅಭಿಪ್ರಾಯ ಪಟ್ಟಿದ್ದರು. ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಹತ್ಯೆಗಳ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧಗಳು ಉತ್ತಮವಾಗಿಲ್ಲದ ಕಾರಣ ಪಂದ್ಯವನ್ನು ಮರುಪರಿಶೀಲಿಸಬೇಕು ಎಂದು ನಾನು ಭಾವಿಸುತ್ತೇನೆ” ಎಂದಿದ್ದರು.
ಇನ್ನು, ಈ ಪಂದ್ಯದ ಬಗ್ಗೆ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ, ಪಾಕಿಸ್ತಾನ ವಿರುದ್ಧದ ನಮ್ಮ ಪಂದ್ಯವನ್ನು ನಾವು ಕೇವಲ ಒಂದು ಆಟದಂತೆ ನೋಡುತ್ತೇವೆ. ಈ ಪಂದ್ಯದ ಬಗ್ಗೆ ಹೆಚ್ಚು ಪ್ರಚಾರ, ಕುತೂಹಲವಿದೆ ಎಂದು ನನಗೆ ತಿಳಿದಿದೆ ಎಂದಿದ್ದರು. 2019ರಲ್ಲಿ ಇಂಗ್ಲೆಂಡಿನಲ್ಲಿ ನಡೆದ ಒಡಿಐ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಎದುರಾಳಿಯಾಗಿ ಆಡಿದ ನಂತರ ಈ ಎರಡು ತಂಡಗಳ ನಡುವೆ ಬೇರೆ ಯಾವುದೇ ಪಂದ್ಯಗಳು ನಡೆದಿರಲಿಲ್ಲ.
ಇದನ್ನೂ ಓದಿ: T20 World Cup 2021: ಕೇವಲ ಒಂದು ಗಂಟೆಯೊಳಗೆ ಭಾರತ-ಪಾಕಿಸ್ತಾನ ಟಿ-20 ವಿಶ್ವಕಪ್ ಪಂದ್ಯದ ಟಿಕೆಟ್ ಸೋಲ್ಡ್ ಔಟ್
India T20 World cup: ಭಾರತ ಟಿ-20 ವಿಶ್ವಕಪ್ ತಂಡದಲ್ಲಿ ದೊಡ್ಡ ಬದಲಾವಣೆ: ಹೊಸದಾಗಿ ಸೇರಲಿದ್ದಾರೆ ಈ ಆಟಗಾರರು?
Published On - 2:48 pm, Tue, 19 October 21