India T20 World cup: ಭಾರತ ಟಿ-20 ವಿಶ್ವಕಪ್ ತಂಡದಲ್ಲಿ ದೊಡ್ಡ ಬದಲಾವಣೆ: ಹೊಸದಾಗಿ ಸೇರಲಿದ್ದಾರೆ ಈ ಆಟಗಾರರು?

India T20 World Cup squad: ಐಸಿಸಿ ಟಿ-20 ವಿಶ್ವಕಪ್​ಗೆ ಈಗ ಪ್ರಕಟವಾಗಿರುವ ಭಾರತ ತಂಡ ಫೈನಲ್ ಎಂದು ಹೇಳಲು ಸಾಧ್ಯವಿಲ್ಲ. ಐಪಿಎಲ್ 2021ರ ನಡುವಿನಲ್ಲಿ ಟೀಮ್ ಇಂಡಿಯಾದಲ್ಲಿ ಬದಲಾವಣೆ ಆಗುವ ಸಾಧ್ಯತೆ ಕೂಡ ಇದೆ.

India T20 World cup: ಭಾರತ ಟಿ-20 ವಿಶ್ವಕಪ್ ತಂಡದಲ್ಲಿ ದೊಡ್ಡ ಬದಲಾವಣೆ: ಹೊಸದಾಗಿ ಸೇರಲಿದ್ದಾರೆ ಈ ಆಟಗಾರರು?
India T20 World cup
Follow us
TV9 Web
| Updated By: Vinay Bhat

Updated on: Sep 28, 2021 | 10:56 AM

ಬಹುನಿರೀಕ್ಷಿತ ಐಸಿಸಿ ಟಿ-20 ವಿಶ್ವಕಪ್ (ICC T20 World cup 2021) ಟೂರ್ನಿಗೆ ಸೆಪ್ಟೆಂಬರ್ ತಿಂಗಳ ಆರಂಭದಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ವಿರಾಟ್‌ ಕೊಹ್ಲಿ (Virat Kohli) ಸಾರಥ್ಯದ 15 ಸದಸ್ಯರ ಭಾರತ ತಂಡವನ್ನು ಪ್ರಕಟಮಾಡಿತ್ತು. ಸಂಭಾವ್ಯ ತಂಡದ ಪಟ್ಟಿಯಲ್ಲಿದ್ದ ಕೆಲವು ಆಟಗಾರರನ್ನು ಕೈಬಿಟ್ಟು ಆಯ್ಕೆ ಸಮಿತಿ ಶಾಕ್ ಕೂಡ ನೀಡಿತ್ತು. ಪ್ರಮುಖವಾಗಿ ಶಿಖರ್ ಧವನ್ (Shikhar Dhawan), ಯುಜ್ವೇಂದ್ರ ಚಾಹಲ್ (Yuzvendra Chahal), ಟಿ. ನಟರಾಜನ್ ಅವರನ್ನು ತಂಡದಿಂದ ಹೊರಗಿಟ್ಟಿದ್ದರೆ, ಶ್ರೇಯಸ್ ಅಯ್ಯರ್, ಶಾರ್ದೂಲ್ ಠಾಕೂರ್, ಮತ್ತು ದೀಪಕ್ ಚಹರ್ ಅವರನ್ನು ಸ್ಟ್ಯಾಂಡ್ ಬೈ ಆಟಗಾರರನ್ನಾಗಿ ಹೆಸರಿಸಿದ್ದು ಅಚ್ಚರಿಗೆ ಕಾರಣವಾಗಿತ್ತು. ಅಲ್ಲದೆ ರವಿಚಂದ್ರನ್ ಅಶ್ವಿನ್ (Ravichandran Ashwin) ಬರೋಬ್ಬರಿ 4 ವರ್ಷಗಳ ಬಳಿಕ ಭಾರತ ಟಿ-20 ತಂಡ ಸೇರಿದ್ದಾರೆ. ಸದ್ಯ ಟೀಮ್ ಇಂಡಿಯಾದ ಟಿ-20 ವಿಶ್ವಕಪ್ ತಂಡದಲ್ಲಿ ಬದಲಾವಣೆ ಆಗುವ ಸಂಭವವಿದೆ.

ಹೌದು, ಈಗ ಪ್ರಕಟವಾಗಿರುವ ತಂಡ ಫೈನಲ್ ಎಂದು ಹೇಳಲು ಸಾಧ್ಯವಿಲ್ಲ, ಭಾರತದ ಈ ತಂಡದಲ್ಲಿ ಬದಲಾವಣೆ ಆಗುವ ಸಾಧ್ಯತೆ ಕೂಡ ಇದೆ. ಯಾಕಂದ್ರೆ ಈಗ ಪ್ರಕಟಿಸಿರುವ ತಂಡದಲ್ಲಿ ಬೇಕಿದ್ದರೆ ಬದಲಾವಣೆ ಮಾಡಲು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಅಕ್ಟೋಬರ್ 10 ರ ವರೆಗೆ ಅವಕಾಶ ನೀಡಿದೆ. ಹೀಗಾಗಿ ಸದ್ಯ ಸಾಗುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ 2021 ಎರಡನೇ ಚರಣದಲ್ಲಿ ಟಿ-20 ವಿಶ್ವಕಪ್​ಗೆ ಆಯ್ಕೆಯಾಗದ ಆಟಗಾರರು ಉತ್ತಮ ಪ್ರದರ್ಶನ ತೋರಿದರೆ ಅವರು ಅವಕಾಶ ಪಡೆಯುವ ಸಾಧ್ಯತೆ ಇದೆ. ಅಂತೆಯೆ ಆಯ್ಕೆಯಾದ ಆಟಗಾರರು ಕಳಪೆ ಆಟವಾಡಿದರೆ ಅಥವಾ ಇಂಜುರಿಗೆ ತುತ್ತಾದರೆ ಅವಕಾಶವಂಚಿತರಿಗೆ ಚಾನ್ಸ್ ಸಿಗಬಹುದು.

ಯುಜ್ವೇಂದ್ರ ಚಹಾಲ್: ಈ ಪೈಕಿ ಹೊಸದಾಗಿ ಸೇರಬಹುದಾದ ಆಟಗಾರರ ಸ್ಥಾನಕ್ಕೆ ಯುಜ್ವೇಂದ್ರ ಚಹಾಲ್ ಹೆಸರು ಜೋರಾಗಿ ಕೇಳಿಬರುತ್ತಿದೆ. ಈ ಬಾರಿಯ ಯುಎಇ ಚರಣದ ಐಪಿಎಲ್​ನಲ್ಲಿ ಚಹಾಲ್ ಬೊಂಬಾಟ್ ಪ್ರದರ್ಶನ ತೋರುತ್ತಿದ್ದಾರೆ. ಜೊತೆಗೆ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಕೂಡ, ಟಿ-20 ವಿಶ್ವಕಪ್ ಭಾರತ ತಂಡಕ್ಕೆ ಯುಜ್ವೇಂದ್ರ ಚಹಾಲ್ ಅವರನ್ನ ಯಾಕೆ ಆಯ್ಕೆ ಮಾಡಿಲ್ಲ ಎಂಬುದಕ್ಕೆ ಕಾರಣವಂತೂ ಗೊತ್ತಾಗಿಲ್ಲ ಎಂದು ಆಯ್ಕೆ ಸಮಿತಿಯನ್ನು ಪ್ರಶ್ನಿಸಿದ್ದಾರೆ. ಮುಂದಿನ ಐಪಿಎಲ್ ಪಂದ್ಯಗಳಲ್ಲಿ ಇವರು ಇದೇರೀತಿ ಪ್ರದರ್ಶನ ನೀಡಿದರೆ ಟಿ-20 ವಿಶ್ವಕಪ್ ತಂಡಕ್ಕೆ ಆಯ್ಕೆ ಆಗುವ ಸಾಧ್ಯತೆ ಇದೆ.

ಹರ್ಷಲ್ ಪಟೇಲ್: ಐಪಿಎಲ್ 2021 ರಲ್ಲಿ ಅತಿ ಹೆಚ್ಚು ವಿಕೆಟ್ ಕಿತ್ತಿದ್ದಲ್ಲದೆ, ಕಳೆದ ಮುಂಬೈ ಇಂಡಿಯನ್ಸ್ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ತೊಟ್ಟಿರುವ ಹರ್ಷಲ್ ಪಟೇಲ್ ಕೂಡ ಟಿ-20 ವಿಶ್ವಕಪ್ ತಂಡದಲ್ಲಿಲ್ಲ. ಹರ್ಯಾಣದವರಾದ ಹರ್ಷಲ್‌ ಪಟೇಲ್‌ ಈ ಬಗ್ಗೆ ಮಾತನಾಡಿದ್ದು, “ನಾನು ಯಾವತ್ತೂ ಯಾವುದಕ್ಕೂ ವಿಷಾದಿಸಿದವನಲ್ಲ. ಆಯ್ಕೆಯ ನಿರ್ಧಾರ ನನ್ನ ಕೈಲಿಲ್ಲ. ಅದು ಕ್ಲಬ್‌ ಕ್ರಿಕೆಟ್‌, ಐಪಿಎಲ್‌, ಹರ್ಯಾಣ ಪರ ಇರಬಹುದು ಅಥವಾ ಅಥವಾ ಮುಂದೊಂದು ದಿನ ದೇಶದ ಪರ ಆಡಲಿಳಿದಾಗಲೂ ಇರ ಬಹುದು” ಎಂದು ಹೇಳಿದ್ದಾರೆ. ಇವರುಕೂಡ ರೇಸ್​ನಲ್ಲಿದ್ದಾರೆ.

ಶಿಖರ್ ಧವನ್: ಶಿಖರ್ ಧವನ್ ಟಿ-20 ವಿಶ್ವಕಪ್​ಗೆ ಆಯ್ಕೆಯಾಗದೆ ಇದ್ದಿದ್ದು ನಿಜಕ್ಕೂ ಶಾಕಿಂಗ್ ಸುದ್ದಿಯಾಗಿತ್ತು. ಭರ್ಜರಿ ಫಾರ್ಮ್​ನಲ್ಲಿರುವ ಇವರು ಈ ಬಾರಿಯ ಐಪಿಎಲ್​ನಲ್ಲಿ ಗರಿಷ್ಠ ರನ್ ಕಲೆಹಾಕಿದ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಹೀಗಾಗಿ ಇವರುಕೂಡ ವಿಶ್ವಕಪ್ ತಂಡಕ್ಕೆ ಸೇರಬಹುದು.

MI vs PBKS, IPL 2021: ಗೆಲ್ಲಲೇ ಬೇಕಾದ ಪಂದ್ಯಕ್ಕೆ ಮುಂಬೈ ತಂಡದಲ್ಲಿ ಬದಲಾವಣೆ ಖಚಿತ: ಯಾವ ಆಟಗಾರ ಹೊಸ ಸೇರ್ಪಡೆ?

Sanju Samson: ಧವನ್ ಹಿಂದಿಕ್ಕಿ ಆರೆಂಜ್ ಕ್ಯಾಪ್ ತೊಟ್ಟ ಸಂಜು ಸ್ಯಾಮ್ಸನ್: ಪರ್ಪಲ್ ಕ್ಯಾಪ್, ಪಾಯಿಂಟ್ ಟೇಬಲ್ ಪಟ್ಟಿ ಇಲ್ಲಿದೆ

(India T20 World cup Who are playing now IPL 2021 still have chances and can be part of the ICC T20 World Cup)

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ