ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ, ಶ್ರೇಷ್ಠ ಬ್ಯಾಟರ್ ಎನ್ನಿಸಿಕೊಂಡಿದ್ದ ಇಂಜಮಾಮ್ ಉಲ್ ಹಕ್ಗೆ ಹೃದಯಾಘಾತ
Inzamam-ul-Haq: ಇಂಜಮಾಮ್ ಉಲ್ ಹಕ್ ಕ್ರಿಕೆಟ್ನಲ್ಲಿ ಶ್ರೇಷ್ಠ ಸಾಧನೆ ಮಾಡಿದವರು. ಬಲಗೈ ಬ್ಯಾಟರ್ ಆಗಿದ್ದರು. ಪಾಕ್ ಕ್ರಿಕೆಟ್ ತಂಡಕ್ಕೆ ಕೋಚ್ ಕೂಡ ಮಾಡಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ, ಶ್ರೇಷ್ಠ ಬ್ಯಾಟರ್ ಇಂಜಮಾಮ್ ಉಲ್ ಹಕ್ (Inzamam-ul-Haq) ಗೆ ಹೃದಯಾಘಾತವಾಗಿದ್ದು, ಲಾಹೋರ್ನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. 51ವರ್ಷದ ಇಂಜಮಾಮ್ ಉಲ್ ಹಕ್ಗೆ ಸದ್ಯ ಆಂಜಿಯೋಪ್ಲ್ಯಾಸ್ಟಿ (Angioplasty) ಮಾಡಲಾಗಿದ್ದು, ಸದ್ಯ ಆರೋಗ್ಯ ಸ್ಥಿರವಾಗಿದೆ ಎಂದು ವರದಿಯಾಗಿದೆ. ಇಂಜಮಾಮ್ ಕಳೆದ ಮೂರು ದಿನಗಳಿಂದಲೂ ಎದೆನೋವಿನಿಂದ ಬಳಲುತ್ತಿದ್ದರು. ಆದರೆ ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಿದೆ ಯಾವುದೇ ದೊಡ್ಡ ಸಮಸ್ಯೆ ಕಂಡಿರಲಿಲ್ಲ. ಆದರೆ ನೋವು ಮಾತ್ರ ಕಡಿಮೆಯಾಗಿರಲಿಲ್ಲ. ಸೋಮವಾರ ಎದೆನೋವು ಜಾಸ್ತಿಯಾದ ಹಿನ್ನೆಲೆಯಲ್ಲಿ ತಪಾಸಣೆ ಮಾಡಿಸಿದಾಗ ಹೃದಯಾಘಾತ ಆಗಿದ್ದು ಗೊತ್ತಾಯಿತು. ಕೂಡಲೇ ಆಸ್ಪತ್ರೆಗೆ ದಾಖಲಿಸಿ ಆಂಜಿಯೋಪ್ಲ್ಯಾಸ್ಟಿ ಮಾಡಲಾಗಿದೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.
ಇಂಜಮಾಮ್ ಉಲ್ ಹಕ್ ಕ್ರಿಕೆಟ್ನಲ್ಲಿ ಶ್ರೇಷ್ಠ ಸಾಧನೆ ಮಾಡಿದವರು. ಬಲಗೈ ಬ್ಯಾಟರ್ ಆಗಿದ್ದರು. ಪಾಕ್ ಕ್ರಿಕೆಟ್ ತಂಡಕ್ಕೆ ಕೋಚ್ ಕೂಡ ಮಾಡಿದ್ದಾರೆ. 1992ರ ವಿಶ್ವಕಪ್ನಲ್ಲಿ ತಮ್ಮ ಅದ್ಭುತ್ ಬ್ಯಾಟಿಂಗ್ನಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆದಿದ್ದಾರೆ. 375 ಏಕದಿನ ಪಂದ್ಯಗಳನ್ನು ಆಡಿದ್ದು, 11,701 ರನ್ ಗಳಿಸಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್ನಲ್ಲಿ ಅತ್ಯಂತ ಹೆಚ್ಚು ರನ್ಗಳಿಸಿರುವ ಪಾಕಿಸ್ತಾನದ ಮೊದಲ ಆಟಗಾರ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಹಾಗೇ, 119 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 8829 ರನ್ ಗಳಿಸಿದ್ದಾರೆ. 2016ರಿಂದ 2019ರವರೆಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB)ಯಲ್ಲಿ ಮುಖ್ಯ ಆಯ್ಕೆಗಾರನಾಗಿಯೂ ಕೆಲಸ ಮಾಡಿದ್ದಾರೆ. ಇನ್ನು ಅಫ್ಘಾನಿಸ್ತಾನ ಕ್ರಿಕೆಟ್ ತಂಡಕ್ಕೂ ಕೋಚಿಂಗ್ ನೀಡಿದ್ದಾರೆ.
ಇಂಜಮಾಮ್ ಉಲ್ ಹಕ್ ಆರೋಗ್ಯ ಚೇತರಿಕೆಗಾಗಿ ಹಲವರು ಪ್ರಾರ್ಥಿಸುತ್ತಿದ್ದಾರೆ. ಭಾರತೀಯ ಕ್ರಿಕೆಟ್ ಕಮಂಟೇಟರ್ ಆಗಿರುವ ಹರ್ಷ ಭೋಗ್ಲೆ ಟ್ವೀಟ್ ಮಾಡಿ, ಇಂಜಮಾಮ್ ಉಲ್ ಹಕ್ ಅವರು ಶೀಘ್ರವೇ ಗುಣಮುಖರಾಗಲೆಂದು ಪ್ರಾರ್ಥಿಸುತ್ತೇನೆ. ಕ್ರಿಕೆಟ್ನಲ್ಲಿ ಅವರು ಇನ್ನೂ ಹಲವು ವರ್ಷಗಳ ಕಾಲ ಮುಂದುವರಿಯಬೇಕು ಎಂದು ಹೇಳಿದ್ದಾರೆ. ಹಾಗೇ, ಪಾಕಿಸ್ತಾನದ ವಿಕೆಟ್ಕೀಪರ್ ಸರ್ಫರಾಜ್ ಅಹ್ಮದ್ ಕೂಡ ಟ್ವೀಟ್ ಮಾಡಿ, ಇಂಜಮಾಮ್ ಅವರ ಆರೋಗ್ಯಕ್ಕಾಗಿ ಅಲ್ಲಾ ಬಳಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
Wishing Inzamam-ul-Haq all the very best, that he recovers completely and remains part of our game for many many years.
— Harsha Bhogle (@bhogleharsha) September 27, 2021
Prayers for @Inzamam08 bhai for speedy recovery In shaa Allah he will be fine ?
— Sarfaraz Ahmed (@SarfarazA_54) September 27, 2021
ಇದನ್ನೂ ಓದಿ: David Warner: ಮೆಗಾ ಹರಾಜಿಗೂ ಮುನ್ನ ಕನ್ನಡಿಗ ಸೇರಿ 3 ಸ್ಟಾರ್ ಆಟಗಾರರನ್ನು ಕೈಬಿಟ್ಟಿತು ಈ ಐಪಿಎಲ್ ಟೀಂ?
ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ವಿರುದ್ಧ ಅಧಿಕಾರ ದುರುಪಯೋಗದ ಆರೋಪ
(Pakistan Former Cricketer Inzamam ul Haq undergoes angioplasty In Lahore)
Published On - 12:16 pm, Tue, 28 September 21