ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್​ ಗುಪ್ತ ವಿರುದ್ಧ ಅಧಿಕಾರ ದುರುಪಯೋಗದ ಆರೋಪ

ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ, ಒಬ್ಬನೇ ಗುತ್ತಿಗೆದಾರರಿಗೆ 15ಕ್ಕೂ ಹೆಚ್ಚು ಬಾರಿ ಹಣವನ್ನು ಬಿಡುಗಡೆ ಮಾಡಿರುವ ಉದಾಹರಣೆಗಳು ಈ ದಾಖಲೆಗಳ ಮೂಲಕ ಸಿಗುತ್ತವೆ ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ರಮೇಶ್ ಎನ್. ಆರ್. ತಿಳಿಸಿದ್ದಾರೆ.

ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್​ ಗುಪ್ತ ವಿರುದ್ಧ ಅಧಿಕಾರ ದುರುಪಯೋಗದ ಆರೋಪ
ಗೌರವ್ ಗುಪ್ತಾ
TV9kannada Web Team

| Edited By: preethi shettigar

Sep 28, 2021 | 12:06 PM

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆಯುಕ್ತರಾಗಿರುವ ಗೌರವ್ ಗುಪ್ತ ರವರು ನಿರಂತರವಾಗಿ ಒಂದಿಲ್ಲೊಂದು ಕಾನೂನುಬಾಹಿರ ಕಾರ್ಯಗಳನ್ನು ಮಾಡುತ್ತಿದ್ದಾರೆ. ಪ್ರಸ್ತುತ ಪಾಲಿಕೆಯ ಸಾವಿರಾರು ಮಂದಿ ಗುತ್ತಿಗೆದಾರರು ಕಳೆದ ಎರಡೂವರೆ ವರ್ಷಗಳಿಂದಲೂ ತಮ್ಮ ಪಾಲಿನ ಹಣ ಬಿಡುಗಡೆಗೆ ಸರದಿ ಸಾಲಿನಲ್ಲಿ ಜ್ಯೇಷ್ಠತೆಯ ನಿಯಮಗಳಿಗೆ ಅನುಗುಣವಾಗಿ ಕಾಯುತ್ತಿದ್ದರೂ ಸಹ, ಅವುಗಳ ಬಗ್ಗೆ ತಲೆ ಕೆಡಿಸಿಕೊಳ್ಳದೇ, ಪಾಲಿಕೆಗೆ ಬರುತ್ತಿರುವ ಹಣವನ್ನು ನೇರವಾಗಿ ಸ್ಪೆಷಲ್​ ರಿಲ್ಸ್​ (Special Release) ಅಥವಾ ಕಮಿಷನರ್​ (Commissioner) ಮಾಡುವ ಮೂಲಕ ಅಧಿಕಾರ ದುರುಪಯೋಗ, ಭ್ರಷ್ಟಾಚಾರ, ವಂಚನೆ ಕಾರ್ಯಗಳನ್ನು ಮಾಡಿರುವುದು ದಾಖಲೆಗಳಿಂದ ಸ್ಪಷ್ಟವಾಗಿದೆ ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ರಮೇಶ್.ಎನ್.ಆರ್ ಆರೋಪಿಸಿದ್ದಾರೆ.

ಮಾನ್ಯ ಮುಖ್ಯ ಆಯುಕ್ತರು ಅವಶ್ಯಕತೆ ಇರುವ ಗುತ್ತಿಗೆದಾರರಿಗೆ- ವೈದ್ಯಕೀಯ ಚಿಕಿತ್ಸೆಗಳಿಗೆ, ಕುಟುಂಬಸ್ಥರ ವಿವಾಹ ಕಾರ್ಯಗಳಿಗೆ, ಗುತ್ತಿಗೆದಾರರ ಅಕಾಲಿಕ ಮರಣವಾದ ಸಂದರ್ಭಗಳಲ್ಲಿ ಮತ್ತು ಗುತ್ತಿಗೆದಾರರ ಆಸ್ತಿಗಳನ್ನು ಸಾಲ ನೀಡಿರುವ ಬ್ಯಾಂಕ್ ಸಿಬ್ಬಂದಿಯವರು ಮುಟ್ಟುಗೋಲು ಹಾಕಿಕೊಳ್ಳುವ ನೋಟಿಸ್​ಗಳು ಜಾರಿ ಮಾಡಿದ್ದಂತಹ ಸಂದರ್ಭಗಳಲ್ಲಿ ಮಾತ್ರವೇ ಸ್ಪೆಷಲ್​ ರಿಲ್ಸ್​ ಎಂಬ ಹೆಸರಿನಲ್ಲಿ ಗುತ್ತಿಗೆದಾರರಿಗೆ ಅವಶ್ಯಕತೆ ಇರುವಷ್ಟು ಹಣವನ್ನು ಬಿಡುಗಡೆ ಮಾಡಲು ಅವಕಾಶವಿರುತ್ತದೆ. ಆದರೆ ಈ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ, ಒಬ್ಬನೇ ಗುತ್ತಿಗೆದಾರರಿಗೆ 15ಕ್ಕೂ ಹೆಚ್ಚು ಬಾರಿ ಹಣವನ್ನು ಬಿಡುಗಡೆ ಮಾಡಿರುವ ಉದಾಹರಣೆಗಳು ಈ ದಾಖಲೆಗಳ ಮೂಲಕ ಸಿಗುತ್ತವೆ ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ರಮೇಶ್.ಎನ್.ಆರ್ ತಿಳಿಸಿದ್ದಾರೆ.

ಉದಾಹರಣೆಗೆ:- ಎನ್. ಆರ್. ಸತೀಶ್ ಅಥವಾ ನಾಗಸಂದ್ರ ರಾಮ ರಾವ್ ಸತೀಶ್, M/s Zonta Infratech pvt. Ltd., Sri Vinayaka Electricals, Sri Shanmukha Engineers, ಎನ್. ಎಂ. ಕೃಷ್ಣಮೂರ್ತಿ, ಅರುಣಾ ಗೋಪಾಲ ರೆಡ್ಡಿ, M/s Shanmukha Engineers ಸುಬ್ಬಯ್ಯ, ಹೀಗೆ ಹಲವಾರು ಮಂದಿ ಹಿರಿತನವಿಲ್ಲದ ಗುತ್ತಿಗೆದಾರರಿಗೆ ನಿಯಮ ಬಾಹಿರವಾಗಿ ಜ್ಯೇಷ್ಠತೆ ನಿಯಮಗಳನ್ನು ಗಾಳಿಗೆ ತೂರಿ, ಸುಮಾರು 69 ಕೋಟಿ ರೂಪಾಯಿಗಳಷ್ಟು ಹಣವನ್ನು ಕೇವಲ ಕಳೆದ ಮೂರೂವರೆ ತಿಂಗಳ ಅವಧಿಯಲ್ಲಿ ಬಿಡುಗಡೆ ಮಾಡಿದ್ದಾರೆ ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ರಮೇಶ್.ಎನ್.ಆರ್ ಹೇಳಿದ್ದಾರೆ.

ಕೋಟ್ಯಾಂತರ ರೂಪಾಯಿ ಭ್ರಷ್ಟಾಚಾರವನ್ನು ಕಿಕ್ ಬ್ಯಾಕ್ ಪಡೆಯುವುದರ ಮೂಲಕ ಮಾಡಿರುವುದು ಅತ್ಯಂತ ಸ್ಪಷ್ಟವಾಗಿರುವ ಹಿನ್ನೆಲೆಯಲ್ಲಿ, ಮುಖ್ಯ ಆಯುಕ್ತರಾದ ಗೌರವ್ ಗುಪ್ತ ರವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಮತ್ತು ಬಿಎಂಟಿಎಫ್ (BMTF) ಅಧೀಕ್ಷಕರ ಕಚೇರಿಯಲ್ಲಿ ಅಧಿಕಾರ ದುರುಪಯೋಗ, ವಂಚನೆ, ಭ್ರಷ್ಟಾಚಾರ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ರಮೇಶ್.ಎನ್.ಆರ್ ಹೇಳಿದ್ದಾರೆ.

ಅಲ್ಲದೇ, ಮುಖ್ಯಮಂತ್ರಿಗಳಿಗೆ ಈ ಸಂಬಂಧ ಸಂಪೂರ್ಣ ದಾಖಲೆಗಳ ಸಹಿತ ದೂರನ್ನು ನೀಡಿದ್ದು, ಕೂಡಲೇ ಗೌರವ್ ಗುಪ್ತ ರವರ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಹಾಗೂ ಗೌರವ್ ಗುಪ್ತ ರವರನ್ನು ಪಾಲಿಕೆಯ ಮುಖ್ಯ ಆಯುಕ್ತರ ಸ್ಥಾನದಿಂದ ಬದಲಿಸುವಂತೆ ಆಗ್ರಹಿಸಲಾಗಿದೆ ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ರಮೇಶ್.ಎನ್.ಆರ್ ತಿಳಿಸಿದ್ದಾರೆ.

ಇದನ್ನೂ ಓದಿ:

ಮನೆ ನಿರ್ಮಾಣಕ್ಕೆ ಅಕ್ರಮ ಮರಳು ಸಾಗಾಟ; ಶಾಸಕ ಎಂ.ಪಿ.ಕುಮಾರಸ್ವಾಮಿ ವಿರುದ್ಧ ಗಂಭೀರ ಆರೋಪ

ವಿಶೇಷ ಚೇತನರಿಗೆ ಸೈಟ್ ಸ್ವಾಧೀನ ನೀಡದ ಆರೋಪ; ಬಿಬಿಎಂಪಿ ವಿರುದ್ಧ ಹೈಕೋರ್ಟ್ ವಿಭಾಗೀಯ ಪೀಠ ಅಸಮಾಧಾನ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada