T20 World Cup 2021: ಕೇವಲ ಒಂದು ಗಂಟೆಯೊಳಗೆ ಭಾರತ-ಪಾಕಿಸ್ತಾನ ಟಿ-20 ವಿಶ್ವಕಪ್ ಪಂದ್ಯದ ಟಿಕೆಟ್ ಸೋಲ್ಡ್ ಔಟ್

TV9 Digital Desk

|

Updated on:Oct 05, 2021 | 9:10 AM

India vs Pakistan: ಐಸಿಸಿ ಟಿ-20 ವಿಶ್ವಕಪ್ 2021 ರಲ್ಲಿ ಅಕ್ಟೋಬರ್​ 24 ರಂದು ಕ್ರಿಕೆಟ್ ಜಗತ್ತಿನ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವೆ​ ಮುಖಾಮುಖಿಯಾಗಿವೆ. ಈ ಪಂದ್ಯಕ್ಕೆ ಟಿಕೆಟ್ ಮಾರಾಟ ಆರಂಭಿಸಿದ ಕೇವಲ 1 ಗಂಟೆಯ ಒಳಗಾಗಿ ಎಲ್ಲವೂ ಸೋಲ್ಡ್​ ಔಟ್ ಆಗಿವೆ.

T20 World Cup 2021: ಕೇವಲ ಒಂದು ಗಂಟೆಯೊಳಗೆ ಭಾರತ-ಪಾಕಿಸ್ತಾನ ಟಿ-20 ವಿಶ್ವಕಪ್ ಪಂದ್ಯದ ಟಿಕೆಟ್ ಸೋಲ್ಡ್ ಔಟ್
India vs Pakistan T20 World Cup

Follow us on

ಯುಎಇ ಮತ್ತು ಒಮಾನ್​​ನಲ್ಲಿ (UAE-Oman) ಇದೇ ಅಕ್ಟೋಬರ್ 17 ರಿಂದ ಬಹುನಿರೀಕ್ಷಿತ ಐಸಿಸಿ ಟಿ-20 ವಿಶ್ವಕಪ್ (ICC T20 World Cup 2021) ಟೂರ್ನಿಗೆ ಚಾಲನೆ ಸಿಗಲಿದೆ. ಈಗಾಗಲೇ ಇದಕ್ಕಾಗಿ ಭರ್ಜರಿ ಸಿದ್ಧತೆಗಳು ನಡೆಯುತ್ತಿದ್ದು, ಶೇ. 70ರಷ್ಟು ಸಾಮರ್ಥ್ಯದೊಂದಿಗೆ ಪಂದ್ಯ ವೀಕ್ಷಣೆ ಮಾಡಲು ಅವಕಾಶ ಸಹ ನೀಡಲಾಗಿದೆ. ಹೀಗಾಗಿ ಐಸಿಸಿ ಟಿ-20 ವಿಶ್ವಕಪ್ ಟಿಕೆಟ್‌ಗಳ (ICC T20 World Cup 2021 Ticket) ಮಾರಾಟ ಕೂಡ ಆರಂಭಿಸಿದೆ. ಈ ಮಾಹಿತಿಯನ್ನು ಹಂಚಿಕೊಂಡಿರುವ ಐಸಿಸಿ ಯುಎಇ ಮತ್ತು ಒಮಾನ್‌ನಲ್ಲಿ ನಡೆಯಲಿರುವ ಟಿ-20 ವಿಶ್ವಕಪ್‌ಗಾಗಿ 70% ಪ್ರೇಕ್ಷಕರನ್ನು ಕ್ರೀಡಾಂಗಣದಲ್ಲಿ ಅನುಮತಿಸಲಾಗುವುದು. ಇದರೊಂದಿಗೆ ಆನ್‌ಲೈನ್ ಟಿಕೆಟ್‌ಗಳ ಮಾರಾಟವನ್ನು ಆರಂಭಿಸಲಾಗಿದೆ ಎಂದು ಹೇಳಿದೆ. ಹೀಗೆ ಹೇಳಿದ್ದೇ ತಂಡ ಭಾರತ ಹಾಗೂ ಪಾಕಿಸ್ತಾನ (India vs Pakistan) ನಡುವಣ ಪಂದ್ಯದ ಟಿಕೆಟ್ ಸೋಲ್ಡ್ ಔಟ್ ಆಗಿದೆ.

ಹೌದು, ಅಕ್ಟೋಬರ್​ 24 ರಂದು ಕ್ರಿಕೆಟ್ ಜಗತ್ತಿನ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವೆ​ ಮುಖಾಮುಖಿಯಾಗಿವೆ. ಈ ಪಂದ್ಯ ವೀಕ್ಷಣೆ ಮಾಡಲು ಎಲ್ಲರೂ ಕಾತುರರಾಗಿದ್ದು, ಟಿಕೆಟ್ ಮಾರಾಟ ಆರಂಭಿಸಿದ ಕೇವಲ 1 ಗಂಟೆಯ ಒಳಗಾಗಿ ಎಲ್ಲವೂ ಸೋಲ್ಡ್​ ಔಟ್ ಆಗಿವೆ. ಇದರ ಮಧ್ಯೆ ಅನೇಕರು ಟಿಕೆಟ್ ಖರೀದಿ ಮಾಡಲು ಸಾಧ್ಯವಾಗದೇ ನಿರಾಸೆಗೊಳಗಾಗಿದ್ದಾರೆ.

ದುಬೈನ ಕ್ರಿಕೆಟ್​​ ಸ್ಟೇಡಿಯಂನಲ್ಲಿ ಪಂದ್ಯ ಆಯೋಜನೆಗೊಂಡಿದ್ದು, ಜನರಲ್​, ಜನರಲ್​ ಈಸ್ಟ್​, ಪ್ರೀಮಿಯಂ, ಪೆವಿಲಿಯನ್​ ಈಸ್ಟ್​ ಮತ್ತು ಪ್ಲಾಟಿನಂ ಸೇರಿದಂತೆ ಎಲ್ಲ ವಿಭಾಗದ ಟಿಕೆಟ್​ಗಳು ಸೋಲ್ಡ್​ ಆಗಿದ್ದು, ಯಾವುದೇ ಟಿಕೆಟ್​​ ವೆಬ್​ಸೈಟ್​ನಲ್ಲಿ ಲಭ್ಯವಿಲ್ಲ ಎಂದು ಯುಎಇ ತಿಳಿಸಿದೆ. ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಟಿಕೆಟ್ ಬಿಕ್ಷೆ ಕೇಳಿಕೊಂಡು ಪೋಸ್ಟ್ ಹಾಕಿದ ನಿದರ್ಶನಗಳಿವೆ. ಯಾರ ಬಳಿಯಾದರೂ ಭಾರತ ಪಾಕಿಸ್ತಾನ ಪಂದ್ಯದ ಟಿಕೆಟ್ ಇದ್ದು ಮಾರಾಟ ಮಾಡಲು ಬಯಸಿದರೆ ದಯವಿಟ್ಟು ತಿಳಿಸಿ ಎಂಬಂಥ ಮನವಿಗಳು ಸೋಷಿಯಲ್ ಮೀಡಿಯಾದಲ್ಲಿ ಕಾಣಸಿಕ್ಕಿವೆ.

ಸದ್ಯ ಯುಎಇನಲ್ಲಿ ಇಂಡಿಯನ್​ ಪ್ರೀಮಿಯರ್ ಲೀಗ್ ಟೂರ್ನಿ ನಡೆಯುತ್ತಿದ್ದು, ಇದು ಮುಕ್ತಾಯಗೊಳ್ಳುತ್ತಿದ್ದಂತೆ ಐಸಿಸಿ ಟಿ-20 ವಿಶ್ವಕಪ್​ ಟೂರ್ನಮೆಂಟ್​ ಆರಂಭಗೊಳ್ಳಲಿದೆ. ಇನ್ನೂ ಒಮಾನ್‌ನಲ್ಲಿ ನಡೆಯಲಿರುವ ಟಿ-20 ವಿಶ್ವಕಪ್‌ ಪ್ರಾಥಮಿಕ ಸುತ್ತಿನ ಪಂದ್ಯಗಳಿಗೆ 3 ಸಾವಿರದಷ್ಟು ವೀಕ್ಷಕರಿಗೆ ಅವಕಾಶ ನೀಡಲಾಗುವುದು ಎಂದು ಐಸಿಸಿ ತಿಳಿಸಿದೆ. ಅಲ್ಲೀಗ ಶಹೀನ್‌ ಚಂಡಮಾರುತ ಬೀಸುತ್ತಿದ್ದು, ಸ್ಟೇಡಿಯಂಗಳಿಗೂ ಸಾಕಷ್ಟು ಹಾನಿ ಉಂಟು ಮಾಡಿದ ಬಗ್ಗೆ ವರದಿಯಾಗಿದೆ. ಒಮಾನ್‌ ಪ್ರವೇಶಿಸುವ ಹಾಗೂ ಇಲ್ಲಿಂದ ತೆರಳುವ ವಿಮಾನ ಸಂಚಾರದಲ್ಲಿ ಭಾರೀ ವ್ಯತ್ಯಯವಾಗಿದೆ.

ಅಕ್ಟೋಬರ್ 17ರಿಂದ ಐಸಿಸಿ ಟಿ20 ವಿಶ್ವಕಪ್ ಪ್ರಾರಂಭವಾಗುತ್ತದೆ. ಮೊದಲ ಸುತ್ತಿನ ಪಂದ್ಯಾವಳಿ ಹಾಗೂ ಸೂಪರ್-12 ಪಂದ್ಯಾವಳಿ ನಡೆಯುತ್ತವೆ. ಟಿ20 ಕ್ರಿಕೆಟ್​ನ ಟಾಪ್-8 ತಂಡಗಳು ನೇರವಾಗಿ ಸೂಪರ್-12 ಹಂತಕ್ಕೆ ಅರ್ಹತೆ ಪಡೆದಿವೆ. ಮೊದಲ ಸುತ್ತಿನಲ್ಲಿ ಎಂಟು ತಂಡಗಳು ಎರಡು ಗುಂಪುಗಳಾಗಿ ಸ್ಪರ್ಧಿಸಲಿದ್ದು, ಅದರಲ್ಲಿ ನಾಲ್ಕು ತಂಡಗಳು ಸೂಪರ್-12 ಹಂತಕ್ಕೆ ಪ್ರವೇಶ ಪಡೆಯುತ್ತವೆ. ಸೂಪರ್-12 ಸುತ್ತಿನಲ್ಲಿ ಮೊದಲೇ ಇದ್ದ 8 ತಂಡಗಳು ಸೇರಿ ಒಟ್ಟು 12 ತಂಡಗಳು ಸೆಣಸುತ್ತವೆ. ಅಲ್ಲಿಯೂ ಎರಡು ಗುಂಪುಗಳಾಗಿ ವಿಭಜಿಸಲಾಗಿದೆ. ಅಕ್ಟೋಬರ್ 23ರಿಂದ ಸೂಪರ್-12 ಹಂತದ ಪಂದ್ಯಗಳು ನಡೆಯುತ್ತವೆ.

IPL 2021 MI vs RR: ಐಪಿಎಲ್​ನಲ್ಲಿಂದು ರಾಜಸ್ಥಾನ್-ಮುಂಬೈ ನಡುವೆ ರೋಚಕ ಕದನ: ಉಭಯ ತಂಡಗಳಿಗೆ ಗೆದ್ದರಷ್ಟೇ ಉಳಿಗಾಲ

(ICC T20 World Cup 2021 The tickets of India vs Pakistan encounter has been sold out within hours)

ತಾಜಾ ಸುದ್ದಿ

Related Stories

Click on your DTH Provider to Add TV9 Kannada