IPL 2021, Purple Cap: ಆರ್​ಸಿಬಿ ಆಟಗಾರನ ಸ್ಥಾನಕ್ಕೆ ಬಂತು ಕುತ್ತು: ಪರ್ಪಲ್ ಕ್ಯಾಪ್​ಗಾಗಿ ಹರ್ಷಲ್-ಆವೇಶ್ ನಡುವೆ ಪೈಪೋಟಿ

TV9 Digital Desk

| Edited By: Vinay Bhat

Updated on: Oct 05, 2021 | 9:40 AM

ಐಪಿಎಲ್ 2021 ರಲ್ಲಿ ಅತಿ ಹೆಚ್ಚು ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ತೊಟ್ಟಿರುವ ಆರ್​ಸಿಬಿ ತಂಡದ ಬೌಲರ್ ಹರ್ಷಲ್ ಪಟೇಲ್ ಸ್ಥಾನಕ್ಕೆ ಕುತ್ತುಬಂದಿದೆ. ಪಟೇಲ್ ಈವರೆಗೆ ಒಟ್ಟು 12 ಪಂದ್ಯಗಳಲ್ಲಿ 26 ವಿಕೆಟ್ ಕಬಳಿಸಿದ್ದಾರೆ.

IPL 2021, Purple Cap: ಆರ್​ಸಿಬಿ ಆಟಗಾರನ ಸ್ಥಾನಕ್ಕೆ ಬಂತು ಕುತ್ತು: ಪರ್ಪಲ್ ಕ್ಯಾಪ್​ಗಾಗಿ ಹರ್ಷಲ್-ಆವೇಶ್ ನಡುವೆ ಪೈಪೋಟಿ
IPL 2021 Puple Cap
Follow us

14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2021) ಎರಡನೇ ಚರಣ ಅಂತಿಮ ಹಂತಕ್ಕೆ ತಲುಪುತ್ತಿದ್ದು ಸಾಕಷ್ಟು ರೋಚಕತೆ ಸೃಷ್ಟಿಸುತ್ತಿದೆ. ಸನ್​ರೈಸರ್ಸ್ ಹೈದರಾಬಾದ್ (Sunrisers Hyderabad) ತಂಡ ಟೂರ್ನಿಯಿಂದ ಹೊರಬಿದ್ದಿದೆ. ವಿರಾಟ್ ಕೊಹ್ಲಿ (Virat Kohli) ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB), ರಿಷಭ್ ಪಂತ್ (Rishabh Pant) ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡ ಅಧಿಕೃತವಾಗಿ ಪ್ಲೇ ಆಫ್ ಪ್ರವೇಶಿಸಿದೆ. ನಾಲ್ಕನೇ ಸ್ಥಾನಕ್ಕಾಗಿ ಪಂಜಾಬ್, ಮುಂಬೈ, ಕೆಕೆಆರ್ ಮತ್ತು ರಾಜಸ್ಥಾನ್ ಹೀಗೆ ನಾಲ್ಕು ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಸೋಮವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯದ ಬಳಿಕ ಐಪಿಎಲ್ 2021 ಪಾಯಿಂಟ್ ಟೇಬಲ್ (IPL 2021 Point Table), ಆರೆಂಜ್ ಕ್ಯಾಪ್ (IPL 2021 Orange Cap), ಪರ್ಪಲ್ ಕ್ಯಾಪ್ (IPL 2021 Purple Cap)​ ಸ್ಥಾನದಲ್ಲಿ ಕೊಂಚ ಏರಿಳಿತಗಳು ನಡೆದಿವೆ.

ಹೌದು, ಅತಿ ಹೆಚ್ಚು ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ತೊಟ್ಟಿರುವ ಆರ್​ಸಿಬಿ ತಂಡದ ಬೌಲರ್ ಹರ್ಷಲ್ ಪಟೇಲ್ ಸ್ಥಾನಕ್ಕೆ ಕುತ್ತುಬಂದಿದೆ. ಪಟೇಲ್ ಈವರೆಗೆ ಒಟ್ಟು 12 ಪಂದ್ಯಗಳಲ್ಲಿ 26 ವಿಕೆಟ್ ಕಬಳಿಸಿದ್ದಾರೆ. ಈ ಬಾರಿ ಒಂದು ಸಲ 5 ವಿಕೆಟ್ ಮತ್ತು 1 ಬಾರಿ 4 ವಿಕೆಟ್ ಪಡೆದ ಸಾಧನೆ ಜೊತೆಗೆ ಒಂದು ಬಾರಿ ಹ್ಯಾಟ್ರಿಕ್ ವಿಕೆಟ್ ಕಿತ್ತಿದ್ದಾರೆ. ಸದ್ಯ ಎರಡನೇ ಸ್ಥಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆವೇಶ್ ಖಾನ್ ಇದ್ದು ಇವರು 13 ಪಂದ್ಯಗಳಲ್ಲಿ 22 ವಿಕೆಟ್ ಕಿತ್ತು ಹರ್ಷಲ್ ಬಳಿ ಬಂದಿದ್ದಾರೆ. ಹೀಗಾಗಿ ಇವರಿಬ್ಬರ ನಡುವೆ ಕಠಿಣ ಪೈಪೋಟಿ ಏರ್ಪಟ್ಟಿದೆ.

ಮೂರನೇ ಸ್ಥಾನದಲ್ಲಿದ್ದ ಮುಂಬೈ ಇಂಡಿಯನ್ಸ್ ತಂಡದ ಜಸ್​ಪ್ರೀತ್ ಬುಮ್ರಾ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದಾರೆ. ಸದ್ಯ ಮೊಹಮ್ಮದ್ ಶಮಿ 13 ಪಂದ್ಯಗಳಲ್ಲಿ 18 ವಿಕೆಟ್ ಕಬಳಿಸಿ ಮೂರನೇ ಸ್ಥಾನ ಅಲಂಕರಿಸಿದ್ದಾರೆ. ಬುಮ್ರಾ 12 ಪಂದ್ಯಗಳಲ್ಲಿ 17 ವಿಕೆಟ್ ಪಡೆದು ನಾಲ್ಕನೇ ಸ್ಥಾನದಲ್ಲಿದ್ದಾರೆ. ಐದನೇ ಸ್ಥಾನದಲ್ಲಿ ಪಂಜಾಬ್ ತಂಡ ಅರ್ಶ್​ದೀಪ್ ಸಿಂಗ್ ಇದ್ದು, ಇವರು 16 ವಿಕೆಟ್ ಪಡೆದುಕೊಂಡಿದ್ದಾರೆ.

ಇನ್ನೂ ರುತುರಾಜ್​ರನ್ನು ಹಿಂದಿಕ್ಕಿ ಕೆ. ಎಲ್ ರಾಹುಲ್ ಆರೆಂಜ್ ಕ್ಯಾಪ್ ತೊಟ್ಟಿದ್ದಾರೆ. ಸದ್ಯ ರಾಹುಲ್ 12 ಪಂದ್ಯಗಳಲ್ಲಿ 528 ರನ್ ಬಾರಿಸಿದ್ದರೆ, ಗಾಯಕ್ವಾಡ್ 13 ಪಂದ್ಯಗಳಲ್ಲಿ 521 ರನ್ ಪೂರೈಸಿದ್ದಾರೆ. ಹೀಗಾಗಿ ಇವರಿಬ್ಬರ ನಡುವೆ ಆರೆಂಜ್ ಕ್ಯಾಪ್​ಗಾಗಿ ಕೇವಲ 8 ರನ್​ಗಳ ಅಂತರವಿದೆಯಷ್ಟೆ.

ಮೂರನೇ ಸ್ಥಾನದಲ್ಲಿ ಶಿಖರ್ ಧವನ್ ಇದ್ದುಇವರು 13 ಪಂದ್ಯಗಳಲ್ಲಿ 501 ರನ್ ಗಳಿಸಿದ್ದಾರೆ. ಸಂಜು ಸ್ಯಾಮ್ಸನ್ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದು ಇವರು 12 ಪಂದ್ಯಗಳಲ್ಲಿ 480 ರನ್ ಸಿಡಿಸಿದ್ದಾರೆ.  ಐದನೇ ಸ್ಥಾನದಲ್ಲಿ ಸಿಎಸ್​ಕೆ ತಂಡದ ಫಾಫ್ ಡುಪ್ಲೆಸಿಸ್ ಅವರಿದ್ದು 13 ಪಂದ್ಯಗಳಲ್ಲಿ 470 ರನ್ ಗಳಿಸಿದ್ದಾರೆ.

IPL 2021, RCB: ಡೆಲ್ಲಿ ವಿರುದ್ಧ ಚೆನ್ನೈಗೆ ಸೋಲು: ಆರ್​ಸಿಬಿಗೆ ಆಯ್ತು ದೊಡ್ಡ ಪ್ರಯೋಜನ: ಏನು ಗೊತ್ತಾ?

T20 World Cup 2021: ಕೇವಲ ಒಂದು ಗಂಟೆಯೊಳಗೆ ಭಾರತ-ಪಾಕಿಸ್ತಾನ ಟಿ-20 ವಿಶ್ವಕಪ್ ಪಂದ್ಯದ ಟಿಕೆಟ್ ಸೋಲ್ಡ್ ಔಟ್

(IPL Indian Premier League 2021 updated Orange Cap and Purple Cap list after DC v CSK match)

ತಾಜಾ ಸುದ್ದಿ

Related Stories

Click on your DTH Provider to Add TV9 Kannada