IPL 2021, RCB: ಡೆಲ್ಲಿ ವಿರುದ್ಧ ಚೆನ್ನೈಗೆ ಸೋಲು: ಆರ್ಸಿಬಿಗೆ ಆಯ್ತು ದೊಡ್ಡ ಪ್ರಯೋಜನ: ಏನು ಗೊತ್ತಾ?
DC vs CSK, IPL 2021: ಐಪಿಎಲ್ ಪಾಯಿಂಟ್ ಟೇಬಲ್ನಲ್ಲಿ ಆರ್‌ಸಿಬಿ ಮೂರನೇ ಸ್ಥಾನದಲ್ಲಿದೆ. ಇದರ ನಡುವೆ ಸೋಮವಾರದ ಡೆಲ್ಲಿ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಸೋತಿರುವುದು ವಿರಾಟ್ ಕೊಹ್ಲಿ ಪಡೆಗೆ ತುಂಬಾನೆ ಸಹಕಾರಿಯಾಗಿದೆ. ಅದು ಹೇಗೆ ಗೊತ್ತಾ?
14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (IPL 2021) ಸೋಮವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ವಿರುದ್ಧದ ರೋಚಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡ ಸೋಲು ಕಂಡಿತು. ಅಗ್ರಸ್ಥಾನಿಗಳಿಬ್ಬರ ಸಣ್ಣ ಮೊತ್ತದ ಕದನದಲ್ಲಿ ರಿಷಭ್ ಪಂತ್ (Rishabh Pant) ಪಡೆ 3 ವಿಕೆಟ್ಗಳ ಗೆಲುವು ಸಾಧಿಸಿ ಪಾಯಿಂಟ್ ಪಟ್ಟಿಯಲ್ಲಿ (IPL Point Table) ಅಗ್ರಸ್ಥಾನಕ್ಕೇರಿತು. ಎಂ. ಎಸ್ ಧೋನಿ (MS Dhoni) ಪಡೆ ನಾಲ್ಕನೇ ಸೋಲಿನೊಂದಿಗೆ ಎರಡನೇ ಸ್ಥಾನದಲ್ಲಿದೆ. ಇತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮೂರನೇ ಸ್ಥಾನದಲ್ಲಿದೆ. ಈ ಮೂರು ತಂಡಗಳು ಸದ್ಯಕ್ಕೆ ಐಪಿಎಲ್ 2021 ರಲ್ಲಿ ಕ್ವಾಲಿಫೈಯರ್ ಆಗಿದೆ. ಡೆಲ್ಲಿ ವಿರುದ್ಧ ಚೆನ್ನೈ (CSK) ಸೋತಿರುವುದು ವಿರಾಟ್ ಕೊಹ್ಲಿ (Virat Kohli) ಪಡೆಗೆ ತುಂಬಾನೆ ಸಹಕಾರಿಯಾಗಿದೆ.
ಹೌದು, ಚೆನ್ನೈ ಸದ್ಯ 13 ಪಂದ್ಯಗಳಲ್ಲಿ ಒಂಬತ್ತು ಪಂದ್ಯಗಳಲ್ಲಿ ಗೆದ್ದು ನಾಲ್ಕರಲ್ಲಿ ಸೋತು 18 ಅಂಕ ಸಂಪಾದಿಸಿ ಎರಡನೇ ಸ್ಥಾನದಲ್ಲಿದೆ. ಇತ್ತ ಆರ್‌ಸಿಬಿ ಆಡಿದ 12 ಪಂದ್ಯಗಳಲ್ಲಿ ಎಂಟರಲ್ಲಿ ಗೆದ್ದು, ನಾಲ್ಕರಲ್ಲಿ ಸೋತು 16 ಅಂಕದೊಂದಿಗೆ ಮೂರನೇ ಸ್ಥಾನದಲ್ಲಿದೆ. ಸಿಎಸ್ಕೆ ನೆಟ್ ರನ್ರೇಟ್ +0.739 ಆದರೆ ಆರ್‌ಸಿಬಿ -0.157 ಹೊಂದಿದೆ. ಉಭಯ ತಂಡಗಳಿಗೆ ಕೇವಲ ಎರಡು ಅಂಕಗಳಷ್ಟೆ ವ್ಯತ್ಯಾಸವಿದೆ. ಹೀಗಾಗಿ ಬೆಂಗಳೂರು ತಂಡಕ್ಕೆ ಮೊದಲ ಸ್ಥಾನ ಅಥವಾ ಎರಡನೇ ಸ್ಥಾನ ಪಡೆದುಕೊಳ್ಳುವ ಅವಕಾಶ ಬಲವಾಗಿದೆ.
ಆರ್‌ಸಿಬಿ ತನ್ನ ಮುಂದಿನ ಪಂದ್ಯವನ್ನು ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಅ.6 ಬುಧವಾರದಂದು ಆಡಲಿದೆ. ಇದರಲ್ಲಿ ದೊಡ್ಡ ಮೊತ್ತದೊಂದಿಗೆ ಗೆದ್ದರೆ 18 ಅಂಕ ಸಂಪಾದಿಸಲಿದ್ದು ರನ್ರೇಟ್ ಪ್ಲಸ್ ಆಗಿ ಎರಡನೇ ಸ್ಥಾನಕ್ಕೆ ಜಿಗಿಯಲಿದೆ. ನಂತರದ ಕೊನೇಯ ಪಂದ್ಯವನ್ನು ಕೊಹ್ಲಿ ಪಡೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಲಿದೆ. ಸದ್ಯ ಡೆಲ್ಲಿ 13 ಪಂದ್ಯಗಳಲ್ಲಿ ಹತ್ತರಲ್ಲಿ ಗೆದ್ದು ಮೂರರಲ್ಲಿ ಸೋತು 20 ಅಂಕ ಸಂಪಾದಿಸಿ ಮೊದಲನೇ ಸ್ಥಾನದಲ್ಲಿದೆ. ಡೆಲ್ಲಿ ವಿರುದ್ಧವೂ ಆರ್‌ಸಿಬಿ ದೊಡ್ಡ ಮೊತ್ತದೊಂದಿಗೆ ಗೆದ್ದರೆ 20 ಅಂಕ ಸಂಪಾದಿಸಿ ಅಗ್ರ ಸ್ಥಾನಕ್ಕೇರಲಿದೆ. ಇದರ ನಡುವೆ ಚೆನ್ನೈ ತನ್ನ ಮುಂದಿನ ಪಂದ್ಯವನ್ನು ಪಂಜಾಬ್ ಕಿಂಗ್ಸ್ ವಿರುದ್ಧ ಸೋತರೆ ಆರ್ಸಿಬಿಗೆ ಮತ್ತಷ್ಟು ಲಾಭವಾಗಲಿದೆ.
ರಾಯಲ್ ಚಾಲೆಂಜರ್ ಬೆಂಗಳೂರು ತಂಡ ಭಾನುವಾರ ಪಂಜಾಬ್ ಕಿಂಗ್ಸ್ ವಿರುದ್ಧ ರೋಚಕ ಜಯ ಸಾಧಿಸುವ ಮೂಲಕ 3ನೇ ತಂಡವಾಗಿ ಐಪಿಎಲ್ 2021 ಪ್ಲೇ-ಆಫ್ ಸುತ್ತಿಗೆ ಲಗ್ಗೆ ಇರಿಸಿತು. ಪಂಜಾಬ್ ಕಿಂಗ್ಸ್ ವಿರುದ್ಧ ಇನ್ನೇನು ಸೋತೇ ಬಿಟ್ಟಿತೆನ್ನುವ ಹಂತದಲ್ಲಿ ತಿರುಗಿ ಬಿದ್ದ ಆರ್‌ಸಿಬಿ ಆರು ರನ್ನುಗಳ ರೋಚಕ ಜಯ ದಾಖಲಿಸಿ ಮೇಲೇರಿತು.
ಸೋಮವಾರ ಅಗ್ರಸ್ಥಾನಿಗಳೆರಡರ ಸಣ್ಣ ಮೊತ್ತದ ಐಪಿಎಲ್ ಸ್ಪರ್ಧೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 3 ವಿಕೆಟ್‌ಗಳಿಂದ ಚೆನ್ನೈಯನ್ನು ಮಣಿಸಿತು. ಮೊದಲು ಬ್ಯಾಟಿಂಗ್ ನಡೆಸಿದ ಚೆನ್ನೈ5 ವಿಕೆಟಿಗೆ 136 ರನ್ ಗಳಿಸಿದರೆ, ಡೆಲ್ಲಿ 19.4 ಓವರ್‌ಗಳಲ್ಲಿ 7 ವಿಕೆಟಿಗೆ 139 ರನ್ ಬಾರಿಸಿ ತನ್ನ 10ನೇ ಜಯಭೇರಿ ಮೊಳಗಿಸಿತು. ಇದರ ಜೊತೆಗೆ ಅಂಕಪಟ್ಟಿಯಲ್ಲಿ ಮತ್ತೆ ಮೊದಲ ಸ್ಥಾನಕ್ಕೆ ಲಗ್ಗೆ ಹಾಕಿತು.
T20 World Cup 2021: ಕೇವಲ ಒಂದು ಗಂಟೆಯೊಳಗೆ ಭಾರತ-ಪಾಕಿಸ್ತಾನ ಟಿ-20 ವಿಶ್ವಕಪ್ ಪಂದ್ಯದ ಟಿಕೆಟ್ ಸೋಲ್ಡ್ ಔಟ್
IPL 2021 MI vs RR: ಐಪಿಎಲ್ನಲ್ಲಿಂದು ರಾಜಸ್ಥಾನ್-ಮುಂಬೈ ನಡುವೆ ರೋಚಕ ಕದನ: ಉಭಯ ತಂಡಗಳಿಗೆ ಗೆದ್ದರಷ್ಟೇ ಉಳಿಗಾಲ
(DC vs CSK, IPL 2021: Virat Kohli Team RCB in a benefit as Chennai lost to Delhi see details)