AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ziva Dhoni: ಫಲಿಸದ ಧೋನಿ ಮಗಳ ಪ್ರಾರ್ಥನೆ: ಡೆಲ್ಲಿ ವಿರುದ್ಧ ಸಿಎಸ್​ಕೆ ಗೆಲ್ಲಲೆಂದು ದೇವರಲ್ಲಿ ಕೈ ಮುಗಿದು ಕೇಳಿದ ಝೀವಾ ಧೋನಿ

ಝೀವಾ ಧೋನಿ ಅವರು ಮುದ್ದಾಗಿ ಕೈ ಮುಗಿದು ಪ್ರಾರ್ಥಿಸುತ್ತಿರುವ ಫೋಟೋ ಇಂಟರ್​ನೆಟ್​ನಲ್ಲಿ ಭರ್ಜರಿ ಹರಿದಾಡುತ್ತಿದೆ. ಅನೇಕರು ಇದು ಐಪಿಎಲ್ 2021ರ ಮುದ್ದಾದ ಕ್ಷಣ ಎಂದು ಬಣ್ಣಿಸಿದ್ದಾರೆ.

Ziva Dhoni: ಫಲಿಸದ ಧೋನಿ ಮಗಳ ಪ್ರಾರ್ಥನೆ: ಡೆಲ್ಲಿ ವಿರುದ್ಧ ಸಿಎಸ್​ಕೆ ಗೆಲ್ಲಲೆಂದು ದೇವರಲ್ಲಿ ಕೈ ಮುಗಿದು ಕೇಳಿದ ಝೀವಾ ಧೋನಿ
Ziva Dhoni
TV9 Web
| Edited By: |

Updated on: Oct 05, 2021 | 11:54 AM

Share

ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ (IPL 2021) ಸೋಮವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (DC vs CSK) ನಡುವಣ ಪಂದ್ಯದ ವೇಳೆ ಎಂ. ಎಸ್ ಧೋನಿ (MS Dhoni) ಮಗಳು ಝೀವಾ ಧೋನಿ (Ziva Dhoni) ಕೈ ಮುಗಿದು ಪ್ರಾರ್ಥಿಸುತ್ತಿರುವ ಫೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ (Viral Photo) ಆಗುತ್ತಿದೆ. ಡೆಲ್ಲಿ ಹಾಗೂ ಸಿಎಸ್​ಕೆ ನಡುವಣ ಪಂದ್ಯ ಸಾಕಷ್ಟು ರೋಚಕತೆಯಿಂದ ಕೂಡಿತ್ತು. ಅಗ್ರಸ್ಥಾನಿಗಳಿಬ್ಬರ ಸಣ್ಣ ಮೊತ್ತದ ಕದನದಲ್ಲಿ ರಿಷಭ್ ಪಂತ್ (Rishabh Pant) ಪಡೆ 3 ವಿಕೆಟ್​ಗಳ ಗೆಲುವು ಸಾಧಿಸಿ ಪಾಯಿಂಟ್ ಪಟ್ಟಿಯಲ್ಲಿ (IPL Point Table) ಅಗ್ರಸ್ಥಾನಕ್ಕೇರಿತು. ಕೊನೇಯ 3 ಓವರ್​ನಲ್ಲಿ ಡೆಲ್ಲಿಗೆ ಗೆಲ್ಲಲು 28 ರನ್​ಗಳ ಅವಶ್ಯಕತೆಯಿತ್ತು. ಈ ವೇಳೆ ಸ್ಟೇಡಿಯಂನಲ್ಲಿ ಕುಳಿತಿದ್ದ ಝೀವಾ ಚೆನ್ನೈ ತಂಡದ ಗೆಲುವಿಗೆ ಕೈ ಮುಗಿದು ಪ್ರಾರ್ಥಿಸುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆದರೆ, ಝೀವಾ ಪ್ರಾರ್ಥನೆ ಫಲಿಸಲಿಲ್ಲ. ಚೆನ್ನೈ ನಾಲ್ಕನೇ ಸೋಲು ಕಂಡಿತು.

ಝೀವಾ ಧೋನಿ ಅವರು ಮುದ್ದಾಗಿ ಕೈ ಮುಗಿದು ಪ್ರಾರ್ಥಿಸುತ್ತಿರುವ ಫೋಟೋ ಇಂಟರ್​ನೆಟ್​ನಲ್ಲಿ ಭರ್ಜರಿ ಹರಿದಾಡುತ್ತಿದೆ. ಅನೇಕರು ಇದು ಐಪಿಎಲ್ 2021ರ ಮುದ್ದಾದ ಕ್ಷಣ ಎಂದು ಬಣ್ಣಿಸಿದ್ದಾರೆ. ಝಿವಾ ಪಕ್ಕದಲ್ಲೇ ಅವರ ತಾಯಿ ಸಾಕ್ಷಿ ಧೋನಿ ಕೂಡ ಇದ್ದರು.

ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಮೂರು ವಿಕೆಟ್ ಅಂತರದಿಂದ ಗೆಲುವು ದಾಖಲಿಸಿದೆ. ಇದರೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದೆ.

ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ಪರ ಆರಂಭಿಕ ಆಟಗಾರರಾದ ರುತುರಾಜ್ ಗಾಯಕ್ ವಾಡ್ 13, ಫಾಪ್ ಡು ಪ್ಲೆಸಿಸ್ 10, ರಾಬಿನ್ ಉತ್ತಪ್ಪ 19, ಮೊಯಿನ್ ಆಲಿ 5, ಅಂಬಟಿ ರಾಯುಡು 55, ನಾಯಕ ಮಹೇಂದ್ರ ಸಿಂಗ್ ಧೋನಿ 18 ಹಾಗೂ ರವೀಂದ್ರ ಜಡೇಜಾ 1 ರನ್ ಕಲೆಹಾಕಿದರು. ಇದರೊಂದಿಗೆ ಸಿಎಸ್ ಕೆ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 136 ರನ್ ಗಳಿಸಿತು.

ಈ ಗುರಿಯನ್ನು ಹಿಂಬಾಲಿಸಿದ ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕ ಆಟಗಾರ ಪೃಥ್ವಿ ಶಾ 18, ಶಿಖರ್ ಧವನ್ 39, ಶ್ರೇಯಸ್ ಅಯ್ಯರ್ 2, ರಿಷಭ್ ಪಂತ್ 15, ರಿಪಾಲ್ ಪಟೇಲ್ 18, ಆರ್ ಅಶ್ವಿನ್ 2, ಶಿಮ್ರೊನ್ ಹೆಟ್ಮೆಯರ್ ಅಜೇಯ 28, ಅಕ್ಷರ್ ಪಟೇಲ್ 5, ರಬಾಡ ಅಜೇಯ 4 ರನ್ ಕಲೆ ಹಾಕುವುದರೊಂದಿಗೆ 19.4 ಓವರ್ ಗಳಲ್ಲಿ 7 ವಿಕೆಟ್ ಗೆ 139 ರನ್ ಗಳಿಸಿ ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿನ ನಗೆ ಬೀರಿತು.

IPL 2021, RCB: ಡೆಲ್ಲಿ ವಿರುದ್ಧ ಚೆನ್ನೈಗೆ ಸೋಲು: ಆರ್​ಸಿಬಿಗೆ ಆಯ್ತು ದೊಡ್ಡ ಪ್ರಯೋಜನ: ಏನು ಗೊತ್ತಾ?

Viral News: ರೋಗಿಯ ಸಮಸ್ಯೆಯನ್ನು ಪತ್ತೆಹಚ್ಚಲು iPhone 13 Pro Max ​ಫೋನ್​ ಬಳಸಿದ ವೈದ್ಯರು!

(Ziva Dhoni Prays for CSK Win Over Delhi Capitals in IPL 2021 Match Photo goes Viral)

ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
ಅಶ್ವಿನಿ-ಗಿಲ್ಲಿ ಮಧ್ಯೆ ಮತ್ತೆ ಶುರುವಾಯ್ತು ಮುನಿಸಿ; ಆರಂಭವಾಯ್ತು ಫೈಟ್
ಅಶ್ವಿನಿ-ಗಿಲ್ಲಿ ಮಧ್ಯೆ ಮತ್ತೆ ಶುರುವಾಯ್ತು ಮುನಿಸಿ; ಆರಂಭವಾಯ್ತು ಫೈಟ್
4719 ಎಸೆತಗಳಲ್ಲಿ ನಿರ್ಧಾರವಾದ ಆ್ಯಶಸ್ ಸರಣಿ ಫಲಿತಾಂಶ
4719 ಎಸೆತಗಳಲ್ಲಿ ನಿರ್ಧಾರವಾದ ಆ್ಯಶಸ್ ಸರಣಿ ಫಲಿತಾಂಶ
ಹುಬ್ಬಳ್ಳಿ ಮಂದಿಗೆ ಸುದೀಪ್ ಥ್ಯಾಂಕ್ಸ್ ಹೇಳಿದ್ದು ಹೇಗೆ ನೋಡಿ
ಹುಬ್ಬಳ್ಳಿ ಮಂದಿಗೆ ಸುದೀಪ್ ಥ್ಯಾಂಕ್ಸ್ ಹೇಳಿದ್ದು ಹೇಗೆ ನೋಡಿ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ಇಸ್ಲಾಮಿಸ್ಟ್​ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಸ್ಲಾಮಿಸ್ಟ್​ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ