Viral Video: ಹಳೆಯ ಎಟಿಎಂ ಖರೀದಿಸಿ 1.49 ಲಕ್ಷ ರೂ. ಪಡೆದ ಯುವಕರು! ಖುಷಿಯಲ್ಲಿ ಕಿರುಚಾಡಿದ ವಿಡಿಯೋ ವೈರಲ್​

TV9 Digital Desk

| Edited By: shruti hegde

Updated on:Oct 06, 2021 | 11:10 AM

ಕ್ಯಾಮರಾ ಹಿಡಿದು ಘಟನೆಯನ್ನು ವಿವರಿಸಿದ ವ್ಯಕ್ತಿ, ಮಾಲೀಕ ಎಟಿಎಂಅನ್ನು ಮಾರಲು ಸಿದ್ಧರಾಗಿದ್ದರು. ಆದರೆ ಅವರಲ್ಲಿ ಕೀಲಿ ಇರಲಿಲ್ಲ. ಬಳಿಕ ನಾವು ಅದನ್ನು ಖರೀದಿಸಿದೆವು ಎಂದು ವಿವರಿಸಿರುವುದನ್ನು ವಿಡಿಯೋದಲ್ಲಿ ನೋಡಬಹುದು.

Viral Video: ಹಳೆಯ ಎಟಿಎಂ ಖರೀದಿಸಿ 1.49 ಲಕ್ಷ ರೂ. ಪಡೆದ ಯುವಕರು! ಖುಷಿಯಲ್ಲಿ ಕಿರುಚಾಡಿದ ವಿಡಿಯೋ ವೈರಲ್​
ಹಳೆಯ ಎಟಿಎಂ ಖರೀದಿಸಿ 1.49 ಲಕ್ಷ ಪಡೆದ ಯುವಕರು
Follow us


ಹಳೆಯ ಎಟಿಎಂ ಖರೀದಿಸಿದ ಯುವಕರು ಆಶ್ಚರ್ಯಚಕಿತರಾಗಿ ನಿಂತಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ದೃಶ್ಯ ನಿಮ್ಮನ್ನೂ ಸಹ ಅಶ್ಚರ್ಯಚಕಿತರಾಗುವಂತೆ ಮಾಡುತ್ತದೆ. ಯುವಕರು ಸೇರಿ ಹಳೆಯ ಎಟಿಎಂ ಯಂತ್ರವನ್ನು ಖರೀದಿಸಿ ಅದರಲ್ಲಿದ್ದ 1.49 ಲಕ್ಷ ರೂಪಾಯಿಯನ್ನು ಪಡೆದಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

ಯುವಕರು ಹಳೆಯ ಎಟಿಎಂ ಯಂತ್ರವನ್ನು 22,000 ರೂಪಾಯಿಗೆ ಮಾಲೀಕರಿಂದ ಖರೀದಿಸಿದ್ದಾರೆ. ಆದರೆ ಎಟಿಎಂ ಡ್ರಾಯರ್ ಕೀಲಿಯನ್ನು ಮಾಲೀಕರು ಕಳೆದುಕೊಂಡಿದ್ದರು. ಹಾಗಾಗಿ ಯುವಕರಿಗೆ ಪೆಟ್ಟಿಗೆ ತೆರೆಯಲು ಯಾವುದೇ ಇನ್ನಿತರ ಅವಕಾಶಗಳಿರಲಿಲ್ಲ. ಹಾಗಾಗಿ ಸುತ್ತಿಗೆ ಬಳಸಿ ಡ್ರಾಯರ್ ತೆಗೆದಿದ್ದಾರೆ.

ಕ್ಯಾಮರಾ ಹಿಡಿದು ಘಟನೆಯನ್ನು ವಿವರಿಸಿದ ವ್ಯಕ್ತಿ, ಮಾಲೀಕ ಎಟಿಎಂಅನ್ನು ಮಾರಲು ಸಿದ್ಧರಾಗಿದ್ದರು. ಆದರೆ ಅವರಲ್ಲಿ ಕೀಲಿ ಇರಲಿಲ್ಲ. ಬಳಿಕ ನಾವು ಅದನ್ನು ಖರೀದಿಸಿದೆವು ಎಂದು ವಿವರಿಸಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಎಟಿಎಂನಲ್ಲಿದ್ದ ಹಣವನ್ನು ಹೊರತೆಗೆಯಲು ಹಲವಾರು ಉಪಕರಣಗಳನ್ನು ಬಳಸಲಾಯಿತು. ಅದೆಗೋ ಕಷ್ಟಪಟ್ಟು ಬಿಲ್​ಗಳನ್ನೆಲ್ಲಾ ಹೊರ ತೆಗೆಯಲಾಯಿತು. ಬಳಿಕ ಹಣವಿರುವ ಡ್ರಾಯರ್​ಅನ್ನು ತೆಗೆಯಲು ಯಶಸ್ವಿಯಾಗಿದ್ದಾರೆ. ಅವರಲ್ಲಿ ಒಬ್ಬರು ಸಂತೋಷದ ದಿನವಿದು ಎಂದು ಕಿರುಚಾಡುತ್ತಾರೆ.

ಬಲವಂತಾವಾಗಿ ಹಣವನ್ನು ಎಳೆದು ಹಣ ಹರಿಯುವ ಸಾಧ್ಯತೆಗಳು ಇರುತ್ತವೆ ಅಂತಹ ದುಸ್ಸಾಹಸಕ್ಕೆ ನಾವು ಕೈಹಾಕುವುದಿಲ್ಲ ಎಂದು ಓರ್ವರು ಹೇಳುತ್ತಿರುವುದನ್ನು ದೃಶ್ಯದಲ್ಲಿ ನೋಡಬಹುದು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ವಿಡಿಯೋದಲ್ಲಿ ಕಾಣುವ ಗಡ್ಡದ ವ್ಯಕ್ತಿಯೊಬ್ಬರು ಯಾವುದೇ ದುರಾಸೆಯನ್ನು ತೋರುತ್ತಿಲ್ಲ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:

Viral Video: ತಲೆ ಕೂದಲನ್ನು ಹೀಗೂ ಕತ್ತರಿಸಬಹುದು; ಒಮ್ಮೆ ನೋಡಿ ಬಿಡಿ

Viral Video: ಕತ್ತೆಯನ್ನು ಅಪ್ಪಿಕೊಂಡು ಲಾಲಿ ಹಾಡಿ ಮಲಗಿಸಿದ ವ್ಯಕ್ತಿ; ಹೃದಯಸ್ಪರ್ಶಿ ಈ ವಿಡಿಯೋವನ್ನು ನೋಡಿದ್ದೀರಾ?

ತಾಜಾ ಸುದ್ದಿ

Related Stories

Click on your DTH Provider to Add TV9 Kannada