Viral Video: ತಲೆ ಕೂದಲನ್ನು ಹೀಗೂ ಕತ್ತರಿಸಬಹುದು; ಒಮ್ಮೆ ನೋಡಿ ಬಿಡಿ

TV9 Digital Desk

| Edited By: sandhya thejappa

Updated on: Oct 03, 2021 | 4:41 PM

ಕೂದಲನ್ನು ಕತ್ತರಿಸುವಾಗ ಮಲಗಿದ್ದ ಹುಡುಗಿ ‘ಓ ದೇವರೇ, ಇದು ನಿಜವಾಗಿಯೂ ನಡೆಯುತ್ತಿದೆ’ ಎಂದು ಹೇಳಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಆದ ಈ ವಿಡಿಯೋ 4 ಲಕ್ಷ ವೀಕ್ಷಣೆ ಪಡೆದಿದೆ.

Viral Video: ತಲೆ ಕೂದಲನ್ನು ಹೀಗೂ ಕತ್ತರಿಸಬಹುದು; ಒಮ್ಮೆ ನೋಡಿ ಬಿಡಿ
ದೊಡ್ಡ ಚಾಕುವಿನಿಂದ ತಲೆ ಕೂದಲನ್ನು ಕತ್ತರಿಸುತ್ತಿದ್ದಾರೆ
Follow us

ತಲೆ ಕೂದಲನ್ನು ಕತ್ತರಿಸಲು ಪುರುಷರು ಸೆಲೂನ್ ಶಾಪ್​ಗೆ ಹೊಗುತ್ತಾರೆ. ಮಹಿಳೆಯರು ಬ್ಯೂಟಿ ಪಾರ್ಲರ್ಗೆ ಹೋಗುತ್ತಾರೆ. ಬ್ಯೂಟಿ ಪಾರ್ಲರ್ಗೆ ಹೋಗದಿದ್ದರೂ ಕತ್ತರಿ ಸಹಾಯದಿಂದ ಮನೆಯಲ್ಲೇ ತಲೆ ಕೂದಲನ್ನು ಕತ್ತರಿಸಿಕೊಳ್ಳುತ್ತಾರೆ. ಆದರೆ ಮಾಂಸ ಕತ್ತರಿಸುವ ಚಾಕುವಿನಿಂದ ತಲೆ ಕೂದಲನ್ನು ಕತ್ತರಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಪ್ರತಿದಿನ ಹತ್ತಾರು ವಿಡಿಯೋಗಳು ವೈರಲ್ ಆಗುತ್ತವೆ. ವೈರಲ್ ಆದ ವಿಡಿಯೋಗಳಲ್ಲಿ ಕೆಲವೊಂದು ತಮಾಷೆ ನೀಡುತ್ತವೆ. ಇನ್ನು ಕೆಲವು ಭಯ ಹುಟ್ಟಿಸುತ್ತವೆ. ಜೊತೆಗೆ ಅಚ್ಚರಿಯೂ ಮೂಡಿಸುತ್ತವೆ. ಮಾತ್ರವಲ್ಲದೇ ಇದು ಹೇಗೆ ಸಾಧ್ಯ ಅಂತ ಪ್ರಶ್ನೆಗಳನ್ನೂ ಹುಟ್ಟುಹಾಕುತ್ತವೆ. ಈ ಸಾಲಿಗೆ ಇದೊಂದು ವಿಡಿಯೋ ಸೇರಿದೆ.

ಹುಡುಗಿಯೊಬ್ಬಳು ನೆಲದ ಮೇಲೆ ಮಲಗಿದ್ದಳೆ. ಆಕೆಯ ಕೂದಲನ್ನು ಮರದ ಹಲಗೆ ಮೇಲೆ ಇಟ್ಟಿದ್ದಾಳೆ. ನಂತರ ಒಬ್ಬ ಆಕೆಯ ಕೂದಲನ್ನು ಸಮವಾಗಿ ಇರಿಸಿ ಕತ್ತರಿಸುತ್ತಾನೆ. ತಲೆ ಕೂದಲನ್ನು ಮಾಂಸ ಕತ್ತರಿಸುವಂತೆ ದೊಡ್ಡ ಚಾಕುವಿನಿಂದ ಕತ್ತರಿಸುತ್ತಾನೆ. ಕೂದಲು ಕತ್ತರಿಸಿಕೊಂಡ ಹುಡುಗಿಯೇ ತನ್ನ ಕೂದಲು ಕತ್ತರಿಸುವ ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾಳೆ. ವಿಡಿಯೋದಲ್ಲಿ ಕೂದಲು ಕತ್ತರಿಸಿಕೊಂಡ ಹುಡುಗಿ ಯಾವುದೇ ಭಯವಿಲ್ಲದೆ ನಗುತ್ತಿದ್ದಾಳೆ.

ಕೂದಲನ್ನು ಕತ್ತರಿಸುವಾಗ ಮಲಗಿದ್ದ ಹುಡುಗಿ ‘ಓ ದೇವರೇ, ಇದು ನಿಜವಾಗಿಯೂ ನಡೆಯುತ್ತಿದೆ’ ಎಂದು ಹೇಳಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಆದ ಈ ವಿಡಿಯೋ 4 ಲಕ್ಷ ವೀಕ್ಷಣೆ ಪಡೆದಿದೆ. ಇದನ್ನು ಬಿ ವೈರಲ್ (BViral) ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಆಗಿದೆ. ವಿಡಿಯೋವನ್ನು ವೀಕ್ಷಿಸಿದ ಹಲವರು ತಮಗೆ ನಂಬಲು ಸಾಧ್ಯವಾಗಲಿಲ್ಲ ಅಂತ ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಹಾಸ್ಯಮಯ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ

Viral Video: ಬೈಕ್​ನಲ್ಲಿ ಪುಟ್ಟ ಬಾಲಕನ ಸಖತ್ ಸ್ಟಂಟ್; ವಿಡಿಯೊ ನೋಡಿ

Viral News: ಶಾಲೆಯ ಮಕ್ಕಳೊಂದಿಗೆ ಸ್ನೇಹ ಬೆಳೆಸಿದ ಕಾಡು ಗಿಳಿ; ಹೃದಯಸ್ಪರ್ಶಿ ಕಥೆಯಿದು

ತಾಜಾ ಸುದ್ದಿ

Related Stories

Click on your DTH Provider to Add TV9 Kannada