AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಖಾಲಿ ವಿಮಾನದಲ್ಲಿ ಸೂಪರ್ ಡ್ಯಾನ್ಸ್; ನೋಡುಗರನ್ನು ಮೋಡಿ ಮಾಡಿದ ಗಗನಸಖಿ!

Viral Video: ವಿಮಾನ ನಿಲ್ದಾಣದಲ್ಲಿ ನಿಂತಿರುವ ವೇಳೆ ಗಗನಸಖಿ ಮನಿಕೆ ಮಗೆ ಹಿತೆ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಖಾಲಿ ಖಾಲಿ ವಿಮಾನದಲ್ಲಿ ಆಕೆಯ ನೃತ್ಯ ನೋಡುಗರ ಮನಸೂರೆಗೊಂಡಿದೆ. ಏರ್ ಹಾಸ್ಟೆಸ್​ನ ನೃತ್ಯ, ಹಾವ ಭಾವಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.

Video: ಖಾಲಿ ವಿಮಾನದಲ್ಲಿ ಸೂಪರ್ ಡ್ಯಾನ್ಸ್; ನೋಡುಗರನ್ನು ಮೋಡಿ ಮಾಡಿದ ಗಗನಸಖಿ!
ಖಾಲಿ ವಿಮಾನದಲ್ಲಿ ಮನಿಕೆ ಮಗೆ ಹಿತೆ ಹಾಡಿಗೆ ಡ್ಯಾನ್ಸ್
TV9 Web
| Updated By: ganapathi bhat|

Updated on:Oct 03, 2021 | 9:16 PM

Share

ಸಾಮಾಜಿಕ ಜಾಲತಾಣದ ಟ್ರೆಂಡ್​ಗಳು ಆಗಾಗ್ಗೆ ಬದಲಾಗುತ್ತಿರುತ್ತದೆ. ಹೊಸ ಹೊಸ ವಿಚಾರಗಳು, ವಿಚಿತ್ರ, ವಿಶೇಷ ವಿಡಿಯೋಗಳು ವೈರಲ್ ಆಗುತ್ತಿರುತ್ತದೆ. ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಮನಿಕೆ ಮಗೆ ಹಿತೆ ಎಂಬ ವಿಡಿಯೋ ಭಾರೀ ವೈರಲ್ ಆಗಿತ್ತು. ಆ ಹಾಡು ಬಹಳಷ್ಟು ಸ್ವರೂಪದಲ್ಲಿ ಕೂಡ ಹಂಚಲ್ಪಟ್ಟಿತ್ತು. ಹಲವರು ಆ ಹಾಡು ಹಾಡಿ, ಹಾಡಿಗೆ ನೃತ್ಯ ಮಾಡಿ ಸಂಭ್ರಮಿಸಿದ್ದರು. ಈಗ ಖಾಲಿ ವಿಮಾನದಲ್ಲಿ ಏರ್ ಹಾಸ್ಟೆಸ್ ಒಬ್ಬರು ಮನಿಕೆ ಮಗೆ ಹಿತೆ ನೃತ್ಯ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.

ಈ ವಿಡಿಯೋ ಈಗ 550kಗೂ ಅಧಿಕ ವ್ಯೂಸ್ ಪಡೆದುಕೊಂಡಿದೆ. ಈ ವಿಡಿಯೋವನ್ನು ಏರ್ ಹಾಸ್ಟೆಸ್ ಹಂಚಿಕೊಂಡಿದ್ದಾರೆ. ವಿಡಿಯೋವನ್ನು ಬಹುತೇಕ ಮಂದಿ ಹಂಚಿಕೊಂಡಿದ್ದಾರೆ. ವಿಮಾನ ನಿಲ್ದಾಣದಲ್ಲಿ ನಿಂತಿರುವ ವೇಳೆ ಗಗನಸಖಿ ಮನಿಕೆ ಮಗೆ ಹಿತೆ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಖಾಲಿ ಖಾಲಿ ವಿಮಾನದಲ್ಲಿ ಆಕೆಯ ನೃತ್ಯ ನೋಡುಗರ ಮನಸೂರೆಗೊಂಡಿದೆ. ಏರ್ ಹಾಸ್ಟೆಸ್​ನ ನೃತ್ಯ, ಹಾವ ಭಾವಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.

ನೋಡುಗರು ವಿಡಿಯೋಗೆ ವಿವಿಧ ರಿಯಾಕ್ಷನ್ಸ್ ಕೊಡುತ್ತಿದ್ದಾರೆ. ವಿಮಾನದ ಒಳಗೆ ನೃತ್ಯ ಸೂಪರ್ ಆಗಿ ಕಾಣುತ್ತಿದೆ ಎಂದು ಒಬ್ಬರು ಬರೆದುಕೊಂಡಿದ್ದಾರೆ. ಪ್ರತಿಯೊಬ್ಬರಿಗೂ ತಮ್ಮ ಬದುಕನ್ನು ಸಂಭ್ರಮಿಸುವ ಹಕ್ಕಿದೆ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ. ಬಹಳಷ್ಟು ಜನರು ಎಮೋಜಿ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

ರಾನು ಮಂಡಲ್ ಕೂಡ ಈ ಹಾಡು ಹಾಡಿ ಮತ್ತೆ ಸುದ್ದಿಯಲ್ಲಿ ಇದ್ದಾರೆ. ಯೂಟ್ಯೂಬರ್ ರೊಂಧೋನ್ ಪೊರಿಚೋಯ್ ಇದೀಗ ರಾನು ಮಂಡಲ್ ಮನಿಕೆ ಮಗೆ ಹಿತೆ ಹಾಡು ಹಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ. ಕೆಂಪು ಟೀ ಶರ್ಟ್ ಹಾಗೂ ಜೀನ್ಸ್ ಪ್ಯಾಂಟ್ ಧರಿಸಿ ರಾನು ಮಂಡಲ್ ಈ ಹಾಡು ಹಾಡಿದ್ದಾರೆ.

ಇದನ್ನೂ ಓದಿ: Ranu Mondal: ಮನಿಕೆ ಮಗೆ ಹಿತೆ.. ಸೂಪರ್ ಹಿಟ್ ಹಾಡು ಹಾಡಿದ ರಾನು ಮಂಡಲ್; ವಿಡಿಯೋ ನೋಡಿ

ಇದನ್ನೂ ಓದಿ: ‘ಮನಿಕೆ ಮಗೆ ಹಿತೆ’ ಹಾಡನ್ನು ಒಮ್ಮೆಯಲ್ಲ ಸಾವಿರ ಬಾರಿ ಕೇಳಿಸಿಕೊಂಡರೂ ಬೇಸರವಾಗದು, ಅಮಿತಾಬ್, ಮಾಧುರಿಯವರನ್ನೇ ಕೇಳಿ

Published On - 9:12 pm, Sun, 3 October 21

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ