99 ಕೋಟಿ ಡೋಸ್ ಕೊವಿಡ್​ 19 ಲಸಿಕೆ ನೀಡಿಕೆ, 100 ಕೋಟಿ ಸಾಧನೆಗೆ ತುಂಬ ಸನಿಹ; ಫುಲ್​ ಖುಷಿಯಿಂದ ಟ್ವೀಟ್​ ಮಾಡಿದ ಆರೋಗ್ಯ ಸಚಿವ

Covid 19 Vaccination: ಜನವರಿ 16ರಂದು ಕೊವಿಡ್​ 19 ಲಸಿಕೆ ಅಭಿಯಾನ ಭಾರತದಲ್ಲಿ ಶುರುವಾದಾಗ ಮೊದಲು ಕೊರೊನಾ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಆರೋಗ್ಯ ಸಿಬ್ಬಂದಿ, ಪೊಲೀಸ್​, ಸ್ವಚ್ಛತಾ ಕಾರ್ಮಿಕರಿಗೆ ನೀಡಲಾಗಿತ್ತು.

99 ಕೋಟಿ ಡೋಸ್ ಕೊವಿಡ್​ 19  ಲಸಿಕೆ ನೀಡಿಕೆ, 100 ಕೋಟಿ ಸಾಧನೆಗೆ ತುಂಬ ಸನಿಹ; ಫುಲ್​ ಖುಷಿಯಿಂದ ಟ್ವೀಟ್​ ಮಾಡಿದ ಆರೋಗ್ಯ ಸಚಿವ
ಕೊವಿಡ್​ 19 ಲಸಿಕೆ (ಪ್ರಾತಿನಿಧಿಕ ಚಿತ್ರ)
Follow us
TV9 Web
| Updated By: Lakshmi Hegde

Updated on:Oct 19, 2021 | 1:20 PM

ಭಾರತದಲ್ಲಿ 2021ರ ಜನವರಿ 16ರಿಂದ ಶುರುವಾದ ಕೊವಿಡ್​ 19 ಲಸಿಕೆ (Covid 19 Vaccination) ಅಭಿಯಾನ ಹೊಸದೊಂದು ಮೈಲಿಗಲ್ಲು ಸ್ಥಾಪನೆಯೆಡೆಗೆ ಸಾಗಿದೆ. ಇದುವರೆಗೆ 99 ಕೋಟಿ ಡೋಸ್​​ಗಳನ್ನು ಜನರಿಗೆ ನೀಡಲಾಗಿದ್ದು, 100 ಕೋಟಿ ಡೋಸ್​ ಲಸಿಕೆ ನೀಡಕೆಗೆ ಬಹಳ ಹತ್ತಿರ ಬಂದಿದೆ.  ಈ ವಾರದಲ್ಲೇ 100 ಕೋಟಿ ಡೋಸ್​ ನೀಡಿ, ದಾಖಲೆ ನಿರ್ಮಿಸಲಿದೆ.  ಇಂದು ಈ ಬಗ್ಗೆ ಟ್ವೀಟ್​ ಮಾಡಿರುವ ಕೇಂದ್ರ ಸಚಿವ ಮನ್​ಸುಖ್​ ಮಾಂಡವಿಯಾ, ನಾವಿಂದು 99 ಕೋಟಿಯಲ್ಲಿದ್ದೇವೆ..100 ಕೋಟಿ ಕೊವಿಡ್​ ಲಸಿಕೆ ದಾಖಲೆಯತ್ತ ಹೀಗೆ ಮುನ್ನುಗ್ಗು ಭಾರತ ಎಂದು ಹೇಳಿದ್ದಾರೆ. ಹಾಗೇ ಕೊವಿಡ್​ 19 ವ್ಯಾಕ್ಸಿನೇಶನ್​ ಎಂಬ ಹ್ಯಾಷ್​ಟ್ಯಾಗ್​ ಕೂಡ ನೀಡಿದ್ದಾರೆ.  

ಜನವರಿ 16ರಂದು ಕೊವಿಡ್​ 19 ಲಸಿಕೆ ಅಭಿಯಾನ ಶುರುವಾದಾಗ ಮೊದಲು ಕೊರೊನಾ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಆರೋಗ್ಯ ಸಿಬ್ಬಂದಿ, ಪೊಲೀಸ್​, ಸ್ವಚ್ಛತಾ ಕಾರ್ಮಿಕರಿಗೆ ನೀಡಲಾಗಿತ್ತು. ನಂತರ ಲಸಿಕೆ ಅಭಾವದಿಂದ ಅಭಿಯಾನಕ್ಕೆ ಹಿನ್ನಡೆಯಾಗಿತ್ತು. ಆದರೆ ನಂತರ ಒಮ್ಮೆಲೇ ಮುನ್ನುಗ್ಗಿದ ಭಾರತ ಈಗ 100 ಕೋಟಿ ಡೋಸ್​ ಲಸಿಕೆಯ ದಾಖಲೆಯತ್ತ ಬಂದು ನಿಂತಿದೆ. ಅದೂ ಕೂಡ ಕೇಂದ್ರ ಸರ್ಕಾರವೇ ಎಲ್ಲರಿಗೂ ಉಚಿತವಾಗಿ ನೀಡುತ್ತಿದೆ. ಸದ್ಯ ದೇಶದಲ್ಲಿ ಕೊವಿಡ್​ 19 ಸಾಂಕ್ರಾಮಿಕದ ಅಬ್ಬರ ಕೂಡ ಸ್ವಲ್ಪ ಕಡಿಮೆಯಾಗುತ್ತಿದ್ದು, ಚೇತರಿಕೆ ಪ್ರಮಾಣ ಶೇ.98ಕ್ಕೂ ಜಾಸ್ತಿಯಿದೆ.

ಇದನ್ನೂ ಓದಿ: ‘ಅನ್ನ ಕೊಡುವ ಚಿತ್ರೋದ್ಯಮ ಮುಚ್ಚಬಾರದು, ಪೈರಸಿಗೆ ಅಂತ್ಯ ಹಾಡ್ತೀವಿ’: ಆರಗ ಜ್ಞಾನೇಂದ್ರ ಭರವಸೆ

ಉತ್ತರಾಖಂಡ್​​ ಮಳೆಗೆ 5 ಮಂದಿ ಬಲಿ; ಸಿಎಂಗೆ ಕರೆ ಮಾಡಿ ಪರಿಸ್ಥಿತಿಯ ವರದಿ ಕೇಳಿದ ಪ್ರಧಾನಿ ಮೋದಿ

Published On - 1:19 pm, Tue, 19 October 21