ಉತ್ತರಾಖಂಡ್​​ ಮಳೆಗೆ 5 ಮಂದಿ ಬಲಿ; ಸಿಎಂಗೆ ಕರೆ ಮಾಡಿ ಪರಿಸ್ಥಿತಿಯ ವರದಿ ಕೇಳಿದ ಪ್ರಧಾನಿ ಮೋದಿ

Uttarakhand Rain: ಕಾರ್ಮಿಕರು ಪುರಿ ಜಿಲ್ಲೆಯ ಲಾನ್ಸ್​ಡೌನ್​​ ಸಮೀಪದ ಸಂಖಲ್​​ನಲ್ಲಿ ಟೆಂಟ್​​ನಲ್ಲಿ ಇದ್ದರು. ಅಲ್ಲೇ ಸಮೀಪದ ಹೊಲದ ಗುಂಟ ಹರಿದ ರಭಸದ ಪ್ರವಾಹದಿಂದ ಕೊಚ್ಚಿಕೊಂಡು ಹೋಗಿದ್ದಾರೆ.

ಉತ್ತರಾಖಂಡ್​​ ಮಳೆಗೆ 5 ಮಂದಿ ಬಲಿ; ಸಿಎಂಗೆ ಕರೆ ಮಾಡಿ ಪರಿಸ್ಥಿತಿಯ ವರದಿ ಕೇಳಿದ ಪ್ರಧಾನಿ ಮೋದಿ
ಮಳೆ

ದೆಹಲಿ: ಉತ್ತರಾಖಂಡ್​​ನಲ್ಲಿ ಭಾರಿ ಮಳೆ, ಪ್ರವಾಹ (Uttarakhand Rain)ಪರಿಸ್ಥಿತಿ ಎದುರಾಗಿದ್ದು, ಜನಜೀವನ ಅಸ್ತವ್ಯಸ್ತವಾಗುತ್ತಿದೆ. ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಉತ್ತರಾಖಂಡ್​ ಮುಖ್ಯಮಂತ್ರಿ ಪುಷ್ಕರ್​ ಸಿಂಗ್​ ಧಮಿ ಜತೆ ಮಾತನಾಡಿದ್ದಾರೆ.  ಹಾಗೇ, ಉತ್ತರಾಖಂಡ್​​ನ ಕೇಂದ್ರ ಸಚಿವರಾದ ಅಜಯ್​ ಭಟ್​​​ರೊಂದಿಗೆ ಮಾತನಾಡಿ, ಅಲ್ಲಿನ ಸ್ಥಿತಿಗತಿಗಳ ಬಗ್ಗೆ ವಿವರಿಸಿದ್ದಾರೆ. ನಿನ್ನೆ ಉತ್ತರಾಖಂಡ್ ಗವರ್ನರ್​​​​ ಲೆಫ್ಟಿನಂಟ್ ಜನರಲ್​ ಗುರ್ಮಿತ್​ ಸಿಂಗ್​ ಅವರು ನಿನ್ನೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದಾರೆ.  

ಇನ್ನು ಉತ್ತರಾಖಂಡ್​​ನಲ್ಲಿ ವಿಪರೀತ ಮಳೆಯಿಂದ ಉಂಟಾಗಿರುವ ಅವ್ಯವಸ್ಥೆಯ ಬಗ್ಗೆ ಮುಖ್ಯಮಂತ್ರಿ ಪುಷ್ಕರ್​ ಸಿಂಗ್​ ಧಮಿ ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ಹಾಗೇ, ರಾಜ್ಯದ ಸೆಕ್ರೆಟರಿಯಟ್​​​ನ ವಿಪತ್ತು ನಿಯಂತ್ರಣಾ ಕೊಠಡಿ ಮೂಲಕ ಪರಿಸ್ಥಿತಿಯ ಅವಲೋಕನ ಮಾಡುತ್ತಿದ್ದಾರೆ. ಅಂದರೆ ಅಲ್ಲಿಂದ ಕಾಲಕಾಲಕ್ಕೆ ಮಾಹಿತಿ ತರಿಸಿಕೊಳ್ಳುತ್ತಿದ್ದಾರೆ.  ಉತ್ತರಾಖಂಡ್​​ನಲ್ಲಿ ಮಳೆ-ಪ್ರವಾಹ ಪರಿಸ್ಥಿತಿಗೆ ಇದುವರೆಗೆ 5ಮಂದಿ ಮೃತಪಟ್ಟಿದ್ದು, ಅದರಲ್ಲಿ ಮೂವರು ನೇಪಾಳದ ಕಾರ್ಮಿಕರಾಗಿದ್ದಾರೆ. ಇನ್ನೆರಡು ಮಂದಿ ಗಾಯಗೊಂಡಿದ್ದಾರೆ. ಈ ಕಾರ್ಮಿಕರು ಪುರಿ ಜಿಲ್ಲೆಯ ಲಾನ್ಸ್​ಡೌನ್​​ ಸಮೀಪದ ಸಂಖಲ್​​ನಲ್ಲಿ ಟೆಂಟ್​​ನಲ್ಲಿ ಇದ್ದರು. ಅಲ್ಲೇ ಸಮೀಪದ ಹೊಲದ ಗುಂಟ ಹರಿದ ರಭಸದ ಪ್ರವಾಹದಿಂದ ಕೊಚ್ಚಿಕೊಂಡು ಹೋಗಿದ್ದಾರೆ. ಜೀವಂತ ಸಮಾಧಿಯಾಗಿದ್ದಾರೆ ಎಂದು ಡಿಸಿ ವಿಜಯ್​ಕುಮಾರ್​ ಜೋಗ್​ಡಂಡೆ ಹೇಳಿದ್ದಾರೆ.

ಇದನ್ನೂ ಓದಿ: ಬೆಳಗಾವಿ: ನೈತಿಕ ಪೊಲೀಸ್‌ಗಿರಿ ಪ್ರಕರಣ; ಅನ್ಯಕೋಮಿನ ಸ್ನೇಹಿತೆಯರ ಜತೆ ಮಾತನಾಡುತ್ತಿದ್ದ ಯುವಕನ ಮೇಲೆ ಹಲ್ಲೆಗೆ ಯತ್ನ

MS Dhoni: ಸಿಎಸ್​ಕೆಯಲ್ಲಿ ಧೋನಿ ಭವಿಷ್ಯದ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ಫ್ರಾಂಚೈಸಿ ಮಾಲೀಕ ಶ್ರೀನಿವಾಸನ್

Click on your DTH Provider to Add TV9 Kannada