MS Dhoni: ಸಿಎಸ್ಕೆಯಲ್ಲಿ ಧೋನಿ ಭವಿಷ್ಯದ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ಫ್ರಾಂಚೈಸಿ ಮಾಲೀಕ ಶ್ರೀನಿವಾಸನ್
N Srinivasan, CSK: ಐಪಿಎಲ್ 2021 ಟ್ರೋಫಿಯೊಂದಿಗೆ ಚೆನ್ನೈನ ವೆಂಕಟಾಚಲಪತಿ ದೇಗುಲಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಸಿಎಸ್‌ಕೆ ಮಾಲಿಕ ಶ್ರೀನಿವಾಸನ್ ಅವರು ಎಂ. ಎಸ್ ಧೋನಿ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಯ (IPL 2021) ಚಾಂಪಿಯನ್ ಆಗಿ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಗೆದ್ದಾಗಿದೆ. ನಾಲ್ಕನೇ ಬಾರಿ ಪ್ರಶಸ್ತಿಗೆ ಮುತ್ತಿಡುವ ಮೂಲಕ ಮಹೇಂದ್ರ ಸಿಂಗ್ ಧೋನಿ (MS Dhoni) ತಮಗೆ ಕೊಟ್ಟ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಕಳೆದ ವರ್ಷ ಹೀನಾಯ ಪ್ರದರ್ಶನ ನೀಡಿ ಐಪಿಎಲ್ 2021 ರಲ್ಲಿ ಕಮ್ಬ್ಯಾಕ್ ಮಾಡುತ್ತೇವೆ ಎಂಬ ಮಾತನ್ನು ಅಕ್ಷರಶಃ ನಿಜ ಮಾಡಿದ್ದಾರೆ. ಆದರೆ, ಮುಂದಿನ ವರ್ಷದ ಐಪಿಎಲ್‌ಗೆ (IPL 2022) ಮೆಗಾ ಆಕ್ಷನ್ ಇರುವ ಕಾರಣ ಎಲ್ಲ ತಂಡಗಳಲ್ಲಿ ದೊಡ್ಡ ಬದಲಾವಣೆ ಆಗಲಿದೆ. ಒಂದು ತಂಡದಲ್ಲಿ ಕನಿಷ್ಠ ಎರಡು ಅಥವಾ ಮೂರು ಆಟಗಾರರನ್ನು ಮಾತ್ರ ಉಳಿಸಿಕೊಳ್ಳಬಹುದಾಗಿದೆ ಎಂಬ ಮಾತುಕೂಡ ಇದೆ. ಇದರ ನಡುವೆ ಧೋನಿ ಸಿಎಸ್‌ಕೆ (CSK) ತಂಡದಲ್ಲೇ ಮುಂದುವರೆಯುತ್ತಾರ ಎಂಬ ಗೊಂದಲ ಕೂಡ ಇದೆ. ಇದಕ್ಕೆ ಸಿಎಸ್‌ಕೆ ಮಾಲೀಕ ಎನ್ ಶ್ರೀನಿವಾಸನ್ (N Srinivasan) ಉತ್ತರ ನೀಡಿದ್ದಾರೆ.
ಐಪಿಎಲ್ ಟ್ರೋಫಿಯೊಂದಿಗೆ ಚೆನ್ನೈನ ವೆಂಕಟಾಚಲಪತಿ ದೇಗುಲಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮಗಳೋಂದಿಗೆ ಮಾತನಾಡಿದ ಶ್ರೀನಿವಾಸನ್, ಐಪಿಎಲ್‌ನಲ್ಲಿ ಸಿಎಸ್‌ಕೆ ತಂಡದ ಗೆಲುವು ಇಡೀ ಚೆನ್ನೈಯನ್ನು ವಿಶ್ವದ ಅಗ್ರಸ್ಥಾನಕ್ಕೇರಿಸಿದೆ ಎಂದಿದ್ದಾರೆ. ಧೋನಿಯನ್ನು ಮುಂದಿನ ಆವೃತ್ತಿಯಲ್ಲಿ ರೀಟೈನ್ ಮಾಡಿಕೊಳ್ಳುವ ಬಗ್ಗೆ ಈಗಲೇ ಏನು ಹೇಳಲು ಸಾಧ್ಯವಿಲ್ಲ. ರೀಟೈನ್ ಬಗ್ಗೆ ನಿಯಮಾವಳಿಗಳು ಇನ್ನೂ ಬಂದಿಲ್ಲ. ಧೋನಿ ಸಿಎಸ್‌ಕೆ ತಂಡದ ಮತ್ತು ತಮಿಳುನಾಡಿದ ಅವಿಭಾಜ್ಯ ಅಂಗವಾಗಿದ್ದಾರೆ. ಧೋನಿಯಿಲ್ಲದೆ ಸಿಎಸ್‌ಕೆ ಇಲ್ಲ, ಸಿಎಸ್‌ಕೆ ಇಲ್ಲದೆ ಧೋನಿಯಿಲ್ಲ” ಎಂದು ಹೇಳಿದ್ದಾರೆ.
“ಧೋನಿ ರಾಷ್ಟ್ರೀಯ ತಂಡದ ಮೆಂಟರ್ ಆಗಿ ಕರ್ತವ್ಯದಲ್ಲಿದ್ದಾರೆ. ಈ ರಾಷ್ಟ್ರೀಯ ಕರ್ತವ್ಯ ಮುಗಿಸಿದ ನಂತರ ತಮಿಳುನಾಡಿಗೆ ಆಗಮಿಸಲಿದ್ದಾರೆ. ಆ ಸಂದರ್ಭದಲ್ಲಿ ಚೆನ್ನೈನ ಎಂ ಚಿದಂಬರಂ ಸ್ಟೇಡಿಯಂನಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಿ ಮುಖ್ಯಮಂತ್ರಿ ಸ್ಟಾಲಿನ್ ಅವರ ಜೊತೆಗೆ ಅಭಿಮಾನಿಗಳ ಸಮ್ಮುಖದಲ್ಲಿ ಸಂಭ್ರಮಾಚರಣೆ ಮಾಡುವುದಾಗಿ” ಶ್ರೀನಿವಾಸನ್ ತಿಳಿಸಿದ್ದಾರೆ.
14ನೇ ಆವೃತ್ತಿ ಮುಕ್ತಾಯದ ಬಳಿಕ ಆಟಗಾರನಲ್ಲದಿದ್ದರೂ ಮುಂದಿನ ವರ್ಷವೂ ಸಿಎಸ್‌ಕೆ ತಂಡದ ಜತೆಯಲ್ಲೇ ಇರುವೆ ಎಂಬುದನ್ನು ಸ್ಪಷ್ಟಪಡಿಸಿದ್ದ ಧೋನಿ, ಮುಂದಿನ 10 ವರ್ಷಗಳ ಅವಧಿಗೆ ಸಿಎಸ್‌ಕೆ ತಂಡದ ರೂಪುರೇಷೆ ಸಿದ್ಧಪಡಿಸಬೇಕಾಗಿದೆ ಎಂದಿದ್ದರು. ಮುಂದಿನ ವರ್ಷದ ಐಪಿಎಲ್‌ಗೆ ಮುನ್ನ ಆಟಗಾರರ ಮೆಗಾ ಹರಾಜಿಗೆ ಪೂರ್ವಭಾವಿಯಾಗಿ ಬಿಸಿಸಿಐ ಪ್ರಕಟಿಸುವ ರಿಟೇನ್ ನಿಯಮಾವಳಿಯ ಆಧಾರದಲ್ಲಿ ತಮ್ಮ ಭವಿಷ್ಯ ನಿರ್ಧಾರವಾಗಲಿದೆ ಎಂದಿರುವ ಧೋನಿ, ಮುಂದಿನ ಬಾರಿ ಚೆನ್ನೈನಲ್ಲಿ ಪಂದ್ಯ ಆಡುವ ಹಂಬಲವನ್ನೂ ವ್ಯಕ್ತಪಡಿಸಿದ್ದರು.
Ajinkya Rahane: ಮುಂಬೈ ತಂಡಕ್ಕೆ ಹೊಸ ನಾಯಕನ ಘೋಷಣೆ: ಕ್ಯಾಪ್ಟನ್ ಪಟ್ಟತೊಟ್ಟ ಅಜಿಂಕ್ಯಾ ರಹಾನೆ
SuryaKumar Yadav: ಇಂಗ್ಲೆಂಡ್ ವಿರುದ್ಧ ಗೆದ್ದ ಖುಷಿಯ ನಡುವೆ ಟೀಮ್ ಇಂಡಿಯಾಕ್ಕೆ ಆಘಾತ: ಸ್ಟಾರ್ ಬ್ಯಾಟರ್ ಅನುಮಾನ?
(N Srinivasan owner of CSK emphatically stated that there is no CSK without MS Dhoni)