Ajinkya Rahane: ಮುಂಬೈ ತಂಡಕ್ಕೆ ಹೊಸ ನಾಯಕನ ಘೋಷಣೆ: ಕ್ಯಾಪ್ಟನ್ ಪಟ್ಟತೊಟ್ಟ ಅಜಿಂಕ್ಯಾ ರಹಾನೆ

Ajinkya Rahane: ಮುಂಬೈ ತಂಡಕ್ಕೆ ಹೊಸ ನಾಯಕನ ಘೋಷಣೆ: ಕ್ಯಾಪ್ಟನ್ ಪಟ್ಟತೊಟ್ಟ ಅಜಿಂಕ್ಯಾ ರಹಾನೆ
Ajinkya Rahane

Mumbai squad for Syed Mushtaq Ali Trophy: ಮುಂಬೈ ಕ್ರಿಕೆಟ್​ ಅಸೋಸಿಯೇಷನ್​​​​ ಹಿರಿಯ ಆಯ್ಕೆಗಾರರ ಸಮಿತಿ 20 ಸದಸ್ಯರ ತಂಡ ಆಯ್ಕೆ ಮಾಡಿದ್ದು, ಅಜಿಂಕ್ಯ ರಹಾನೆ ಅವರಿಗೆ ತಂಡದ ನಾಯಕ ಪಟ್ಟ ಕೊಟ್ಟರೆ, ಪೃಥ್ವಿ ಶಾ ಅವರಿಗೆ ಉಪ ನಾಯಕನ ಜವಾಬ್ದಾರಿ ನೀಡಲಾಗಿದೆ.

TV9kannada Web Team

| Edited By: Vinay Bhat

Oct 19, 2021 | 10:50 AM

ಭಾರತ ಟೆಸ್ಟ್ ಕ್ರಿಕೆಟ್ ತಂಡದ ಉಪ ನಾಯಕ ಅಜಿಂಕ್ಯಾ ರಹಾನೆ (Ajinkya Rahane) ದೇಶೀಯ ಕ್ರಿಕೆಟ್​ಗೆ ಕಮ್​ಬ್ಯಾಕ್ ಮಾಡಿದ್ದು, ಇದೀಗ ಮುಂಬರುವ ಸೈಯದ್ ಮುಸ್ತಾಕ್​ ಅಲಿ ಟಿ-20 ಟೂರ್ನಿಯಲ್ಲಿ (Syed Mushtaq Ali Trophy) ಮುಂಬೈ ತಂಡವನ್ನು (Mumbai Team) ಮುನ್ನಡೆಸಲಿದ್ದಾರೆ. 2022ರ ಸಾಲಿನ ಟೂರ್ನಿಗೆ 20 ಆಟಗಾರರ ಬಲಿಷ್ಠ ತಂಡವನ್ನು ಮುಂಬೈ ಕ್ರಿಕೆಟ್‌ ಸಂಸ್ಥೆ (Mumbai Cricket) ಸೋಮವಾರ ಪ್ರಕಟ ಮಾಡಿದೆ. ಭಾರತ ತಂಡದ ಮಾಜಿ ವೇಗದ ಬೌಲರ್‌ ಸಲಿಲ್‌ ಅಂಕೋಲ ನೇತೃತ್ವದ ಆಯ್ಕೆ ಸಮಿತಿ ಮುಂಬೈ ತಂಡವನ್ನು ಆಯ್ಕೆ ಮಾಡಿದೆ. ಟಿ20 ಕ್ರಿಕೆಟ್‌ನಲ್ಲಿ ತಮ್ಮ ಎಂದಿನ ಲಯ ಕಂಡುಕೊಳ್ಳುವ ಹುಡುಕಾಟದಲ್ಲಿ ಇರುವ ಅಜಿಂಕ್ಯ ರಹಾನೆ ಅವರಿಗೆ ಮುಂಬೈ ತಂಡದ ನಾಯಕ ಪಟ್ಟ ಕೊಟ್ಟರೆ, ಪೃಥ್ವಿ ಶಾ (Prithvi Shaw) ಅವರಿಗೆ ಉಪ ನಾಯಕನ ಜವಾಬ್ದಾರಿ ನೀಡಲಾಗಿದೆ.

ಮುಂಬೈ ಕ್ರಿಕೆಟ್​ ಅಸೋಸಿಯೇಷನ್​​​​ ಹಿರಿಯ ಆಯ್ಕೆಗಾರರ ಸಮಿತಿ 20 ಸದಸ್ಯರ ತಂಡ ಆಯ್ಕೆ ಮಾಡಿದ್ದು, ಇದರಲ್ಲಿ ಯಶಸ್ವಿ ಜೈಸ್ವಾಲ್​ ಕೂಡ ಸ್ಥಾನ ಪಡೆದುಕೊಂಡಿದ್ದಾರೆ. ಕರಾವಳಿ ಮೂಲದ ತನುಷ್‌ ಕೋಟ್ಯಾನ್‌, ದೀಪಕ್‌ ಶೆಟ್ಟಿ ಕೂಡ ತಂಡದಲ್ಲಿದ್ದಾರೆ. ನವೆಂಬರ್​ 4ರಂದು ನಡೆಯಲಿರುವ ಮೊದಲ ಪಂದ್ಯದಲ್ಲಿ ಕರ್ನಾಟಕ ವಿರುದ್ಧ ಮುಂಬೈ ತಂಡ ಸೆಣಸಾಟ ನಡೆಸಲಿದೆ.

ತಂಡದ ಭಾಗವಾಗಬೇಕಾಗಿದ್ದ ರೋಹಿತ್ ಶರ್ಮಾ, ಶ್ರೇಯಸ್​​ ಅಯ್ಯರ್ ಹಾಗೂ ಶಾರ್ದೂಲ್​ ಠಾಕೂರ್​ ಸದ್ಯ ಐಸಿಸಿ ಟಿ20 ವಿಶ್ವಕಪ್​ ತಂಡದಲ್ಲಿರುವ  ಕಾರಣ, ಅವರಿಗೆ ಮಣೆ ಹಾಕಿಲ್ಲ. ಕಳೆದ ಕೆಲ ವರ್ಷಗಳಿಂದ ಕೇವಲ ಟೆಸ್ಟ್​ ತಂಡದ ಭಾಗವಾಗಿರುವ ಅಂಜಿಕ್ಯಾ ರಹಾನೆ, ಇದೀಗ ಚುಟುಕು ಕ್ರಿಕೆಟ್​ನಲ್ಲಿ ಮತ್ತೊಮ್ಮೆ ತಮ್ಮ ಬ್ಯಾಟಿಂಗ್​ ಕೌಶಲ್ಯ ಪ್ರದರ್ಶಿಸಿ, ನಿಗದಿತ ಓವರ್​ಗಳ ಕ್ರಿಕೆಟ್​ನಲ್ಲಿ ಅವಕಾಶ ಗಿಟ್ಟಿಸಿಕೊಳ್ಳಬೇಕಾಗಿದೆ.

ಬೌಲಿಂಗ್‌ ವಿಭಾಗದಲ್ಲಿ ಅನುಭವಿ ಧವಳ್‌ ಕುಲಕರ್ಣಿ ಸ್ಥಾನ ಪಡೆದಿದ್ದು, ಅವರೊಟ್ಟಿಗೆ ತುಶಾರ್‌ ದೇಶಪಾಂಡೆ ಮೋಹಿತ್‌ ಅವಸ್ಥಿ ಹಾಗೂ ಎಡಗೈ ವೇಗದ ಬೌಲರ್‌ ರಾಯ್‌ಸ್ಟನ್‌ ಡಿಯಾಸ್‌ ಸ್ಥಾನ ಪಡೆದಿದ್ದಾರೆ. ಶಾಮ್ಸ್‌ ಮುಲಾನಿ ತಂಡದ ಸ್ಪಿನ್‌ ಬೌಲಿಂಗ್‌ ವಿಭಾಗದ ಸಾರಥ್ಯ ಹೊಂದಿದ್ದಾರೆ. ಮುಂಬೈ ತಂಡ ತನ್ನ ಎಲ್ಲಾ ಲೀಗ್ ಪಂದ್ಯಗಳನ್ನು ಗುವಾಹಟಿಯಲ್ಲಿ ಆಡಲಿದೆ.

ಮುಂಬಯಿ ತಂಡ: ಅಜಿಂಕ್ಯ ರಹಾನೆ (ನಾಯಕ), ಪೃಥ್ವಿ ಶಾ (ಉಪ ನಾಯಕ), ಆದಿತ್ಯ ತಾರೆ, ಶಿವಂ ದುಬೆ, ತುಷಾರ್‌ ದೇಶಪಾಂಡೆ, ಸಫ‌ìರಾಜ್‌ ಖಾನ್‌, ಪ್ರಶಾಂತ್‌ ಸೋಲಂಕಿ, ಶಮ್ಸ್‌ ಮುಲಾನಿ, ಅಥರ್ವ ಅಂಕೋಲೆಕರ್‌, ಧವಳ್‌ ಕುಲಕರ್ಣಿ, ಹಾರ್ದಿಕ್‌ ತಮೋರೆ, ಮೋಹಿತ್‌ ಅವಸ್ತಿ, ಸಿದ್ದೇಶ್‌ ಲಾಡ್‌, ಸಾಯಿರಾಜ್‌ ಪಾಟೀಲ್‌, ಅಮಾನ್‌ ಖಾನ್‌, ಅರ್ಮಾನ್‌ ಜಾಫ‌ರ್‌, ಯಶಸ್ವಿ ಜೈಸ್ವಾಲ್‌, ತನುಷ್‌ ಕೋಟ್ಯಾನ್‌, ದೀಪಕ್‌ ಶೆಟ್ಟಿ, ರಾಯ್‌ಸ್ಟನ್‌ ಡಯಾಸ್‌.

SuryaKumar Yadav: ಇಂಗ್ಲೆಂಡ್ ವಿರುದ್ಧ ಗೆದ್ದ ಖುಷಿಯ ನಡುವೆ ಟೀಮ್ ಇಂಡಿಯಾಕ್ಕೆ ಆಘಾತ: ಸ್ಟಾರ್ ಬ್ಯಾಟರ್ ಅನುಮಾನ?

2021 ICC Mens T20 World Cup: ಟಿ20 ವಿಶ್ವಕಪ್​ನಲ್ಲಿಂದು ಎರಡು ಪಂದ್ಯ: ಕುತೂಹಲ ಕೆರಳಿಸಿದ ಬಾಂಗ್ಲಾ-ಓಮನ್ ಪಂದ್ಯ

(Ajinkya Rahane will lead Mumbai squad in the upcoming Syed Mushtaq Ali T20 tournament)

Follow us on

Most Read Stories

Click on your DTH Provider to Add TV9 Kannada