Shocking Video: ಚಲಿಸುತ್ತಿರುವ ರೈಲು ಹತ್ತಲು ಹೋಗಿ ಜಾರಿ ಬಿದ್ದ 8 ತಿಂಗಳ ಗರ್ಭಿಣಿ
Viral Video: ಗಡಿಬಿಡಿಯಲ್ಲಿ ಚಲಿಸುತ್ತಿರುವ ರೈಲು ಹತ್ತಲು ಮುಂದಾಗಿದ್ದ ಗರ್ಭಿಣಿ ಕಾಲು ಜಾರಿ ಕೆಳಕ್ಕೆ ಬಿದ್ದಿದ್ದಾರೆ. ಘಟನೆ ಗಮನಿಸಿದ ಆರ್ಪಿಎಫ್ ಕಾನ್ಸ್ಟೇಬಲ್ ತಡಮಾಡದೇಮಹಿಳೆಯನ್ನು ಪ್ರಾಣಾಪಾಯದಿಂದ ರಕ್ಷಿಸಿದ್ದಾರೆ.
ಮುಂಬೈ: ರೈಲು ಹತ್ತಲು ಪ್ರಯತ್ನಿಸುತ್ತಿದ್ದ ಗರ್ಭಿಣಿ ಮಹಿಳೆ ಕಾಲು ಜಾರಿ ಕೆಳಕ್ಕೆ ಬಿದ್ದಿದ್ದಾರೆ. ತಕ್ಷಣವೇ ಗಮನಿಸಿದ ಆರ್ಪಿಎಫ್ ಕಾನ್ಸ್ಟೇಬಲ್ ಅವರನ್ನು ಪ್ರಾಣಾಪಾಯದಿಂದ ರಕ್ಷಿಸಿದ್ದಾರೆ. ಘಟನೆ ಸೋಮವಾರ (ಅ.18) ಕಲ್ಯಾಣ್ ರೈಲ್ವೆ ಸ್ಟೇಷನ್ನಲ್ಲಿ ನಡೆದಿದೆ. ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಕಲ್ಯಾಣ್ ರೈಲ್ವೆ ಸ್ಟೇಷನ್ ಪ್ಲಾಟ್ ಫಾರ್ಮ್ ನಂಬರ್ 4ರಲ್ಲಿ ಘಟನೆ ನಡೆದಿದೆ. ಪ್ಲಾಟ್ ಫಾರ್ಮ್ ಮತ್ತು ರೈಲಿನ ನಡುವಿನ ಅಂತರದಲ್ಲಿ ಗರ್ಭಿಣಿ ಮಹಿಳೆ ಸಿಕ್ಕಿಹಾಕಿಕೊಳ್ಳುತ್ತಿದ್ದರು. ತಡಮಾಡದೇ ಆರ್ಪಿಎಫ್ ಕಾನ್ಸ್ಟೇಬಲ್ ಮಹಿಳೆಯನ್ನು ರಕ್ಷಿಸಿದ್ದಾರೆ.
21 ವರ್ಷದ ವಂದನಾ ಅವರ ಪತಿ ಚಂದ್ರೇಶ್ ಅವರ ಜತೆ ಕಲ್ಯಾಣದಿಂದ ಗೋರಖ್ಪುರಕ್ಕೆ ತೆರಳಬೇಕಿತ್ತು. ಆಗಲೇ ಅವರಿಗೆ ತಡವಾಗಿತ್ತು. ಇನ್ನೇನು ರೈಲು ಹೊರಟಿತ್ತು. ಆ ವೇಳೆ ಗಡಿಬಿಡಿಯಲ್ಲಿ ರೈಲು ಹತ್ತಲು ಮುಂದಾದಾಗ ಘಟನೆ ನಡೆದಿದೆ. 8 ತಿಂಗಳ ಗರ್ಭಿಣಿ ವಂದನಾ ರೈಲು ಹೊರಟಿದೆ ಎಂಬ ಗಡಿಬಿಡಿಯಲ್ಲಿ ರೈಲು ಹತ್ತಲು ಮುಂದಾಗಿದ್ದಾರೆ. ಈ ಸಮಯದಲ್ಲಿ ಹಿಡಿತ ತಪ್ಪಿ ಜಾರಿ ಕೆಳಕ್ಕೆ ಬಿದ್ದಿದ್ದಾರೆ. ಘಟನೆ ಗಮನಿಸಿದ ಆರ್ಪಿಎಫ್ ಕಾನ್ಸ್ಟೇಬಲ್ ಮಹಿಳೆಯನ್ನು ರಕ್ಷಿಸಿದ್ದಾರೆ.
Railway Protection Force (RPF) staff Shri S R Khandekar saved the life of a pregnant woman who had slipped while attempting to de-board a moving train at Kalyan railway station today.
Railway appeals to passengers not to board or de-board a running train.@RailMinIndia pic.twitter.com/68imlutPaY
— Shivaji M Sutar (@ShivajiIRTS) October 18, 2021
ಮುಂಬೈನ ಸೆಂಟ್ರಲ್ ರೈಲ್ವೇಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಶಿವಾಜಿ ಸುತಾರ್ ಅವರು ಸಿಸಿಟಿವಿ ದೃಶ್ಯವನ್ನು ಟ್ವೀಟರ್ನಲ್ಲಿ ಹಂಚಿಕೊಂಡಿದ್ದಾರೆ. ಕಲ್ಯಾಣ್ ರೈಲ್ವೇ ಸ್ಟೇಷನ್ನ ಆರ್ಪಿಎಫ್ ಅಧಿಕಾರಿ ಎಸ್.ಆರ್ ಖಂದೇಕರ್ ಮಹಿಳೆಯನ್ನು ಪ್ರಾಣಾಪಾಯದಿಂದ ರಕ್ಷಿಸಿದ್ದಾರೆ. ಚಲಿಸುತ್ತಿರುವ ರೈಲನ್ನು ಹತ್ತುವುದು ಅಥವಾ ಇಳಿಯುವ ಸಾಹಸ ಮಾಡಬೇಡಿ ಎಂದು ಪ್ರಯಾಣಿಕರಲ್ಲಿ ಮನವಿ ಮಾಡಿದ್ದಾರೆ. ಇತರರು ಖಂದೇಕರ್ ಅವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜತೆಗೆ ಸ್ಥಳದಲ್ಲಿ ಗಾಬರಿಯಾಗಿದ್ದ ಮಹಿಳೆಯನ್ನು ಸಮಾಧಾನಪಡಿಸಲು ಮುಂದಾಗಿದ್ದಾರೆ.
ಇದನ್ನೂ ಓದಿ:
Shocking Video: ಬೀಳುತ್ತಿದ್ದ ಗೋಡೆಯನ್ನು ತಡೆದು ಮಗುವನ್ನು ರಕ್ಷಿಸಿದ ಮಹಿಳೆ; ವಿಡಿಯೊ ನೋಡಿ
Published On - 11:01 am, Tue, 19 October 21