Viral Video: ರಾನು ಮಂಡಲ್ ಕಂಠದಲ್ಲಿ ‘ಬಚ್ಪನ್​ ಕಾ ಪ್ಯಾರ್’ ಹಾಡು; ವಿಡಿಯೋ ಫುಲ್​ ವೈರಲ್​

Ranu Mondal: ಇದೀಗ ಬಚ್ಪನ್ ಕಾ ಪ್ಯಾರ್ ಹಾಡನ್ನು ರಾನು ಮಂಡಲ್ ಹಾಡಿದ್ದಾರೆ. 15 ಸೆಕೆಂಡುಗಳ ವಿಡಿಯೋ ಕ್ಲಿಪ್ಅನ್ನು ಯೂಟ್ಯೂಬ್​ನಲ್ಲಿ ಹಂಚಿಕೊಳ್ಳಲಾಗಿದೆ.

Viral Video: ರಾನು ಮಂಡಲ್ ಕಂಠದಲ್ಲಿ ‘ಬಚ್ಪನ್​ ಕಾ ಪ್ಯಾರ್’ ಹಾಡು; ವಿಡಿಯೋ ಫುಲ್​ ವೈರಲ್​
ರಾನು ಮಂಡಲ್
Follow us
TV9 Web
| Updated By: shruti hegde

Updated on:Oct 19, 2021 | 12:56 PM

ಈ ಹಿಂದೆ ರಾನು ಮಂಡಲ್ ಹಾಡಿದ್ದ ‘ಮನಿಕೆ ಮಗೆ ಹಿತೆ ಹಾಡು ಫುಲ್ ವೈರಲ್ ಆಗಿತ್ತು. ಆ ಬಳಿಕ ರಾನು ಮಂಡಲ್ ಮತ್ತೊಂದು ಹೊಸ ಹಾಡಿನೊಂದಿಗೆ ಸುದ್ದಿಯಲ್ಲಿದ್ದಾರೆ. ಇದೀಗ ಬಚ್ಪನ್ ಕಾ ಪ್ಯಾರ್ ಹಾಡನ್ನು ರಾನು ಮಂಡಲ್ ಹಾಡಿದ್ದಾರೆ. 15 ಸೆಕೆಂಡುಗಳ ವಿಡಿಯೋ ಕ್ಲಿಪ್ಅನ್ನು ಯೂಟ್ಯೂಬ್​ನಲ್ಲಿ ಹಂಚಿಕೊಳ್ಳಲಾಗಿದೆ. ಬಚ್ಪನ್ ಕ್ಯಾ ಪ್ಯಾರ್ ಹಾಡು ಸಾಮಾಜಿಕ ಜಾಲತಾಣದಲ್ಲಿ ಫುಲ್​ ವೈರಲ್ ಆಗಿದೆ. ಮೂಲತಃ ಕಮಲೇಶ್ ಬರೋಟ್ ಈ ಹಾಡನ್ನು ಹಾಡಿದ್ದಾರೆ ಮತ್ತು ಸಾಹಿತ್ಯವನ್ನು ಪಿ.ಪಿ.ಬರಿಯಾ ಅವರು ಬರೆದಿದ್ದಾರೆ. ಇದರ ಮೂಲ ಹಾಡಿನ ಶೀರ್ಷಿಕೆ ಬಚ್ಪನ್ ಕಾ ಪ್ಯಾರ್, ಸೋನು ಮೇರಿ ಡಾರ್ಲಿಂಗ್. ಇದೀಗ ರಾನು ಮಂಡಲ್ ಕಂಠದಲ್ಲಿ ಈ ಹಾಡು ಕೇಳಿ ಬಂದಿದೆ ಫುಲ್ ಖುಷಿಯಲ್ಲಿ ಅವರು ಹಾಡನ್ನು ಹೇಳುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಕಳೆದ ಕೆಲವು ದಿನಗಳಿಂದ ಈ ಹಾಡು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮೊದಲಿಗೆ ಯೂಟ್ಯೂಬ್​ನಲ್ಲಿ ವಿಡಿಯೋ ಹಡಿಬಿಡಲಾಗಿದ್ದು, ಕೆಂಪು ಬಣ್ಣದ ಟೀಶರ್ಟ್ ಧರಿಸಿ ಖುರ್ಚಿಯ ಮೇಲೆ ಕುಳಿತು ರಾನು ಮಂಡಲ್ ಹಾಡು ಹೇಳುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಯೂಟ್ಯೂಬ್ ರೊಂಧನ್ ಪೊರಿಚೋಯ್​ನಲ್ಲಿ ರಾನು ಮಂಡಲ್ ಹಾಡಿರುವ ವಿಡಿಯೋ ಕ್ಲಿಪ್ ಸಖತ್ ವೈರಲ್ ಆಗಿದೆ. ಈ ಹಾಡಿಗೆ ಸೋಷಿಯಲ್ ಮೀಡಿಯಾದಲ್ಲಿ ಹಲವರು ಡಬ್​ಮ್ಯಾಶ್​ ಮಾಡುತ್ತಿದ್ದಾರೆ. ಈ ಹಿಂದೆ ಗಾಯಕ ಬಾದ್ ಶಾ ಸಹ ಹಾಡನ್ನು ರಿಮಿಕ್ಸ್ ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

View this post on Instagram

A post shared by BADSHAH (@badboyshah)

ಇತ್ತೀಚೆಗೆ ಬಚ್ಪನ್ ಕಾ ಪ್ಯಾರ್ ಹಾಡು ಸಾಕಷ್ಟು ಸದ್ದು ಮಾಡಿತು. ಇನ್​ಸ್ಟಾಗ್ರಾಂನಲ್ಲಿ ಹಾಡಿನ ರೀಲ್ ವೈರಲ್ ಆದ ನಂತರ ಇದರ ಮೂಲ ಆಡಿಯೋ ಬಗ್ಗೆ ತಿಳಿದುಕೊಳ್ಳಲು ನೆಟ್ಟಿಗರು ಹೆಚ್ಚು ಕುತೂಹಲರಾದರು. ಆಗ ಪುಟ್ಟ ಬಾಲಕ ಸಹದೇವ್ ಹಾಡುತ್ತಿರುವ ಹಾಡು ಫುಲ್ ಸುದ್ದಿಯಾಯಿತು. ಛತ್ತೀಸ್​ಗಢ ಮೂಲದ ಬಾಲಕ ಸಹದೇವ್ ಈ ಹಾಡನ್ನು ಹೇಳಿ ಜನರ ಗಮನ ಸೆಳೆದಿದ್ದರು. ಆತನ ಪ್ರತಿಭೆ ಮೆಚ್ಚಿ ಛತ್ತೀಸ್​ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಬಾಲಕನನ್ನು ಸನ್ಮಾನಿಸಿದ್ದರು.

ಇದನ್ನೂ ಓದಿ:

Viral News: ಮನೆಯ ಹಿಂಭಾಗದಲ್ಲಿ 90ಕ್ಕೂ ಹೆಚ್ಚು ಹಾವಿನ ಮರಿಗಳನ್ನು ಕಂಡು ಬೆಚ್ಚಿಬಿದ್ದ ಮಹಿಳೆ!

Viral Video: ಬೈಕ್ ಹತ್ತಿ ಕನ್ನಡಿ ನೋಡಿಕೊಳ್ಳುತ್ತಿದ್ದ ಕೋತಿಯ ರಿಯಾಕ್ಷನ್ ಹೇಗಿತ್ತು ನೋಡಿ

Published On - 12:35 pm, Tue, 19 October 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ