‘ಬಾಹುಬಲಿ ಮೊಮೊ’ ಚಿನ್ನದ ಲೇಪನದಿಂದ ತಯಾರಾದ ತಿನಿಸು ಎಂದಾದರೂ ತಿಂದಿದ್ದೀರಾ? ಬೆಲೆ ನೋಡಿ ದಂಗಾಗ್ಬೇಡಿ!

Bahubali Momo: ಬಾಹುಬಲಿ ಮೊಮೊ ಎಂದು ಕರೆಯಲ್ಪಡುವ ಈ ತಿನಿಸು ಇದರ ಗಾತ್ರದಿಂದ ಮಾತ್ರ ವಿಶೇಷತೆ ಪಡೆದಿಲ್ಲ! ಇದರಲ್ಲಿನ ಮಸಾಲೆ ಮತ್ತು ರುಚಿಯ ಜತೆಗೆ ಚಿನ್ನದ ಲೇಪನದಿಂದ ತಯಾರಾದ ಈ ತಿನಿಸು ಹೆಚ್ಚು ಪ್ರಸಿದ್ದತೆ ಪಡೆಯುತ್ತಿದೆ.

‘ಬಾಹುಬಲಿ ಮೊಮೊ’ ಚಿನ್ನದ ಲೇಪನದಿಂದ ತಯಾರಾದ ತಿನಿಸು ಎಂದಾದರೂ ತಿಂದಿದ್ದೀರಾ? ಬೆಲೆ ನೋಡಿ ದಂಗಾಗ್ಬೇಡಿ!
ಬಾಹುಬಲಿ ಮೊಮೊ

ಭಾರತೀಯರು ಹೊಸ ಹೊಸ ತಿಂಡಿಗಳ ರುಚಿ ಸವಿಯಲು ಹೆಚ್ಚು ಕಾತುರರಾಗಿರುತ್ತಾರೆ ಎಂದರೆ ತಪ್ಪಾಗಲಾರದು. ಮಸಾಲೆ, ಹುಳಿ, ಸಿಹಿ, ಖಾರ ಹೀಗೆ ನಾನಾ ವಿಧದ, ವಿವಿಧ ಹೆಸರಿನ ತಿಂಡಿಗಳು ಹೆಚ್ಚು ಇಷ್ಟವಾಗುತ್ತವೆ. ಇದೀಗ ಫುಡ್ ಬ್ಲಾಗರ್ ಹಂಚಿಕೊಂಡ ವಿಡಿಯೋ ಕ್ಲಿಪ್​ನಲ್ಲಿ ಬರೋಬ್ಬರಿ 2ಕೆಜಿಯ ದೈತ್ಯಾಕಾರದ ಮೊಮೊ ಕಾಣಿಸುತ್ತಿದೆ. ಮುಂಬೈನಲ್ಲಿ ಬಾಹುಬಲಿ ಮೊಮೊ ಎಂದು ಕರೆಯಲ್ಪಡುವ ಈ ತಿನಿಸು ಇದರ ಗಾತ್ರದಿಂದ ಮಾತ್ರ ವಿಶೇಷತೆ ಪಡೆದಿಲ್ಲ! ಇದರಲ್ಲಿನ ಮಸಾಲೆ ಮತ್ತು ರುಚಿಯ ಜತೆಗೆ ಚಿನ್ನದ ಲೇಪನದಿಂದ ತಯಾರಾದ ಈ ತಿನಿಸು ಹೆಚ್ಚು ಪ್ರಸಿದ್ದತೆ ಪಡೆಯುತ್ತಿದೆ.

ಇನ್ಸ್ಟಾಗ್ರಾಂನಲ್ಲಿ Whatafoodiegirl ಎಂಬ ಖಾತೆಯಿಂದ ದಿಶಾ ಎನ್ನುವವರು ಈ ದೈತ್ಯಾಕಾರದ ತಿಂಡಿಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ರೀಲ್ ಹಂಚಿಕೊಂಡ ದಿಶಾ, ಭಾರತದಲ್ಲಿ ಮೊದಲ ಬಾರಿಗೆ.. ಈ ದೈತ್ಯಾಕಾರದ 2 ಕೆಜಿಯ ಮೊಮೊ.. ತರಕಾರಿಗಳು, ಚೀಸ್ ಮತ್ತು 24 ಕ್ಯಾರಟ್ ಚಿನ್ನದ ಲೇಪನದಿಂದ ತಯಾರಾಗಿದೆ. ಒಳ್ಳೆಯ ರುಚಿಯಿದೆ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ಪೋಸ್ಟ್ ಮಾಡಿದ್ದಾರೆ.

ಇದರಲ್ಲಿ ಮೂರು ವಿಧದ ಸಾಸ್​ಗಳು ಜತೆಗೆ ಸಿಹಿ ತಿಂಡಿಯಾಗಿ ಎರಡು ಚಾಕಲೇಟ್ ಮೊಮೊ ಇದೆ. 6 ರಿಂದ 8 ಜನ ಆರಾಮಾಗಿ ತಿನ್ನಬಹುದು ಎಂದು ತಿಳಿಸಿದ್ದಾರೆ. ವಿಡಿಯೋದಲ್ಲಿ ಗಮನಿಸುವಂತೆ, ಆವಿಯಲ್ಲಿ ಬೇಯುತ್ತಿದ್ದಂತೆಯೇ ಕಂಟೇರ್​ನಲ್ಲಿ ಬರುತ್ತದೆ, ಮುಚ್ಚಳವನ್ನು ತೆಗೆದಾಗ ಚಿನ್ನದ ಲೇಪಿತ ದೈತ್ಯ ಮೊಮೊ ಕಂಡು ಬರುತ್ತದೆ. ಇವೆಲ್ಲವೂ ಕೇವಲ 1,299 ರೂಪಾಯಿಗೆ ಎಂದು ಪೋಸ್ಟ್​ನಲ್ಲಿ ತಿಳಿಸಲಾಗಿದೆ.

ವಿಡಿಯೋ ಪೋಸ್ಟ್ ಮಾಡಿದಾಗಿನಿಂದ ಸುಮಾರು 10 ಲಕ್ಷಕ್ಕೂ ಹೆಚ್ಚಿನ ವೀಕ್ಷಣೆಗಳನ್ನು ಪಡೆದುಕೊಂಡಿದೆ. ನೆಟ್ಟಿಗರು, ಅದರಲ್ಲಿಯೂ ಮೊಮೊ ಪ್ರಿಯರು ವಾಹ್! ಅದ್ಭುತವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಇನ್ನೊಬ್ಬರು, ಚಿನ್ನದ ಲೇಪನ ಕೂಡಾ ಇದೆ ಎಂದು ಆಶ್ಚರ್ಯಗೊಂಡಿದ್ದಾರೆ. ಇದೆ ರೀತಿ ತಿನಿಸು ಪ್ರಿಯರಿಂದ ನಾನಾ ಅಭಿಪ್ರಾಯಗಳು ಕೇಳಿ ಬಂದಿವೆ.

ಇದನ್ನೂ ಓದಿ:

Viral Video: ಬೈಕ್ ಹತ್ತಿ ಕನ್ನಡಿ ನೋಡಿಕೊಳ್ಳುತ್ತಿದ್ದ ಕೋತಿಯ ರಿಯಾಕ್ಷನ್ ಹೇಗಿತ್ತು ನೋಡಿ

Viral Video: ಯುವತಿ ಜತೆ ಸಕತ್ ಸ್ಟೆಪ್ ಹಾಕಿದ ಮುದ್ದಾದ ಬೆಕ್ಕು; ವಿಡಿಯೋ ನೋಡಿ

Click on your DTH Provider to Add TV9 Kannada