ರಘು ದೀಕ್ಷಿತ್ ಅಸಮಾಧಾನದ​ ಮಾತುಗಳಿಗೆ ಡಾರ್ಲಿಂಗ್​ ಕೃಷ್ಣ ಸ್ಪಷ್ಟನೆ

ಟಿವಿ9 ಕನ್ನಡದ ಜತೆಗಿನ ವಿಶೇಷ ಸಂದರ್ಶನದಲ್ಲಿ ಡಾರ್ಲಿಂಗ್​ ಕೃಷ್ಣ ಮಾತನಾಡಿದ್ದಾರೆ. ಈ ವೇಳೆ ಅವರು, ಎಲ್ಲಿ ಸಮಸ್ಯೆ ಆಯಿತು? ‘ಲವ್​ ಮಾಕ್ಟೇಲ್​ 2’ ಸಿನಿಮಾಗೆ ರಘು ದೀಕ್ಷಿತ್​ ಸಂಗೀತ ಸಂಯೋಜನೆ ಏಕೆ ಮಾಡುತ್ತಿಲ್ಲ ಎಂಬಿತ್ಯಾದಿ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

ರಘು ದೀಕ್ಷಿತ್​ ಅವರು ‘ಲವ್​ ಮಾಕ್ಟೇಲ್​’ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದರು. ಈ ಸಿನಿಮಾದ ಆಲ್ಬಂ ದೊಡ್ಡ ಮಟ್ಟದಲ್ಲಿ ಹಿಟ್​ ಆಗಿತ್ತು. ಆದರೆ, ಸಿನಿಮಾ ರಿಲೀಸ್ ಆದ ನಂತರದಲ್ಲಿ ಸಿನಿಮಾದ ನಟ, ನಿರ್ದೇಶಕ, ನಿರ್ಮಾಪಕ ಡಾರ್ಲಿಂಗ್​ ಕೃಷ್ಣ ಹಾಗೂ ರಘು ದೀಕ್ಷಿತ್​ ನಡುವೆ ಯಾವುದೂ ಸರಿ ಹೊಂದಲಿಲ್ಲ. ಇದಲ್ಲದೆ, ಇತ್ತೀಚೆಗೆ ಮಾತನಾಡಿದ್ದ ರಘು ದೀಕ್ಷಿತ್​ ಸರಿಯಾಗಿ ಸಂಭಾವನೆ ಸಿಕ್ಕಿರಲಿಲ್ಲ ಎಂಬರ್ಥದಲ್ಲಿ ಮಾತನಾಡಿದ್ದರು. ಈಗ ಇದಕ್ಕೆ ಡಾರ್ಲಿಂಗ್​ ಕೃಷ್ಣ ಸ್ಪಷ್ಟನೆ ನೀಡಿದ್ದಾರೆ.

ಟಿವಿ9 ಕನ್ನಡದ ಜತೆಗಿನ ವಿಶೇಷ ಸಂದರ್ಶನದಲ್ಲಿ ಡಾರ್ಲಿಂಗ್​ ಕೃಷ್ಣ ಮಾತನಾಡಿದ್ದಾರೆ. ಈ ವೇಳೆ ಅವರು, ಎಲ್ಲಿ ಸಮಸ್ಯೆ ಆಯಿತು? ‘ಲವ್​ ಮಾಕ್ಟೇಲ್​ 2’ ಸಿನಿಮಾಗೆ ರಘು ದೀಕ್ಷಿತ್​ ಸಂಗೀತ ಸಂಯೋಜನೆ ಏಕೆ ಮಾಡುತ್ತಿಲ್ಲ ಎಂಬಿತ್ಯಾದಿ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

ಇದನ್ನೂ ಓದಿ: ‘ಮದುವೆ ಆಗದೇ ಮಕ್ಕಳು ಮಾಡಿಕೊಂಡವರು ಇದ್ದಾರೆ’; ‘ನಿನ್ನ ಸನಿಹಕೆ’ ಚಿತ್ರದ ಬಗ್ಗೆ ರಘು ದೀಕ್ಷಿತ್​ ಮಾತು

Click on your DTH Provider to Add TV9 Kannada