ಬಸವ ಕಲ್ಯಾಣ ಐತಿಹಾಸಿಕ ಮಹತ್ವದ ಉಮಾ ಮಹೇಶ್ವರಿ ದೇವಸ್ಥಾನ ಇತಿಹಾಸ ಪುಟ ಸೇರುವಂತಾಗಿರುವುದಕ್ಕೆ ಸರ್ಕಾರವೇ ಕಾರಣ!

ಬಸವ ಕಲ್ಯಾಣ ಐತಿಹಾಸಿಕ ಮಹತ್ವದ ಉಮಾ ಮಹೇಶ್ವರಿ ದೇವಸ್ಥಾನ ಇತಿಹಾಸ ಪುಟ ಸೇರುವಂತಾಗಿರುವುದಕ್ಕೆ ಸರ್ಕಾರವೇ ಕಾರಣ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 21, 2021 | 5:26 PM

ಪುರಾತನ ದೇವಾಸ್ಥಾನಗಳ ಜೀರ್ಣೋದ್ಧಾರ ಕಾರ್ಯವನ್ನು ಇಲಾಖೆ ಕೈಗೆತ್ತಿಕೊಳ್ಳಬೇಕು. ಈ ಗುಡಿಯ ವಿಷಯದಲ್ಲಿ ಅದು ತನ್ನ ಜವಾಬ್ದಾರಿಯನ್ನು ಸಂಪೂರ್ಣವಾಗಿ ಮರೆತಿದೆ. ದೇವಸ್ಥಾನದ ಮೇಲ್ಛಾವಣಿ ಕುಸಿದಿದೆ ಮತ್ತು ಕಂಬಗಳಲ್ಲಿ ಬಿರುಕು ಕಾಣಿಸಿಕೊಂಡಿದೆ.

ರಾಜ್ಯದ ಮುಕುಟಮಣಿಯಾಗಿರುವ ಬೀದರ್ ಜಿಲ್ಲೆ ಕೇವಲ ಭೌಗೋಳಿಕವಾಗಿ ಆಥವಾ ಭೂಪಟದಲ್ಲಿ ಮಾತ್ರಾ ಶಿಖರದಲ್ಲಿದೆ. ಅಭಿವೃದ್ಧಿ ವಿಷಯಕ್ಕೆ ಬಂದರೆ, ಇದರ ಸ್ಥಾನ ಪಾತಾಳದಲ್ಲಿದೆ. ಸರ್ಕಾರ ಬೀದರ್ ಅನ್ನು ಯಾವ ಪರಿ ನಿರ್ಲಕ್ಷಿಸಿದೆ ಅನ್ನವುದಕ್ಕೆ ಜಿಲ್ಲೆಯ ಬವಕಲ್ಯಾಣನಲ್ಲಿರುವ ಈ ಉಮಾಮಹೇಶ್ವರಿ ದೇವಸ್ಥಾನವೇ ಸಾಕ್ಷಿ. ಚಾಳುಕ್ಯ ಸಾಮ್ರಾಜ್ಯದ ಅರಸ ಆರನೇ ವಿಕ್ರಾಮಾದಿತ್ಯ ನಿರ್ಮಿಸಿದ ಈ ದೇಗುಲ ಅಪರೂಪದ ಶಿಲ್ಪಕಲೆಗೆ ಹೆಸರುವಾಸಿಯಾಗಿದೆ. ಈ ದೇವಾಲಯದ ಗೋಪುರವನ್ನೊಮ್ಮೆ ನೋಡಿ, ಇದು ಐತಿಹಾಸಿಕ ಮಹತ್ವದ ಗುಡಿ ಅನ್ನೋದನ್ನು ಅರ್ಥಮಾಡಿಕೊಳ್ಳಲು ಅಷ್ಟು ಸಾಕು. ಇದು ಕೇವಲ ದೇವಸ್ಥಾನವಾಗಿರದೆ ಗುಡಿಗಳ ಸಂಕೀರ್ಣವಾಗಿದೆ. ಇಲ್ಲಿ ನೀಲಕಂಠ, ಮಹಾದೇವ, ಪಾರ್ವತಿ ಮತ್ತು ಗಣೇಶನ ದೇವಸ್ಥಾನಗಳಿವೆ. ಎಲ್ಲ ಗುಡಿಗಳ ಸುತ್ತ, ಅದ್ಭುತವಾದ ಶಿಲ್ಪಕಲೆಗಳಿದ್ದು ನೋಡುಗರನ್ನು ಮೋಡಿ ಮಾಡುತ್ತವೆ.

ಮಹಾದೇವ ಗುಡಿಯ ಹಿಂಭಾಗದಲ್ಲಿ ಪಾರ್ವತ ದೇವಸ್ಥಾನವಿದ್ದು ಯುಗಾದಿ ಹಬ್ಬದಂದು ಸೂರ್ಯನ ಕಿರಣಗಳು ಈ ದೇಗುಲನಲ್ಲಿರುವ ಶಿವಲಿಂಗದ ಮೇಲೆ ಬೀಳವುದು ಉಮಾ ಮಹೇಶ್ವರಿ ದೇವಸ್ಥಾನದ ಹಲವಾರು ವೈಶಿಷ್ಟ್ಯತೆಗಳಲ್ಲಿ ಒಂದು.
ಉಮಾಮಹೇಶ್ವರಿ ದೇವಸ್ಥಾನದ ನಿರ್ವಹಣೆ ಜವಾಬ್ದಾರಿಯನ್ನು ರಾಜ್ಯ ಪುರಾತತ್ವ ಇಲಾಖೆ ವಹಿಸಿಕೊಂಡಿದೆಯಾದರೂ, ಅದರಿಂದ ದೇಗುಲಕ್ಕೆ ಏನೆಂದರೆ ಏನೂ ಪ್ರಯೋಜನವಾಗಿಲ್ಲ.

ಹಾಗೆ ನೋಡಿದರೆ, ಪುರಾತನ ದೇವಾಸ್ಥಾನಗಳ ಜೀರ್ಣೋದ್ಧಾರ ಕಾರ್ಯವನ್ನು ಇಲಾಖೆ ಕೈಗೆತ್ತಿಕೊಳ್ಳಬೇಕು. ಈ ಗುಡಿಯ ವಿಷಯದಲ್ಲಿ ಅದು ತನ್ನ ಜವಾಬ್ದಾರಿಯನ್ನು ಸಂಪೂರ್ಣವಾಗಿ ಮರೆತಿದೆ. ದೇವಸ್ಥಾನದ ಮೇಲ್ಛಾವಣಿ ಕುಸಿದಿದೆ ಮತ್ತು ಕಂಬಗಳಲ್ಲಿ ಬಿರುಕು ಕಾಣಿಸಿಕೊಂಡಿದೆ.

ಒಂದು ಪ್ರಸಿದ್ಧ ಪುಣ್ಯಸ್ಥಳವಾಗಬೇಕಿದ್ದ ಉಮಾ ಮಹೇಶ್ವರಿ ದೇಗುಲ ಈಗ ಪಾಳುಕೊಂಪೆಯಂತೆ ಗೋಚರಿಸುತ್ತಿದ್ದರೆ ಆದಕ್ಕೆ ಇಲಾಖೆಯೇ ಕಾರಣ. ಸ್ಥಳೀಯರು ಮತ್ತು ಈ ಭಾಗದ ನಾಯಕರನ್ನು ಸಹ ನಾವು ದೂರಲೇಬೇಕು.

ಸರ್ಕಾರ ಈಗಲೂ ಎಚ್ಚರಗೊಂಡು ದೇವಸ್ಥಾನದ ನವೀಕರಣ ಕಾರ್ಯ ಕೈಗೆತ್ತಿಕೊಳ್ಳದಿದ್ದರೆ, ಬಸವ ಕಲ್ಯಾಣದ ಐತಿಹಾಸಿಕ ಉಮಾ ಮಹೇಶ್ವರಿ ದೇವಸ್ಥಾನ ಇತಿಹಾಸದ ಪುಟಗಳನ್ನು ಸೇರುತ್ತದೆ.

ಇದನ್ನೂ ಓದಿ:   India vs Australia: ಅತ್ತ ಪಂದ್ಯ ನಡೆಯುತ್ತಿದ್ದರೆ ಇತ್ತ ಧೋನಿಯಿಂದ ರಿಷಭ್ ಪಂತ್​ಗೆ ಭರ್ಜರಿ ಕ್ಲಾಸ್: ವಿಡಿಯೋ ವೈರಲ್