AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs Australia: ಅತ್ತ ಪಂದ್ಯ ನಡೆಯುತ್ತಿದ್ದರೆ ಇತ್ತ ಧೋನಿಯಿಂದ ರಿಷಭ್ ಪಂತ್​ಗೆ ಭರ್ಜರಿ ಕ್ಲಾಸ್: ವಿಡಿಯೋ ವೈರಲ್

T20 World cup : ಮೆಂಟರ್ ಕೆಲಸವನ್ನು ಧೋನಿ ಅದ್ಭುತವಾಗಿ ಮಾಡುತ್ತಿದ್ದಾರೆ. ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಅಭ್ಯಾಸ ಪಂದ್ಯದ ವೇಳೆ ಅದು ಎದ್ದು ಕಂಡಿತು.

India vs Australia: ಅತ್ತ ಪಂದ್ಯ ನಡೆಯುತ್ತಿದ್ದರೆ ಇತ್ತ ಧೋನಿಯಿಂದ ರಿಷಭ್ ಪಂತ್​ಗೆ ಭರ್ಜರಿ ಕ್ಲಾಸ್: ವಿಡಿಯೋ ವೈರಲ್
MS Dhoni Rishabh Pant T20 World Cup
TV9 Web
| Updated By: Vinay Bhat|

Updated on: Oct 21, 2021 | 10:59 AM

Share

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ (ICC T20 World Cup) ಭಾರತ ತನ್ನ ಅಭಿಯಾನ ಆರಂಭಿಸುವ ಮುನ್ನ ಎರಡು ಅಭ್ಯಾಸ ಪಂದ್ಯಗಳನ್ನು (Warm-up Match) ಆಡಿದ್ದು, ಎರಡರಲ್ಲೂ ಜಯ ಸಾಧಿಸಿ ಪರಾಕ್ರಮ ಮೆರೆದಿದೆ. ಅದರಲ್ಲೂ ಬುಧವಾರ ಬಲಿಷ್ಠ ಆಸ್ಟ್ರೇಲಿಯಾನ್ನರಿಗೆ (India vs Australia) ಮಣ್ಣುಮುಕ್ಕಿಸಿ ಇತರೆ ತಂಡಗಳಿಗೆ ದೊಡ್ಡ ಸಂದೇಶ ರವಾನಿಸಿದೆ. ಈ ಬಾರಿಯ ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ (Team India) ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ರವಿಶಾಸ್ತ್ರಿ (Ravi Shastri) ಕೋಚ್ ಸಮಯ ಮುಗಿಯುತ್ತಿದ್ದರೆ, ವಿರಾಟ್ ಕೊಹ್ಲಿ (Virat Kohli) ನಾಯಕ ಸ್ಥಾನದಿಂದ ಕೆಳಗಿಳಿಯಲಿದ್ದಾರೆ. ಇದರ ನಡುವೆ ಎಂ. ಎಸ್ ಧೋನಿ (MS Dhoni, Mentor) ಮೆಂಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಭಾರತ ತಂಡ ಪ್ರಶಸ್ತಿ ಗೆಲ್ಲುವ ಫೆವರಿಟ್ ಎನಿಸಿದೆ. ಧೋನಿಯಂತು ತಮಗೆ ನೀಡಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ.

ಹೌದು, ಮೆಂಟರ್ ಕೆಲಸವನ್ನು ಧೋನಿ ಅದ್ಭುತವಾಗಿ ಮಾಡುತ್ತಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದ ವೇಳೆ ಅದು ಎದ್ದು ಕಂಡಿತು. ಆಸ್ಟ್ರೇಲಿಯಾ ಬ್ಯಾಟಿಂಗ್ ನಡೆಸುತ್ತಿದ್ದ ವೇಳೆ ಬೌಂಡರಿ ಲೈನ್ ಆಚೆಗೆ ಧೋನಿ ಅವರು ರಿಷಭ್ ಪಂತ್​ಗೆ ವಿಕೆಟ್ ಕೀಪಿಂಗ್ ಅಭ್ಯಾಸ ಮಾಡಿಸುತ್ತಿದ್ದರು. ಹೆಚ್ಚು ಬೌನ್ಸ್ ಆಗದ ಯುಎಇ ಪಿಚ್​ನಲ್ಲಿ ಅಂಡರ್ ಆರ್ಮ್ ಬೌಲಿಂಗ್ ಮಾಡಿ ಧೋನಿ ಅವರು ಪಂತ್​ಗೆ ವಿಕೆಟ್ ಕೀಪಿಂಗ್ ಮಾಡಿಸುತ್ತಿದ್ದರು. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಟಿ20 ವಿಶ್ವಕಪ್ ನಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಅಕ್ಟೋಬರ್ 24 ರಂದು ಮೊದಲ ಪಂದ್ಯವನ್ನು ಆಡಲಿದೆ. ಪಾಕಿಸ್ತಾನ ವಿರುದ್ಧ ಕಾದಾಡುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ಅಕ್ಟೋಬರ್ 18 ರಂದು ಮೊದಲ ಅಭ್ಯಾಸ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 7 ವಿಕೆಟ್ ಗಳಿಂದ ಮಣಿಸಿದ್ದು, ನಿನ್ನೆ ನಡೆದ ಎರಡನೇ ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು 9 ವಿಕೆಟುಗಳ ಅಂತರದಿಂದ ಮಣಿಸಿತು. ಈ ಮೂಲಕ ಮಹತ್ವದ ಟೂರ್ನಿಯ ಪ್ರಮುಖ ಪಂದ್ಯಗಳಿಗೆ ವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ.

ಬುಧವಾರದ ದ್ವಿತೀಯ ಹಾಗೂ ಕೊನೆಯ ಅಭ್ಯಾಸ ಪಂದ್ಯದಲ್ಲಿ ಭಾರತ 9 ವಿಕೆಟ್‌ಗಳಿಂದ ಆರನ್‌ ಫಿಂಚ್‌ ಪಡೆಗೆ ಪಂಚ್‌ ಕೊಟ್ಟಿತು. ಆಸ್ಟ್ರೇಲಿಯ 5 ವಿಕೆಟಿಗೆ 152 ರನ್‌ ಮಾಡಿ ಸವಾಲೊಡ್ಡಿದರೆ, ಭಾರತ 17.5 ಓವರ್‌ಗಳಲ್ಲಿ ಒಂದೇ ವಿಕೆಟಿಗೆ ಗುರಿ ಮುಟ್ಟಿತು. ಕೆ. ರಾಹುಲ್ 31 ಎಸೆತಗಳಲ್ಲಿ ಮೂರು ಸಿಕ್ಸರ್‌ ಹಾಗೂ ಎರಡು ಬೌಂಡರಿಗಳೊಂದಿಗೆ 39 ರನ್‌ ಗಳಿಸಿದರೆ, ರೋಹಿತ್ ಶರ್ಮಾ 41 ಎಸೆತಗಳಲ್ಲಿ 3 ಸಿಕ್ಸರ್‌ ಹಾಗೂ 5 ಬೌಂಡರಿಗಳೊಂದಿಗೆ ಅಜೇಯ 60 ರನ್‌ ಚೆಚ್ಚಿದರು. ಕಳೆದ ಪಂದ್ಯದಲ್ಲಿ ವಿಫಲರಾಗಿದ್ದ ಸೂರ್ಯಕುಮಾರ್‌ 27 ಎಸೆತಗಳಲ್ಲಿ ಅಜೇಯ 38 ರನ್‌ ಹಾಗೂ ಹಾರ್ದಿಕ್‌ ಪಾಂಡ್ಯ ಅಜೇಯ 14 ರನ್‌ ಗಳಿಸುವ ಮೂಲಕ 17.5 ಓವರ್‌ಗಳಿಗೆ ಭಾರತಕ್ಕೆ ಗೆಲುವು ತಂದಿತ್ತರು.

Sri Lanka: ಸೂಪರ್-12 ಹಂತಕ್ಕೇರಿದ ಸಿಂಹಳೀಯರು: ಐರ್ಲೆಂಡ್ ವಿರುದ್ಧ ಶ್ರೀಲಂಕಾಕ್ಕೆ 70 ರನ್​ಗಳ ಜಯ

T20 World Cup 2021: ಹಾಲಿ ಚಾಂಪಿಯನ್ ವಿಂಡೀಸ್​ಗೆ ಹೀನಾಯ ಸೋಲುಣಿಸಿದ ಅಫ್ಘಾನಿಸ್ತಾನ್

(MS Dhoni was seen helping Rishabh Pant who has been rested India vs Australia Warm-up Game)