T20 World Cup 2021: ಹಾಲಿ ಚಾಂಪಿಯನ್ ವಿಂಡೀಸ್​ಗೆ ಹೀನಾಯ ಸೋಲುಣಿಸಿದ ಅಫ್ಘಾನಿಸ್ತಾನ್

ಈ ಮೊತ್ತವನ್ನು ಬೆನ್ನತ್ತಿದ ವೆಸ್ಟ್​ ಇಂಡೀಸ್ ತಂಡವು ಯಾವುದೇ ಹಂತದಲ್ಲೂ ಅಫ್ಘಾನಿಸ್ತಾನ್ ತಂಡಕ್ಕೆ ಸರಿಸಾಟಿಯಾಗಲಿಲ್ಲ. ಮೊದಲ ಓವರ್​ ಎಸೆದ ನಾಯಕ ಮೊಹಮ್ಮದ್ ನಬಿ ಲಿಂಡ್ಲ್​ ಸಿಮನ್ಸ್ ವಿಕೆಟ್ ಪಡೆಯುವ ಮೂಲಕ ಯಶಸ್ಸು ತಂದುಕೊಟ್ಟರು.

T20 World Cup 2021: ಹಾಲಿ ಚಾಂಪಿಯನ್ ವಿಂಡೀಸ್​ಗೆ ಹೀನಾಯ ಸೋಲುಣಿಸಿದ ಅಫ್ಘಾನಿಸ್ತಾನ್
AFG vs WI
Follow us
TV9 Web
| Updated By: ಝಾಹಿರ್ ಯೂಸುಫ್

Updated on: Oct 21, 2021 | 9:20 AM

ಟಿ20 ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ವೆಸ್ಟ್ ಇಂಡೀಸ್​ಗೆ ಅಫ್ಘಾನಿಸ್ತಾನ್ ಸೋಲುಣಿಸಿದೆ. ದುಬೈಯ ಐಸಿಸಿ ಅಕಾಡೆಮಿ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಅಫ್ಘಾನ್ ತಂಡ ಹಝ್ರತುಲ್ಲಾ ಝಝೈ (56) ಹಾಗೂ ಮೊಹಮ್ಮದ್ ಶೆಹಝಾದ್ (54) ಅದ್ಭುತ ಆರಂಭ ಒದಗಿಸಿದರು. ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಆರಂಭಿಕ ಜೋಡಿ ಅರ್ಧಶತಕ ಬಾರಿಸುವ ಮೂಲಕ ಮೊದಲ ವಿಕೆಟ್​ಗೆ 90 ರನ್​ಗಳ ಜೊತೆಯಾಟವಾಡಿದರು. ಬಳಿಕ ಬಂದ ಗುರ್ಬಜ್ (33) ಹಾಗೂ ನಜೀಬುಲ್ಲಾ (23) ಭರ್ಜರಿ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 189 ರನ್ ಗಳಿಸಿತು.

ಈ ಮೊತ್ತವನ್ನು ಬೆನ್ನತ್ತಿದ ವೆಸ್ಟ್​ ಇಂಡೀಸ್ ತಂಡವು ಯಾವುದೇ ಹಂತದಲ್ಲೂ ಅಫ್ಘಾನಿಸ್ತಾನ್ ತಂಡಕ್ಕೆ ಸರಿಸಾಟಿಯಾಗಲಿಲ್ಲ. ಮೊದಲ ಓವರ್​ ಎಸೆದ ನಾಯಕ ಮೊಹಮ್ಮದ್ ನಬಿ ಲಿಂಡ್ಲ್​ ಸಿಮನ್ಸ್ ವಿಕೆಟ್ ಪಡೆಯುವ ಮೂಲಕ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ನಬಿ ಎಸೆತದಲ್ಲಿ ಎವಿನ್ ಲೂಯಿಸ್ ಕೂಡ ವಿಕೆಟ್ ಒಪ್ಪಿಸಿದರು.

ಇದಾದ ಬಳಿಕ ರೋಸ್ಟನ್ ಚೇಸ್ ಎಚ್ಚರಿಕೆಯ ಆಟದೊಂದಿಗೆ 54 ರನ್​ಗಳಿಸಿದರೂ ತಂಡವನ್ನು ಗುರಿ ಮುಟ್ಟಿಸಲು ಸಾಧ್ಯವಾಗಿಲ್ಲ. ಅದರಂತೆ ನಿಗದಿತ 20 ಓವರ್​ನಲ್ಲಿ ವಿಂಡೀಸ್ ತಂಡವು 5 ವಿಕೆಟ್ ನಷ್ಟಕ್ಕೆ 133 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಅಫ್ಘಾನ್ ತಂಡವು 56 ರನ್​ಗಳ ಭರ್ಜರಿ ಜಯ ಸಾಧಿಸಿತು. ಅಫ್ಘಾನಿಸ್ತಾನ್ ಪರ ಮೊಹಮ್ಮದ್ ನಬಿ 4 ಓವರ್ ಗಳಲ್ಲಿ ಕೇವಲ 2 ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದರು.

ಇದನ್ನೂ ಓದಿ: T20 World Cup 2021: ಟಿ20 ಕ್ರಿಕೆಟ್​ನಲ್ಲಿ ನಂಬರ್ 1 ಬ್ಯಾಟರ್ ಯಾರು ಗೊತ್ತಾ​?

ಇದನ್ನೂ ಓದಿ:T20 World Cup 2021: ಟಿ20 ವಿಶ್ವಕಪ್ ಗೆದ್ದವರಿಗೆ ಸಿಗೋ ಹಣವೆಷ್ಟು? ಸೋತರೆ ಸಿಗೋದೆಷ್ಟು? 

ಇದನ್ನೂ ಓದಿ: T20 World Cup Winners: ಟಿ20 ವಿಶ್ವಕಪ್​ನಲ್ಲಿ ಯಾರು ವಿನ್ನರ್, ಯಾರು ರನ್ನರ್: ಇಲ್ಲಿದೆ ಸಂಪೂರ್ಣ ಪಟ್ಟಿ