IPL 2022: RCB ತಂಡದ ಮುಂದಿನ ಕೋಚ್ ರವಿ ಶಾಸ್ತ್ರಿ?

IPL 2022 Rcb: ಆರ್​ಸಿಬಿ ತಂಡದ ಕೋಚ್ ಹುದ್ದೆ ಕೂಡ ಖಾಲಿ ಇದೆ ಎನ್ನಬಹುದು. ಏಕೆಂದರೆ ತಂಡದ ಕೋಚ್​ ಆಗಿದ್ದ ಆಸ್ಟ್ರೇಲಿಯಾದ ಸೈಮನ್ ಕಾಟಿಚ್ ದ್ವಿತಿಯಾರ್ಧದ ಐಪಿಎಲ್ ವೇಳೆ ಹೊರಗುಳಿದಿದ್ದರು.

IPL 2022: RCB ತಂಡದ ಮುಂದಿನ ಕೋಚ್ ರವಿ ಶಾಸ್ತ್ರಿ?
Virat Kohli-Ravi Shastri
Follow us
TV9 Web
| Updated By: ಝಾಹಿರ್ ಯೂಸುಫ್

Updated on: Oct 21, 2021 | 8:53 AM

ಟೀಮ್ ಇಂಡಿಯಾದ (Team India) ಮುಖ್ಯ ಕೋಚ್ ರವಿ ಶಾಸ್ತ್ರಿ (Ravi Shastri) ಅವರು ಟಿ20 ವಿಶ್ವಕಪ್ (T20 World Cup 2021)​ ಬಳಿಕ ಕೋಚ್ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ. ಆ ಬಳಿಕ ಅವರ ಮುಂದಿನ ನಡೆಯೇನು ಎಂದು ಪರಿಶೀಲಿಸಿದರೆ, ಸದ್ಯ ಎರಡು ಉತ್ತರಗಳು ಸಿಗುತ್ತಿವೆ. ಅದರಲ್ಲಿ ಮೊದಲನೆಯದರು ಇಂಡಿಯನ್ ಪ್ರೀಮಿಯರ್ ಲೀಗ್. ಹೌದು, ಟೀಮ್ ಇಂಡಿಯಾ ಕೋಚ್​ ಹುದ್ದೆಯನ್ನು ತ್ಯಜಿಸಿದ ಬಳಿಕ ರವಿ ಶಾಸ್ತ್ರಿ ಮತ್ತೊಮ್ಮೆ ಕೋಚ್​ ಆಗಲು ಬಯಸಿದ್ದಾರೆ. ಅದು ಕೂಡ ಐಪಿಎಲ್​ನಲ್ಲಿ ಎಂಬುದು ವಿಶೇಷ. ಶಾಸ್ತ್ರಿ ಅವಧಿಯಲ್ಲಿ ಟೀಮ್ ಇಂಡಿಯಾ ಯಾವುದೇ ಐಸಿಸಿ ಟ್ರೋಫಿ ಗೆಲ್ಲದಿರಬಹುದು. ಇದಾಗ್ಯೂ ದೇಶ-ವಿದೇಶಗಳಲ್ಲಿ ಭಾರತ ತಂಡದ ಪ್ರದರ್ಶನ ಅದ್ಭುತವಾಗಿದೆ. ಇದೇ ಕಾರಣದಿಂದಾಗಿ ರವಿ ಶಾಸ್ತ್ರಿಯನ್ನು ಯಶಸ್ವಿ ಕೋಚ್ ಆಗಿ ಪರಿಗಣಿಸಲಾಗುತ್ತದೆ.

ಇತ್ತ ಮುಂದಿನ ಸೀಸನ್​ ಐಪಿಎಲ್​ನಲ್ಲಿ ಒಟ್ಟು 10 ತಂಡಗಳಿರಲಿವೆ. ಹೊಸ ತಂಡಗಳು ಸೇರ್ಪಡೆಯೊಂದಿಗೆ ಹಳೆಯ 8 ತಂಡಗಳಲ್ಲೂ ಮಹತ್ವದ ಬದಲಾವಣೆ ಕಂಡು ಬರಲಿದೆ. ಹೀಗಾಗಿ ಐಪಿಎಲ್ ಮೂಲಕ 2ನೇ ಇನಿಂಗ್ಸ್​ ಆರಂಭಿಸುವ ಇರಾದೆಯಲ್ಲಿದ್ದಾರೆ ರವಿ ಶಾಸ್ತ್ರಿ. ಕೆಲ ಮೂಲಗಳ ಮಾಹಿತಿ ಪ್ರಕಾರ, ರವಿ ಶಾಸ್ತ್ರಿ ಆರ್​ಸಿಬಿ ತಂಡದ ಕೋಚ್​ ಆಗಲು ಬಯಸಿದ್ದಾರೆ. ತಂಡದಲ್ಲಿರುವ ಆರ್​ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿಯೊಂದಿಗೆ ಶಾಸ್ತ್ರಿ ಉತ್ತಮ ಒಡನಾಟ ಹೊಂದಿದ್ದಾರೆ. ಇದೇ ಕಾರಣದಿಂದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ತರಬೇತುದಾರರಾಗಲು ಬಯಸಿದ್ದಾರೆ. ಆರ್​ಸಿಬಿ ಹೊರತಾಗಿ ಇತರೆ ತಂಡಗಳ ಕೋಚ್​ ಹುದ್ದೆಗಳ ಮೇಲೂ ರವಿ ಶಾಸ್ತ್ರಿ ಕಣ್ಣಿಟ್ಟಿದ್ದಾರೆ ಎಂದು ವರದಿಯಾಗಿದೆ.

ಇನ್ನೊಂದೆಡೆ ಆರ್​ಸಿಬಿ ತಂಡದ ಕೋಚ್ ಹುದ್ದೆ ಕೂಡ ಖಾಲಿ ಇದೆ ಎನ್ನಬಹುದು. ಏಕೆಂದರೆ ತಂಡದ ಕೋಚ್​ ಆಗಿದ್ದ ಆಸ್ಟ್ರೇಲಿಯಾದ ಸೈಮನ್ ಕಾಟಿಚ್ ದ್ವಿತಿಯಾರ್ಧದ ಐಪಿಎಲ್ ವೇಳೆ ಹೊರಗುಳಿದಿದ್ದರು. ಹೀಗಾಗಿ ತಂಡದ ನಿರ್ದೇಶಕರಾಗಿದ್ದ ಮೈಕ್ ಹೆಸನ್ ಅವರು ಕೋಚ್ ಜವಾಬ್ದಾರಿಯನ್ನು ನಿರ್ವಹಿಸಿದ್ದರು. ಈ ಇಬ್ಬರ ತರಬೇತಿ ಅಡಿಯಲ್ಲಿ ಪರಿಶೀಲನೆ ಹೊಂದಿದರೂ ಆರ್​ಸಿಬಿ ಫೈನಲ್​ಗೇರುವಲ್ಲಿ ಸಾಧ್ಯವಾಗಿಲ್ಲ. ಮುಂದಿನ ಸೀಸನ್​ನಲ್ಲಿ ಮೆಗಾ ಹರಾಜು ನಡೆಯಲಿದ್ದು, ಹೀಗಾಗಿ ತಂಡದಲ್ಲೂ ಮಹತ್ವದ ಬದಲಾವಣೆ ಕಾಣಿಸಿಕೊಳ್ಳಲಿದೆ. ಅದರಂತೆ ಕೋಚ್ ಸೇರಿದಂತೆ ಸಿಬ್ಬಂದಿ ವರ್ಗ ಕೂಡ ಬದಲಾವಣೆಯಾಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಕೋಚ್ ಹುದ್ದೆಯಲ್ಲಿ ರವಿ ಶಾಸ್ತ್ರಿ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.

ಒಂದು ವೇಳೆ ಐಪಿಎಲ್​ನಲ್ಲಿ ಕೋಚ್ ಹುದ್ದೆ ಲಭಿಸದಿದ್ದರೆ ಎಂದಿನಂತೆ ಕಾಮೆಂಟರಿಗೆ ಮರಳಬಹುದು. ಕಾಮೆಂಟರಿಯಲ್ಲಿ ಅದ್ಭುತ ಯಶಸ್ಸು ಸಾಧಿಸಿದ್ದ ಶಾಸ್ತ್ರಿಯವರನ್ನು ಮತ್ತೆ ಕಾಮೆಂಟರಿ ಪ್ಯಾನೆಲ್​ ಸೇರಿಸಿಕೊಳ್ಳಲು ಚಾನೆಲ್​ಗಳು ಆಸಕ್ತಿ ತೋರಲಿದೆ. ಹೀಗಾಗಿ ಐಪಿಎಲ್ ಕೋಚ್ ಹುದ್ದೆ ಕೈತಪ್ಪಿದರೆ ಕಾಮೆಂಟೇಟರ್​ ಆಗಿ ರವಿ ಶಾಸ್ತ್ರಿ ಕಾಣಿಸಿಕೊಳ್ಳೋದು ಬಹುತೇಕ ಖಚಿತ.

ರವಿ ಶಾಸ್ತ್ರಿ ಅವಧಿಯಲ್ಲಿ ಟೀಮ್​ ಇಂಡಿಯಾ 2016 ರ ಟಿ 20 ವಿಶ್ವಕಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿತ್ತು. ಹಾಗೆಯೇ ವಿಶ್ವಕಪ್ 2019 ರ ಸೆಮಿಫೈನಲ್‌ಗೆ ತಲುಪಿದ್ದ ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ದ ಸೋತು ಫೈನಲ್ ರೇಸ್​ನಿಂದ ಹೊರಬಿದ್ದಿತ್ತು. ಹಾಗೆಯೇ ಶಾಸ್ತ್ರಿಯವರ ತರಬೇತಿಯಡಿಯಲ್ಲಿ, ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ತಲುಪಿತು. ಅಂದರೆ ಕಳೆದ 5 ವರ್ಷಗಳ ಅವಧಿಯಲ್ಲಿ ರವಿ ಶಾಸ್ತ್ರಿ ಅವರ ಕೋಚಿಂಗ್​ನಲ್ಲಿ ಟೀಮ್ ಇಂಡಿಯಾ ಪ್ರಮುಖ ಟೂರ್ನಿಯಲ್ಲಿ ಪ್ರಮುಖ ಘಟ್ಟವನ್ನು ತಲುಪಿತ್ತು. ಹೀಗಾಗಿಯೇ ರವಿ ಶಾಸ್ತ್ರಿ ಅವರನ್ನು ಯಶಸ್ವಿ ಕೋಚ್​ಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: T20 World Cup 2021: ಟಿ20 ಕ್ರಿಕೆಟ್​ನಲ್ಲಿ ನಂಬರ್ 1 ಬ್ಯಾಟರ್ ಯಾರು ಗೊತ್ತಾ​?

ಇದನ್ನೂ ಓದಿ:T20 World Cup 2021: ಟಿ20 ವಿಶ್ವಕಪ್ ಗೆದ್ದವರಿಗೆ ಸಿಗೋ ಹಣವೆಷ್ಟು? ಸೋತರೆ ಸಿಗೋದೆಷ್ಟು? 

ಇದನ್ನೂ ಓದಿ: T20 World Cup Winners: ಟಿ20 ವಿಶ್ವಕಪ್​ನಲ್ಲಿ ಯಾರು ವಿನ್ನರ್, ಯಾರು ರನ್ನರ್: ಇಲ್ಲಿದೆ ಸಂಪೂರ್ಣ ಪಟ್ಟಿ

(Ravi Shastri eyes IPL or commentary)