Raayan Raj Sarja: ರಾಯನ್​ ಜತೆ ಟ್ರಿಪ್​ ಹೋಗಲಿದ್ದಾರೆ ಮೇಘನಾ ರಾಜ್​

ರಾಯನ್​​ನನ್ನು ಎಲ್ಲಾದರೂ ಟ್ರಿಪ್​ ಕರೆದುಕೊಂಡು ಹೋಗಬೇಕು ಎನ್ನುವ ಆಲೋಚನೆ ಮೇಘನಾ ಅವರದ್ದಾಗಿತ್ತು. ಆದರೆ, ಕೊವಿಡ್​ ಕಾರಣದಿಂದ ಇದು ಸಾಧ್ಯವಾಗಿರಲಿಲ್ಲ. ಹೀಗಾಗಿ, ಮನೆಯಲ್ಲೇ ಇರುವ ಪರಿಸ್ಥಿತಿ ಬಂದೊದಗಿತ್ತು.

ರಾಯನ್​ ರಾಜ್​ ಸರ್ಜಾಗೆ ಈಗ ಒಂದು ವರ್ಷ. ಇಂದು (ಅಕ್ಟೋಬರ್ 22) ಅದ್ದೂರಿಯಾಗಿ ರಾಯನ್​ ಜನ್ಮದಿನವನ್ನು ಆಚರಿಸಲಾಗಿದೆ. ಕಾಡಿನ ಥೀಮ್​ನಲ್ಲಿ ಬರ್ತ್​ಡೇ ಆಚರಣೆ ಮಾಡಲಾಗಿದೆ. ಅನೇಕರು ಈ ಬರ್ತ್​ಡೇಯಲ್ಲಿ ಪಾಲ್ಗೊಂಡಿದ್ದಾರೆ. ಈ ವೇಳೆ ಮೇಘನಾ ರಾಜ್​ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ರಾಯನ್​​ನನ್ನು ಎಲ್ಲಾದರೂ ಟ್ರಿಪ್​ ಕರೆದುಕೊಂಡು ಹೋಗಬೇಕು ಎನ್ನುವ ಆಲೋಚನೆ ಮೇಘನಾ ಅವರದ್ದಾಗಿತ್ತು. ಆದರೆ, ಕೊವಿಡ್​ ಕಾರಣದಿಂದ ಇದು ಸಾಧ್ಯವಾಗಿರಲಿಲ್ಲ. ಹೀಗಾಗಿ, ಮನೆಯಲ್ಲೇ ಇರುವ ಪರಿಸ್ಥಿತಿ ಬಂದೊದಗಿತ್ತು. ಈಗ ಕೊವಿಡ್​ ಕಡಿಮೆ ಆಗಿದೆ. ಈ ಕಾರಣಕ್ಕೆ ಆತನನ್ನು ಎಲ್ಲಾದರೂ ಟ್ರಿಪ್​ ಕರೆದುಕೊಂಡು ಹೋಗುವ ಆಲೋಚನೆ ಮೇಘನಾಗೆ ಇದೆ.

ಇದನ್ನೂ ಓದಿ: Raayan Raj Sarja: ಕಾಡಿನ ಥೀಮ್​ನಲ್ಲಿ ರಾಯನ್​ ರಾಜ್​ ಸರ್ಜಾ ಹುಟ್ಟುಹಬ್ಬ; ಮೇಘನಾ ಮನೆಯಲ್ಲಿ ಅದ್ದೂರಿ ಆಚರಣೆ

 

Click on your DTH Provider to Add TV9 Kannada