Raayan Raj Sarja: ರಾಯನ್​ ರಾಜ್​ ಸರ್ಜಾ ಹುಟ್ಟುಹಬ್ಬಕ್ಕೆ ಧ್ರುವ ಬಂದಿಲ್ಲ; ಕಾರಣ ತಿಳಿಸಿದ ಮೇಘನಾ ರಾಜ್​

Raayan Raj Sarja: ರಾಯನ್​ ರಾಜ್​ ಸರ್ಜಾ ಹುಟ್ಟುಹಬ್ಬಕ್ಕೆ ಧ್ರುವ ಬಂದಿಲ್ಲ; ಕಾರಣ ತಿಳಿಸಿದ ಮೇಘನಾ ರಾಜ್​

TV9 Web
| Updated By: ಮದನ್​ ಕುಮಾರ್​

Updated on: Oct 22, 2021 | 2:52 PM

Dhruva Sarja: ಚಿರು ಪುತ್ರನಿಗೆ ಧ್ರುವ ಸರ್ಜಾ ಸೋಶಿಯಲ್​ ಮಿಡಿಯಾ ಮೂಲಕ ವಿಶ್​ ಮಾಡಿದ್ದಾರೆ. ಆದರೆ ಬರ್ತ್​ಡೇ ಸಡಗರದಲ್ಲಿ ಭಾಗಿಯಾಗಲು ಅವರಿಗೆ ಸಾಧ್ಯವಾಗಿಲ್ಲ. ಅದಕ್ಕೆ ಕಾರಣ ಏನು ಎಂಬುದನ್ನು ಮೇಘನಾ ರಾಜ್​ ತಿಳಿಸಿದ್ದಾರೆ.

ಪುತ್ರ ರಾಯನ್​ ರಾಜ್​ ಸರ್ಜಾನ ಮೊದಲನೇ ವರ್ಷದ ಹುಟ್ಟುಹಬ್ಬವನ್ನು ಮೇಘನಾ ರಾಜ್​ ಅವರು ಸಡಗರದಿಂದ ಇಂದು (ಅ.22) ಆಚರಿಸುತ್ತಿದ್ದಾರೆ. ಬರ್ತ್​ಡೇ ಸೆಲೆಬ್ರೇಷನ್​ಗಾಗಿ ಕಾಡಿನ ಥೀಮ್​ನಲ್ಲಿ ಇಡೀ ಮನೆಯನ್ನು ಅಲಂಕರಿಸಲಾಗಿದೆ. ‘ರಾಯನ್​ ಕಿಂಗ್​ಡಮ್​ಗೆ ಸ್ವಾಗತ’ ಎಂಬ ಫಲಕ ಗಮನ ಸೆಳೆಯುತ್ತಿದೆ. ಚಿತ್ರರಂಗದ ಸ್ನೇಹಿತರು ಮತ್ತು ಕುಟುಂಬದವರಿಗೆ ಆಹ್ವಾನ ನೀಡಲಾಗಿದೆ. ಜ್ಯೂ. ಚಿರುಗೆ ಎಲ್ಲರೂ ಶುಭ ಕೋರುತ್ತಿದ್ದಾರೆ. ಮಗನ ಬರ್ತ್​ಡೇ ಬಗ್ಗೆ ಮೇಘನಾ ರಾಜ್​ ಕೆಲವು ಮಾತುಗಳನ್ನು ಹಂಚಿಕೊಂಡಿದ್ದಾರೆ.

ಚಿರು ಪುತ್ರನಿಗೆ ಧ್ರುವ ಸರ್ಜಾ ಸೋಶಿಯಲ್​ ಮಿಡಿಯಾ ಮೂಲಕ ವಿಶ್​ ಮಾಡಿದ್ದಾರೆ. ಆದರೆ ಬರ್ತ್​ಡೇ ಸಡಗರದಲ್ಲಿ ಭಾಗಿಯಾಗಲು ಅವರಿಗೆ ಸಾಧ್ಯವಾಗಿಲ್ಲ. ಅದಕ್ಕೆ ಕಾರಣ ಏನು ಎಂಬುದನ್ನು ಮೇಘನಾ ರಾಜ್​ ತಿಳಿಸಿದ್ದಾರೆ. ‘ಧ್ರುವ ಈಗ ವಿಶಾಖಪಟ್ಟಣದಲ್ಲಿ ಇದ್ದಾರೆ. ಈ ಬಾರಿ ಅವರು ಬರಲು ಸಾಧ್ಯವಾಗುವುದಿಲ್ಲ ಎನಿಸುತ್ತದೆ’ ಎಂದು ಮೇಘನಾ ಹೇಳಿದ್ದಾರೆ. ‘ಮಾರ್ಟಿನ್​’ ಚಿತ್ರದ ಕೆಲಸಗಳಲ್ಲಿ ಧ್ರುವ ಬ್ಯುಸಿ ಆಗಿದ್ದಾರೆ. ಈ ಚಿತ್ರಕ್ಕೆ ಎ.ಪಿ. ಅರ್ಜುನ್​ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾ ಕೆಲಸಗಳ ಸಲುವಾಗಿ ತಮ್ಮ ಹುಟ್ಟುಹಬ್ಬವನ್ನು ಕೂಡ ಅಭಿಮಾನಿಗಳ ಜೊತೆ ಸೆಲೆಬ್ರೇಟ್​ ಮಾಡಲು ಧ್ರುವಗೆ ಸಾಧ್ಯವಾಗಿರಲಿಲ್ಲ.

ಇದನ್ನೂ ಓದಿ:

Raayan Raj Sarja: ಕಾಡಿನ ಥೀಮ್​ನಲ್ಲಿ ರಾಯನ್​ ರಾಜ್​ ಸರ್ಜಾ ಹುಟ್ಟುಹಬ್ಬ; ಮೇಘನಾ ಮನೆಯಲ್ಲಿ ಅದ್ದೂರಿ ಆಚರಣೆ

Meghana Raj: 45 ವರ್ಷ ಹಳೇ ಗೊಂಬೆಗಳ ಜತೆ ರಾಯನ್​ ರಾಜ್​ ಸರ್ಜಾ; ಮೇಘನಾ ರಾಜ್-ಚಿರು ಪುತ್ರನಿಗೆ ಮೊದಲ ದಸರಾ