AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Meghana Raj: 45 ವರ್ಷ ಹಳೇ ಗೊಂಬೆಗಳ ಜತೆ ರಾಯನ್​ ರಾಜ್​ ಸರ್ಜಾ; ಮೇಘನಾ ರಾಜ್-ಚಿರು ಪುತ್ರನಿಗೆ ಮೊದಲ ದಸರಾ

Raayan Raj Sarja: ತಮ್ಮ ಅಜ್ಜಿಯ ಮನೆಯಲ್ಲಿ ಈ ವರ್ಷದ ದಸರಾ ಹಬ್ಬವನ್ನು ಮೇಘನಾ ರಾಜ್​ ಆಚರಿಸಿದ್ದಾರೆ. ಪುತ್ರ ರಾಯನ್​ ರಾಜ್​ ಸರ್ಜಾಗೆ ಇದು ಮೊದಲ ವರ್ಷದ ದಸರಾ ಹಬ್ಬ. ಆ ಬಗ್ಗೆ ಮೇಘನಾ ಬರೆದುಕೊಂಡಿದ್ದಾರೆ.

Meghana Raj: 45 ವರ್ಷ ಹಳೇ ಗೊಂಬೆಗಳ ಜತೆ ರಾಯನ್​ ರಾಜ್​ ಸರ್ಜಾ; ಮೇಘನಾ ರಾಜ್-ಚಿರು ಪುತ್ರನಿಗೆ ಮೊದಲ ದಸರಾ
ರಾಯನ್ ರಾಜ್ ಸರ್ಜಾ
TV9 Web
| Edited By: |

Updated on: Oct 16, 2021 | 12:08 PM

Share

ಮೇಘನಾ ರಾಜ್​ ಮತ್ತು ಚಿರಂಜೀವಿ ಸರ್ಜಾ ಪುತ್ರ ರಾಯನ್​ ರಾಜ್​ ಸರ್ಜಾ ಸೋಶಿಯಲ್​ ಮೀಡಿಯಾದಲ್ಲಿ ಸ್ಟಾರ್​ ಆಗಿದ್ದಾನೆ. ಆತನ ಫೋಟೋಗಳಿಗೆ ಚಿರು ಅಭಿಮಾನಿಗಳು ಸಖತ್​ ಮೆಚ್ಚುಗೆ ಸೂಚಿಸುತ್ತಾರೆ. ಕಳೆದ ವರ್ಷ ಅ.22ರಂದು ಜನಿಸಿದ ರಾಯನ್​ ರಾಜ್​ ಸರ್ಜಾ ಈ ಬಾರಿ ಮೊದಲ ವರ್ಷದ ದಸರಾ ಹಬ್ಬನ್ನು ಆಚರಿಸಿದ್ದಾನೆ. ಆ ಫೋಟೋಗಳನ್ನು ಮೇಘನಾ ರಾಜ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಪಾಲಿಗೆ ದಸರಾ ಹಬ್ಬ ತುಂಬ ಸ್ಪೆಷಲ್​ ಎಂದು ಅವರು ತಿಳಿಸಿದ್ದಾರೆ.

ತಮ್ಮ ಅಜ್ಜಿಯ ಮನೆಯಲ್ಲಿ ಈ ವರ್ಷದ ದಸರಾ ಹಬ್ಬವನ್ನು ಮೇಘನಾ ರಾಜ್​ ಆಚರಿಸಿದ್ದಾರೆ. ವಿಜಯ ದಶಮಿಗೆ ಗೊಂಬೆಗಳನ್ನು ಕೂರಿಸುವುದು ಸಂಪ್ರದಾಯ. ಆ ಬಗ್ಗೆ ಮೇಘನಾ ಬರೆದುಕೊಂಡಿದ್ದಾರೆ. ‘ನಮ್ಮ ಕುಟುಂಬಕ್ಕೆ ದಸರಾ ಹಬ್ಬ ಯಾವಾಗಲೂ ವಿಶೇಷವಾದದ್ದು. ನಮ್ಮ ಅಜ್ಜಿ ಮನೆಯಲ್ಲಿ ನನ್ನ ಯುವರಾಜ (ರಾಯನ್​ ರಾಜ್​ ಸರ್ಜಾ) ಮೊದಲ ವರ್ಷದ ವಿಜಯ ದಶಮಿ ಆಚರಿಸಿದ್ದಾನೆ. ಅವನ ಹಿಂದೆ ಕಾಣುತ್ತಿರುವ ಬೊಂಬೆಗಳೆಲ್ಲ 45 ವರ್ಷಗಳಷ್ಟು ಹಳೆಯದು’ ಎಂದು ಮೇಘನಾ ರಾಜ್​ ತಿಳಿಸಿದ್ದಾರೆ.

‘ಮುಂದಿನ ವರ್ಷ ಇನ್ನಷ್ಟು ಒಳ್ಳೆಯ ಕಾಲ ಬರಲಿದೆ ಎಂಬ ಭರವಸೆಯೊಂದಿಗೆ ಈ ಬೊಂಬೆಗಳನ್ನು ಪ್ರತಿ ವರ್ಷ ಕಾಳಜಿಯಿಂದ ಎತ್ತಿಡಲಾಗುತ್ತದೆ. ಕಳೆದ ವರ್ಷ ರಾಯನ್​ ಜನಿಸಿದ್ದು ಕೂಡ ನವರಾತ್ರಿ ಸಂದರ್ಭದಲ್ಲಿ. ಹಾಗಾಗಿ ಈ ಹಬ್ಬ ನನಗೆ ಇನ್ನಷ್ಟು ಸ್ಪೆಷಲ್​. ಎಲ್ಲರಿಗೂ ವಿಜಯ ದಶಮಿ ಹಬ್ಬದ ಶುಭಾಶಯಗಳು’ ಎಂದು ಮೇಘನಾ ರಾಜ್​ ಪೋಸ್ಟ್​ ಮಾಡಿದ್ದಾರೆ. ಇದರ ಜೊತೆಯಲ್ಲಿ ಅವರು ಹಂಚಿಕೊಂಡಿರುವ ಫೋಟೋ ಎಲ್ಲರ ಗಮನ ಸೆಳೆಯುತ್ತಿದೆ.

ಚಿರು ಜನ್ಮದಿನಕ್ಕೆ ಮೇಘನಾ ಹೊಸ ಸಿನಿಮಾ ಲಾಂಚ್​:

ನಾಳೆ (ಅ.17) ಚಿರಂಜೀವಿ ಸರ್ಜಾ ಜನ್ಮದಿನ. ಆ ಪ್ರಯುಕ್ತ ಮೇಘನಾ ರಾಜ್​ ಅವರ ಹೊಸ ಸಿನಿಮಾ ಸೆಟ್ಟೇರಲಿದೆ. ಈ ಸಿನಿಮಾವನ್ನು ಚಿರು ಜೊತೆ ಸೇರಿ ನಿರ್ಮಾಣ ಮಾಡಬೇಕು ಎಂದು ಪ್ಲ್ಯಾನ್​ ಮಾಡಲಾಗಿತ್ತು. ಆದರೆ ಅದಕ್ಕೆ ವಿಧಿ ಅವಕಾಶ ನೀಡಲಿಲ್ಲ. ಈಗ ಚಿರು ಹುಟ್ಟುಹಬ್ಬದ ದಿನ ಈ ಚಿತ್ರ ಸೆಟ್ಟೇರಲಿದೆ. ಈ ಕಾರ್ಯಕ್ರಮಕ್ಕೆ ಹಿರಿಯ ನಿರ್ದೇಶಕ ನಾಗಾಭರಣ, ನಟ ಸುಂದರ್​ ರಾಜ್​, ಕಲಾ ನಿರ್ದೇಶಕ ಶಿವಕುಮಾರ್​ ಮುಂತಾದವರು ಆಗಮಿಸಲಿದ್ದಾರೆ. ಈ ಚಿತ್ರವನ್ನು ಚಿರಂಜೀವಿ ಸರ್ಜಾ ಅವರ ಸ್ನೇಹಿತ ಪನ್ನಗ ಭರಣ ನಿರ್ಮಾಣ ಮಾಡಲಿದ್ದಾರೆ. ಅವರ ಜೊತೆ ಸಂಗೀತ ನಿರ್ದೇಶಕ ವಾಸುಕಿ ವೈಭವ್​, ಹೊಸ ನಿರ್ದೇಶಕ ವಿಶಾಲ್​ ಕೈ ಜೋಡಿಸುತ್ತಿದ್ದಾರೆ.

ಇದನ್ನೂ ಓದಿ:

ಮೇಘನಾ ರಾಜ್​ಗೆ ಅಕ್ಟೋಬರ್​ ತಿಂಗಳು ಸ್ಪೆಷಲ್​; ವಿಶೇಷ ಪೋಸ್ಟ್​ ಹಂಚಿಕೊಂಡ ನಟಿ

‘ಮೇಘನಾಳನ್ನು ನಾವು ನೋಡಿಕೊಳ್ತೀವಿ, ಬೇರೆ ಯಾರೂ ಬೇಡ’; ಪ್ರಮೀಳಾ ಜೋಷಾಯ್​ ನೇರ​ ಮಾತು

Follow Us
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ