ಆರ್ಯನ್ ಖಾನ್ ಪ್ರಕರಣದ ತನಿಖಾಧಿಕಾರಿ ಸಮೀರ್ ವಾಂಖೆಡೆ ವಿರುದ್ಧ ‘ವಸೂಲಿ’ ಆರೋಪ ಮಾಡಿದ ಮಹಾರಾಷ್ಟ್ರ ಸಚಿವ

Nawab Mallik | Sameer Wankhede: ಆರ್ಯನ್ ಖಾನ್ ಪ್ರಕರಣ ಸೇರಿದಂತೆ ಹಲವು ಪ್ರಮುಖ ಪ್ರಕರಣಗಳ ತನಿಖೆ ನಡೆಸುತ್ತಿರುವ ಎನ್​ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ವಿರುದ್ಧ ಮಹಾರಾಷ್ಟ್ರ ಸಚಿವ ನವಾಬ್ ಮಲ್ಲಿಕ್ ‘ವಸೂಲಿ’ಯ ಆರೋಪ ಮಾಡಿದ್ದಾರೆ.

ಆರ್ಯನ್ ಖಾನ್ ಪ್ರಕರಣದ ತನಿಖಾಧಿಕಾರಿ ಸಮೀರ್ ವಾಂಖೆಡೆ ವಿರುದ್ಧ ‘ವಸೂಲಿ’ ಆರೋಪ ಮಾಡಿದ ಮಹಾರಾಷ್ಟ್ರ ಸಚಿವ
ಸಮೀರ್ ವಾಂಖೆಡೆ, ನವಾಬ್ ಮಲ್ಲಿಕ್

ಮಹಾರಾಷ್ಟ್ರ ಸರ್ಕಾರದ ಸಚಿವ ನವಾಬ್ ಮಲ್ಲಿಕ್ ಹಾಗೂ NCB ಅಧಿಕಾರಿ ಸಮೀರ್ ವಾಂಖೆಡೆ ವಾಗ್ಯುದ್ಧ ಮುಂದುವರೆದಿದೆ. ಸಮೀರ್ ವಾಂಖೆಡೆ ಬಾಲಿವುಡ್ ತಾರೆಯರಿಂದ ವಸೂಲಿ ಮಾಡುತ್ತಾರೆ ಎಂಬ ಗಂಭೀರ ಆರೋಪವನ್ನು ನವಾಬ್ ಮಾಡಿದ್ದಾರೆ. ಇದಕ್ಕೆ ಅವರು ಪೂರಕವಾಗಿ ಹಲವಾರು ಚಿತ್ರಗಳನ್ನೂ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ‘‘ಸಮೀರ್ ವಾಂಖೆಡೆ ಲಾಕ್‌ಡೌನ್ ವೇಳೆ ಮಾಲ್ಡೀವ್ಸ್, ದುಬೈಗೆ ಕುಟುಂಬ ಸಮೇತ ಹೋಗಿದ್ದರು. ಆ ಸಮಯದಲ್ಲಿ ಇಡೀ ಬಾಲಿವುಡ್ ದುಬೈನಲ್ಲಿತ್ತು. ಅಲ್ಲಿಗೆ ವಸೂಲಿ ಮಾಡಲು ಸಮೀರ್ ಹೋಗಿದ್ದರು. ಬಿಜೆಪಿ ನಾಯಕರ ಸೂಚನೆ ಮೇರೆಗೆ ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಸಮೀರ್ ಯತ್ನಿಸಿದ್ದು ಅದಕ್ಕೆ ಸಂಬಂಧಿಸಿದ ದಾಖಲೆ ಬಿಡುಗಡೆ ಮಾಡುವೆ’’ ಎಂದು ನವಾಬ್ ಆರೋಪಿಸಿದ್ದಾರೆ.

ಈ ಆರೋಪಕ್ಕೆ ಎನ್​ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಪ್ರತ್ಯುತ್ತರ ನೀಡಿದ್ದು, ‘‘ನಾನು ದುಬೈಗೆ ಹೋಗಿರಲಿಲ್ಲ. ಲಾಕ್‌ಡೌನ್ ತೆರವಾದ ಬಳಿಕ ನನ್ನ ಮಕ್ಕಳ ಜೊತೆಗೆ ಮಾಲ್ಡೀವ್ಸ್‌ಗೆ ಹೋಗಿದ್ದೆ. ಅದಕ್ಕಾಗಿ ಅನುಮತಿ ಪಡೆದು, ಕಾನೂನುಬದ್ಧವಾಗಿ ನನ್ನ ಸ್ವಂತ ಹಣದಲ್ಲಿ ಹೋಗಿದ್ದೆ. ನವಾಬ್ ಮಲ್ಲಿಕ್ ಬಳಿ ಸಾಕ್ಷ್ಯ ಇದ್ದರೆ ಬಿಡುಗಡೆ ಮಾಡಲಿ. ಮಲ್ಲಿಕ್ ಸಚಿವರಾಗಿರುವುದರಿಂದ ತನಿಖೆ ಮಾಡಿಸಬಹುದು. ನಾನು ಕೇವಲ ಸರ್ಕಾರಿ ಉದ್ಯೋಗಿ. ಅವರು ಮಂತ್ರಿ’’ ಎಂದು ಹೇಳಿದ್ದಾರೆ.

ನವಾಬ್ ಮಲ್ಲಿಕ್​ಗೆ ಬೆದರಿಕೆ ಕರೆ; ಈ ಬಗ್ಗೆ ದೂರು ನೀಡುತ್ತೇನೆ ಎಂದ ಸಚಿವ
ಎನ್​ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಬಗ್ಗೆ ಮಹಾರಾಷ್ಟ್ರ ಸಚಿವ ನವಾಬ್ ಮಲ್ಲಿಕ್ ಆರೋಪ ಮಾಡಿದ ಬೆನ್ನಲ್ಲೇ ಅವರಿಗೆ ಬೆದರಿಕೆ ಬಂದಿದೆ ಎನ್ನಲಾಗಿದೆ. ಈ ಕುರಿತು ಸ್ವತಃ ನವಾಬ್ ತಿಳಿಸಿದ್ದು, ಪ್ರಕರಣ ದಾಖಲಿಸುವುದಾಗಿ ಹೇಳಿದ್ದಾರೆ. ‘‘ರಾಜಸ್ಥಾನದಿಂದ ವಾಂಖೆಡೆ ಟಾರ್ಗೆಟ್ ಮಾಡದಂತೆ ಬೆದರಿಕೆ ಕರೆ ಬಂದಿದೆ. ಈ ಬಗ್ಗೆ ನಾನು ದೂರು ನೀಡುತ್ತೇನೆ’’ ಎಂದು ಎನ್​ಸಿಪಿ ನಾಯಕ ನವಾಬ್ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ:

ಐಪಿಎಲ್​ ಹೊಸ ತಂಡದಮೇಲೆ ಕಣ್ಣಿಟ್ಟ ರಣವೀರ್​ ಸಿಂಗ್​-ದೀಪಿಕಾ ಪಡುಕೋಣೆ

Suhana Khan: ಶಾರುಖ್ ಪುತ್ರಿ ಸುಹಾನಾರಂತೆಯೇ ಇರುವ ಈ ಯುವತಿ ಯಾರು?; ನೆಟ್ಟಿಗರ ಕುತೂಹಲಕ್ಕೆ ಇಲ್ಲಿದೆ ಉತ್ತರ

Click on your DTH Provider to Add TV9 Kannada