‘ನನ್ನ ಖ್ಯಾತಿ ಮಕ್ಕಳ ಜೀವನವನ್ನೇ ಹಾಳು ಮಾಡಬಹುದು’; ಹಲವು ವರ್ಷಗಳ ಹಿಂದೆಯೇ ಆತಂಕ ಹೊರಹಾಕಿದ್ದ ಶಾರುಖ್
ಸಾಮಾನ್ಯ ವ್ಯಕ್ತಿ ಡ್ರಗ್ ಕೇಸ್ನಲ್ಲಿ ಸಿಕ್ಕಿ ಬಿದ್ದಿದ್ದರೆ ಮಾಧ್ಯಮಗಳಲ್ಲಿ ಈ ಕೇಸ್ ಸ್ವಲ್ಪವೂ ಹೈಲೈಟ್ ಆಗುತ್ತಿರಲಿಲ್ಲ. ಶಾರುಖ್ ಮಗ ಎಂಬ ಕಾರಣಕ್ಕೆ ಪ್ರತಿ ವಿಚಾರವೂ ಮುನ್ನೆಲೆಗೆ ಬರುತ್ತಿದೆ.
ಆರ್ಯನ್ ಖಾನ್ ಅವರು ಕ್ರೂಸ್ ಶಿಪ್ನಲ್ಲಿ ಡ್ರಗ್ಸ್ ಪಾರ್ಟಿ ಮಾಡುತ್ತಾ ಸಿಕ್ಕಿ ಬಿದ್ದಿದ್ದಾರೆ. ಅವರ ಪ್ರಕರಣ ಇಷ್ಟೊಂದು ಹೈಲೈಟ್ ಆಗೋಕೆ ಕಾರಣ ಶಾರುಖ್ ಖಾನ್. ಬಾಲಿವುಡ್ ಕಿಂಗ್ ಖಾನ್ ಶಾರುಖ್ಗೆ ದೊಡ್ಡ ಅಭಿಮಾನಿ ಬಳಗವಿದೆ. ಅವರು ದೊಡ್ಡ ಸೆಲೆಬ್ರಿಟಿ. ಈ ಕಾರಣಕ್ಕೆ ಆರ್ಯನ್ ಖಾನ್ ಪ್ರಕರಣ ಇಷ್ಟೊಂದು ಹೈಪ್ ಪಡೆದುಕೊಂಡಿದೆ. ಮಾಧ್ಯಮಗಳಲ್ಲಿ ಇಡೀ ದಿನ ಈ ಪ್ರಕರಣ ಹೈಲೈಟ್ ಆಗುತ್ತಿದೆ. ಈ ಬಗ್ಗೆ ಶಾರುಖ್ ಖಾನ್ ಹಲವು ವರ್ಷಗಳ ಹಿಂದೆಯೇ ಆತಂಕ ಹೊರ ಹಾಕಿದ್ದರು.
ಸಾಮಾನ್ಯ ವ್ಯಕ್ತಿ ಡ್ರಗ್ ಕೇಸ್ನಲ್ಲಿ ಸಿಕ್ಕಿ ಬಿದ್ದಿದ್ದರೆ ಮಾಧ್ಯಮಗಳಲ್ಲಿ ಈ ಕೇಸ್ ಸ್ವಲ್ಪವೂ ಹೈಲೈಟ್ ಆಗುತ್ತಿರಲಿಲ್ಲ. ಶಾರುಖ್ ಮಗ ಎಂಬ ಕಾರಣಕ್ಕೆ ಪ್ರತಿ ವಿಚಾರವೂ ಮುನ್ನೆಲೆಗೆ ಬರುತ್ತಿದೆ. ಇದರ ಜತೆಗೆ ಸಾಕಷ್ಟು ಸೆಲೆಬ್ರಿಟಿಗಳಿಗೆ ಕಂಟಕ ಎದುರಾಗಿದೆ. ನಟಿ ಅನನ್ಯಾ ಪಾಂಡೆ ಸೇರಿ ಅನೇಕರನ್ನು ವಿಚಾರಣೆ ನಡೆಸಲಾಗುತ್ತಿದೆ. ತಮ್ಮ ಖ್ಯಾತಿಯಿಂದ ಮಕ್ಕಳ ಬದುಕು ಹಾಳಾಗಬಹುದು ಎಂಬ ಆತಂಕ ಶಾರುಖ್ಗೆ ಮೊದಲಿನಿಂದಲೂ ಇತ್ತು.
‘ರಸ್ತೆಯ ಮೇಲೆ ಕಾರು ವೇಗವಾಗಿ ಬರುತ್ತಿರುವಾಗ ಅಲ್ಲಿ ನನ್ನ ಗೆಳೆಯ ನಿಂತಿದ್ದರೆ ನಾನು ಅವನನ್ನು ತಳ್ಳಿ ರಕ್ಷಿಸೋಕೆ ಪ್ರಯತ್ನಿಸುತ್ತೇನೆ. ನನ್ನ ಕುಟುಂಬದ ಸದಸ್ಯರು ನಿಂತಿದ್ದರೆ, ಅವರನ್ನು ಕೂಡ ರಕ್ಷಿಸುತ್ತೇನೆ. ಇದರ ಜತೆಗೆ ಯಾವುದೇ ಗಾಯಗಳು ಆಗದಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತೇನೆ. ಒಂದೊಮ್ಮೆ ನನ್ನ ಮಕ್ಕಳು ಆ ಸ್ಥಾನದಲ್ಲಿದ್ದರೆ ನಾನೇ ಕಾರಿಗೆ ಅಡ್ಡಲಾಗಿ ನನ್ನ ಮಕ್ಕಳನ್ನು ಉಳಿಸುತ್ತೆನೆ’ ಎಂದು ಶಾರುಖ್ ಈ ವಿಡಿಯೋದಲ್ಲಿ ಮಾತು ಆರಂಭಿಸಿದ್ದರು.
‘ನನ್ನ ಖ್ಯಾತಿಯಿಂದ ಮಕ್ಕಳಿಗೆ ತೊಂದರೆ ಉಂಟಾಗಬಹುದು. ಅದು ನನಗಿರುವ ದೊಡ್ಡ ಭಯ. ಅವರು ನನ್ನ ಖ್ಯಾತಿಯಿಂದ ಆಚೆಗೆ ಬೆಳೆಯುತ್ತಾರೆ ಎನ್ನುವ ನಂಬಿಕೆ ಇದೆ. ನನ್ನ ಖ್ಯಾತಿ ಅವರ ಜೀವನವನ್ನು ಹಾಳು ಮಾಡಬಹುದು’ ಎಂದು ಶಾರುಖ್ ಆತಂಕ ಹೊರ ಹಾಕಿದ್ದರು.
Srk will never stand alone in front of that speeding car, we will stand in front of him and in order to reach him, it’d have to cross through us first! | #WeStandWithAryanKhan #WeStandWithSRK
[ @iamsrk @gaurikhan @pooja_dadlani | #ReleaseAryanKhan ] pic.twitter.com/sTzQkY0Qmw
— Elena | SRK Edits (@feelsoverrated) October 7, 2021
ಇದನ್ನೂ ಓದಿ: Ananya Pandey: ಆರ್ಯನ್ ಖಾನ್ ಬಂಧನ ಪ್ರಕರಣ; ಎನ್ಸಿಬಿ ವಿಚಾರಣೆ ವೇಳೆ ಭಯಗೊಂಡು ಕಣ್ಣೀರಿಟ್ಟಿದ್ದ ಅನನ್ಯಾ ಪಾಂಡೆ
ಆರ್ಯನ್ ಖಾನ್ಗೆ ಡ್ರಗ್ ಸಪ್ಲೈ ಮಾಡಿದ್ದು ಅನನ್ಯಾ ಪಾಂಡೆ? ವಾಟ್ಸಾಪ್ ಚಾಟ್ನಿಂದ ಹೊರ ಬಿತ್ತು ರಹಸ್ಯ