KBC 13: ₹ 7 ಕೋಟಿ ಮೊತ್ತದ ಪ್ರಶ್ನೆಗೆ ಉತ್ತರ ತಿಳಿಯದೇ ₹ 1 ಕೋಟಿಗೆ ತೃಪ್ತಿಪಟ್ಟ 19 ವರ್ಷದ ಯುವಕ; ನಿಮಗೆ ಉತ್ತರ ತಿಳಿದಿದೆಯೇ?

Sahil Ahirwar | Amitabh Bachchan: ಕೆಬಿಸಿ 13ರ ಸ್ಪರ್ಧೆಯಲ್ಲಿ ಎರಡನೇ ಕೋಟ್ಯಧಿಪತಿ ಹೊರಹೊಮ್ಮಿದ್ದಾರೆ. ಆದರೆ ಅವರಿಗೆ ₹ 7 ಕೋಟಿ ಮೊತ್ತದ ಪ್ರಶ್ನೆಗೆ ಉತ್ತರ ತಿಳಿಯಲಿಲ್ಲ. ನಿಮಗೆ ತಿಳಿದಿದೆಯೇ? ಪ್ರಶ್ನೆ ಇಲ್ಲಿದೆ.

KBC 13: ₹ 7 ಕೋಟಿ ಮೊತ್ತದ ಪ್ರಶ್ನೆಗೆ ಉತ್ತರ ತಿಳಿಯದೇ ₹ 1 ಕೋಟಿಗೆ ತೃಪ್ತಿಪಟ್ಟ 19 ವರ್ಷದ ಯುವಕ; ನಿಮಗೆ ಉತ್ತರ ತಿಳಿದಿದೆಯೇ?
ಅಮಿತಾಭ್ ಬಚ್ಚನ್ ಹಾಗೂ ಸಾಹಿಲ್ ಅಹಿರ್ವಾರ್
Follow us
TV9 Web
| Updated By: shivaprasad.hs

Updated on: Oct 22, 2021 | 9:00 PM

ಕೌನ್ ಬನೇಗಾ ಕರೋಡ್​ಪತಿ ಭರ್ಜರಿಯಾಗಿ ಮೂಡಿಬರುತ್ತಿದ್ದು, ಇತ್ತೀಚಿನ ಸಂಚಿಕೆಯಲ್ಲಿ 13 ನೇ ಸೀಸನ್​ನ ಎರಡನೇ ಕೋಟ್ಯಧಿಪತಿ ಹೊರಹೊಮ್ಮಿದ್ದಾರೆ. ಗುರುವಾರದಂದು ಪ್ರಸಾರವಾದ ಸಂಚಿಕೆಯಲ್ಲಿ ಮಧ್ಯಪ್ರದೇಶದ ಛತರ್​ಪುರ್​​ನ 19 ವರ್ಷದ ಸಾಹಿಲ್​ ಅಹಿರ್ವಾರ್ ಕೋಟ್ಯಧಿಪತಿಯ ಸಾಲಿಗೆ ಸೇರ್ಪಡೆಗೊಂಡಿದ್ದಾರೆ. ಐಎಎಸ್ ಅಧಿಕಾರಿಯಾಗಬೇಕು ಎಂಬ ಕನಸನ್ನು ಹೊಂದಿರುವ ಸಾಹಿಲ್​, ಸಂಸ್ಕೃತ ಭಾಷೆಯ ಕುರಿತಾದ ₹ 1 ಕೋಟಿ ಮೊತ್ತದ ಪ್ರಶ್ನೆಗೆ ಸರಿಯಾದ ಉತ್ತರ ನೀಡಿದರು. ಆದರೆ, ₹ 7 ಕೋಟಿ ಮೊತ್ತದ ಪ್ರಶ್ನೆ ಜೀವಶಾಸ್ತ್ರದ ಕುರಿತಾಗಿತ್ತು. ಆದರೆ ಆ ಪ್ರಶ್ನೆಗೆ ಅವರಿಗೆ ಸರಿಯಾದ ಉತ್ತರದ ಬಗ್ಗೆ ಅನುಮಾನವಿದ್ದ ಕಾರಣ, ಕ್ವಿಟ್ ಮಾಡಿದರು.

ಸಾಹಿಲ್ ಅವರಿಗೆ ಅಮಿತಾಭ್ ಕೇಳಿದ ₹ 7 ಕೋಟಿ ಮೊತ್ತದ ಪ್ರಶ್ನೆ ಇದು. ‘ಎಲೆಗಳು ಮತ್ತು ಮೊಗ್ಗುಗಳನ್ನು ಪ್ರತ್ಯೇಕವಾಗಿ ತಿನ್ನಲು ಅನುವು ಮಾಡಿಕೊಡುವ, ಗೋವಿನಂತೆ ಜೀರ್ಣಾಂಗ ವ್ಯವಸ್ಥೆಯನ್ನು ಹೊಂದಿರುವ ಏಕೈಕ ಹಕ್ಕಿ ಯಾವುದು?’ (Which is the only bird with a digestive system that ferments vegetation as a bovine does, which enables it to eat leaves and buds exclusively?)

ಈ ಪ್ರಶ್ನೆಗೆ ಶೋಬಿಲ್ ಸ್ಟಾರ್ಕ್ (Shoebill stork), ಹೋಟ್​ಜಿನ್ (Hoatzin), ಶೋವೆಲರ್(Shoveler) ಹಾಗೂ ಗ್ಯಾಲಪಗೋಸ್ ಕೊರ್ಮೊರಂಟ್(Galapagos cormorant) ಎಂಬ ನಾಲ್ಕು ಆಯ್ಕೆಗಳಿದ್ದವು. ಸರಿಯಾದ ಉತ್ತರ ಹೋಟ್​ಜಿನ್ ಆಗಿತ್ತು. ಆದರೆ ಸಾಹಿಲ್​ ಅವರಿಗೆ ಉತ್ತರ ತಿಳಿಯದ ಕಾರಣ, ಕ್ವಿಟ್ ಮಾಡಿದ್ದರು.

19 ವರ್ಷದ ಸಾಹಿಲ್ ₹ 7 ಕೋಟಿ ಮೊತ್ತದ ಪ್ರಶ್ನೆ ಕ್ವಿಟ್ ಮಾಡಿದರೂ ಕೂಡ ₹ 1 ಕೋಟಿಯ ಒಡೆಯರಾದರು. ಈ ಚೆಕ್​ನೊಂದಿಗೆ ಅವರಿಗೆ ಒಂದು ಕಾರು ಕೂಡ ಸಿಕ್ಕಿತು. ಈ ಎಲ್ಲಾ ಬಹುಮಾನಗಳೊಂದಿಗೆ ಅವರು ಸ್ಪರ್ಧೆಯಿಂದ ನಿರ್ಗಮಿಸಿದರು. ಸಾಹಿಲ್ ಈ ಎಲ್ಲಾ ಮೊತ್ತವನ್ನು ಏನು ಮಾಡುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇತ್ತು. ಲೀಡಿಂಗ್ ಡೈಲಿ ಈ ಕುರಿತು ವರದಿ ಮಾಡಿದ್ದು, ಸಾಹಿಲ್ ಮಾತನಾಡಿರುವುದನ್ನು ಉಲ್ಲೇಖಿಸಿದೆ.

ಸಾಹಿಲ್​ಗೆ ತಾವು ಗೆದ್ದಿರುವ ₹ 1 ಕೋಟಿ ಮೊತ್ತ ಬಹಳ ದೊಡ್ಡದಂತೆ. ‘‘ಅಮಿತಾಭ್ ಬಚ್ಚನ್ ತನ್ನನ್ನು ಕೋಟ್ಯಧಿಪತಿ ಎಂದು ಘೋಷಿಸಿದಾಗ, ಅಸಾಮಾನ್ಯ ಕನಸೊಂದು ನನಸಾದಂತಾಯಿತು. ಈ ಹಣದಲ್ಲಿ ತಾಯಿಗೆ ಒಂದು ಮನೆಯನ್ನು ಉಡುಗೊರೆ ನೀಡಬೇಕು. ಸಣ್ಣ ಸಹೋದರನಿಗೆ ಕ್ರಿಕೆಟ್ ಸೆಟ್ ಕೊಡಿಸಬೇಕು. ಉಳಿದ ಹಣವನ್ನು ನನ್ನ ಐಎಎಸ್ ಅಧಿಕಾರಿಯಾಗುವ ಕನಸಿಗೆ ಮುಡಿಪಾಗಿಡುತ್ತೇನೆ’’ ಎಂದು ಸಾಹಿಲ್ ನುಡಿದಿದ್ದಾರೆ.

ಸಾಹಿಲ್ ಕಾರ್ಯಕ್ರಮದಲ್ಲಿ ಅಮಿತಾಭ್​ರೊಂದಿಗೆ ನಟಿ ತಾಪ್ಸೀ ಪನ್ನು ವಿಚಾರವಾಗಿ ಬಹಳಷ್ಟು ಪ್ರಶ್ನಿಸುತ್ತಿದ್ದರು. ಕೆಲವೊಮ್ಮೆ ಸಾಹಿಲ್ ಪ್ರಶ್ನೆಗಳಿಗೆ ಅಮಿತಾಭ್​ಗೆ ಉತ್ತರ ತೋಚದ ಸಂದರ್ಭವೂ ನಡೆಯಿತು. ಆದರೆ ಈ ಕಾರ್ಯಕ್ರಮ ವೀಕ್ಷಿಸಿದ ತಾಪ್ಸಿ, ಸಾಹಿಲ್ ಅವರನ್ನು ಉದ್ದೇಶಿಸಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ ಸಾಹಿಲ್ ತಾಪ್ಸಿಯ ಇಷ್ಟದ ತಿನಿಸೇನು ಎಂದು ಅಮಿತಾಭ್​ರಲ್ಲಿ ಪ್ರಶ್ನಿಸಿದ್ದರು. ಇದಕ್ಕೆ ಸ್ವತಃ ತಾಪ್ಸಿ ಉತ್ತರಿಸಿದ್ದು, ಛೋಲೆ ಭಟೂರ್ ಬಹಳ ಇಷ್ಟ ಎಂದು ಬರೆದುಕೊಂಡಿದ್ದಾರೆ. ಮುಂದೆ ನಾವು ಎಂದಾದರೂ ಭೇಟಿಯಾದರೆ ಖಂಡಿತವಾಗಿ ಅದನ್ನು ಜೊತೆಯಾಗಿ ಸವಿಯೋಣ ಎಂದೂ ತಾಪ್ಸಿ ಬರೆದಿದ್ದಾರೆ. ಈ ಮೂಲಕ 19 ನೇ ವರ್ಷದಲ್ಲಿಯೇ ಸಾಹಿಲ್ ಅವರ ಎರಡು ಅಸಾಮಾನ್ಯ ಕನಸುಗಳು ಸಾಕಾರವಾಗಿವೆ.

ಇದನ್ನೂ ಓದಿ:

ದುನಿಯಾ ವಿಜಯ್ ನಿರ್ದೇಶನದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ಶಿವರಾಜ್​ಕುಮಾರ್

ಅಮಿತ್​ ಶಾಗೆ ಬರ್ತ್​ಡೇ ವಿಶ್​ ಮಾಡಿ ಟ್ರೋಲ್​ ಆದ ಸಾರಾ ಅಲಿ ಖಾನ್​; ಇದರ ಹಿಂದಿದೆ ಡ್ರಗ್​ ವಿಚಾರ

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್