ಅಮಿತ್​ ಶಾಗೆ ಬರ್ತ್​ಡೇ ವಿಶ್​ ಮಾಡಿ ಟ್ರೋಲ್​ ಆದ ಸಾರಾ ಅಲಿ ಖಾನ್​; ಇದರ ಹಿಂದಿದೆ ಡ್ರಗ್​ ವಿಚಾರ

ಬಾಲಿವುಡ್​ನ ಅನೇಕರು ಅಮಿತ್​ ಶಾಗೆ ವಿಶ್​ ಮಾಡಿದ್ದಾರೆ. ಅದೇ ರೀತಿ ಸೈಫ್​ ಅಲಿ ಖಾನ್​ ಮಗಳು ಸಾರಾ ಅಲಿ ಖಾನ್​ ಕೂಡ ಅಮಿತ್​ ಶಾಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ. ಇದು ಟ್ರೋಲ್​ ಮಂದಿಗೆ ಆಹಾರವಾಗಿದೆ.

ಅಮಿತ್​ ಶಾಗೆ ಬರ್ತ್​ಡೇ ವಿಶ್​ ಮಾಡಿ ಟ್ರೋಲ್​ ಆದ ಸಾರಾ ಅಲಿ ಖಾನ್​; ಇದರ ಹಿಂದಿದೆ ಡ್ರಗ್​ ವಿಚಾರ
ಅಮಿತ್​ ಶಾ-ಸಾರಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Oct 22, 2021 | 8:07 PM

ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರು ಇಂದು (ಅಕ್ಟೋಬರ್​ 22) 57ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಅವರಿಗೆ ಬಿಜೆಪಿ ಕಾರ್ಯಕರ್ತರು, ಪಕ್ಷದ ನಾಯಕರು ಹಾಗೂ ವಿರೋಧ ಪಕ್ಷದವರಿಂದ ಶುಭಾಶಯ ಹರಿದುಬಂದಿದೆ. ಬಾಲಿವುಡ್​ನ ಅನೇಕರು ಅಮಿತ್​ ಶಾಗೆ ವಿಶ್​ ಮಾಡಿದ್ದಾರೆ. ಅದೇ ರೀತಿ ಸೈಫ್​ ಅಲಿ ಖಾನ್​ ಮಗಳು ಸಾರಾ ಅಲಿ ಖಾನ್​ ಕೂಡ ಅಮಿತ್​ ಶಾಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ. ಇದು ಟ್ರೋಲ್​ ಮಂದಿಗೆ ಆಹಾರವಾಗಿದೆ.

ಅಮಿತ್​ ಶಾಗೆ ಜನ್ಮದಿನದ ವಿಶ್​ ಮಾಡುವುದಕ್ಕೂ ಸಾರಾ ಟ್ರೋಲ್​ ಆಗುವುದಕ್ಕೂ ಏನು ಸಂಬಂಧ ಎನ್ನುವ ಪ್ರಶ್ನೆ ನಿಮ್ಮದೇ? ಅದಕ್ಕೆ ಇಲ್ಲಿದೆ ಉತ್ತರ. ಸದ್ಯ, ಬಾಲಿವುಡ್​ನಲ್ಲಿ ಡ್ರಗ್ಸ್​ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಆರ್ಯನ್​ ಖಾನ್​ ಅವರನ್ನು ಬಂಧಿಸಿದ ನಂತರ ವಾಟ್ಸಾಪ್​ ಚಾಟ್​ ಪರಿಶೀಲಿಸಲಾಗಿದೆ. ಈ ವೇಳೆ ಸಾಕಷ್ಟು ಹೆಸರುಗಳು ಹೊರ ಬಂದಿವೆ. ಈಗಾಗಲೇ ಯುವ ನಟಿ ಅನನ್ಯಾ ಪಾಂಡೆಯನ್ನು ಕರೆದು ವಿಚಾರಣೆ ಮಾಡಲಾಗಿದೆ. ಇದೇ ರೀತಿ ಇನ್ನೂ ಅನೇಕರ ಮನೆ ಮೇಲೆ ದಾಳಿ ನಡೆಯಬಹುದು ಎಂದು ಕೆಲವರು ಊಹಿಸುತ್ತಿದ್ದಾರೆ.

ಸಾರಾಗೂ ತಮ್ಮ ಮನೆಯ ಮೇಲೆ ದಾಳಿ ನಡೆಯುವ ಭಯ ಶುರುವಾಗಿದ್ದು, ಈ ಕಾರಣಕ್ಕೆ ಅವರು ಅಮಿತ್​ ಶಾಗೆ ವಿಶ್​ ಮಾಡಿದ್ದಾರೆ. ಈ ಮೂಲಕ ಲಿಸ್ಟ್​ನಿಂದ ತಮ್ಮ ಹೆಸರು ತೆಗೆಯುವಂತೆ ಅವರು ಪರೋಕ್ಷವಾಗಿ ಮನವಿ ಮಾಡಿದ್ದಾರೆ ಎಂದು ಟ್ರೋಲ್​ ಮಾಡಲಾಗುತ್ತಿದೆ. ಸದ್ಯ, ಅವರ ಟ್ವೀಟ್​ ಕಮೆಂಟ್​ ಬಾಕ್ಸ್​ನಲ್ಲಿ ಈ ಬಗ್ಗೆ ಸಾಕಷ್ಟು ಕಮೆಂಟ್​ಗಳನ್ನು ಮಾಡಲಾಗುತ್ತಿದೆ.

ಇದನ್ನೂ ಓದಿ: Ananya Panday: ‘ಶಾರುಖ್​ ಖಾನ್​ ನನ್ನ 2ನೇ ಅಪ್ಪ’ ಎಂದಿದ್ದ ಅನನ್ಯಾ ಪಾಂಡೆ; ಡ್ರಗ್ಸ್​ ಸುಳಿಯಲ್ಲಿ ನಟಿ  

ಆರ್ಯನ್​ ಭೇಟಿ ಮಾಡಿದ  ಶಾರುಖ್​ ಖಾನ್ ತೆಗೆದುಕೊಂಡ್ರು ಕಠಿಣ ನಿರ್ಧಾರ; ಪರಿಣಾಮ ಯಾರ ಮೇಲೆ?

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ