ಆರ್ಯನ್​ ಭೇಟಿ ಮಾಡಿದ  ಶಾರುಖ್​ ಖಾನ್ ತೆಗೆದುಕೊಂಡ್ರು ಕಠಿಣ ನಿರ್ಧಾರ; ಪರಿಣಾಮ ಯಾರ ಮೇಲೆ?

ಆರ್ಯನ್​ ಖಾನ್​ ಪ್ರಕರಣ ದಿನ ಕಳೆದಂತೆ ಜಟಿಲವಾಗುತ್ತಲೇ ಇದೆ. ಎನ್​ಸಿಬಿ ನಿತ್ಯ ಹೊಸಹೊಸ ಸಾಕ್ಷ್ಯಗಳೊಂದಿಗೆ ಕೋರ್ಟ್​ ಮುಂದೆ ಹಾಜರಿ ಹಾಕುತ್ತಿದೆ. ಆರ್ಯನ್​ಗಿಂತಲೂ ಬಲವಾಗಿ ಎನ್​ಸಿಬಿ ಪರ ವಕೀಲರು ವಾದ ಮಂಡಿಸುತ್ತಿದ್ದಾರೆ.

ಆರ್ಯನ್​ ಭೇಟಿ ಮಾಡಿದ  ಶಾರುಖ್​ ಖಾನ್ ತೆಗೆದುಕೊಂಡ್ರು ಕಠಿಣ ನಿರ್ಧಾರ; ಪರಿಣಾಮ ಯಾರ ಮೇಲೆ?
ಶಾರುಖ್​ ಖಾನ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Oct 21, 2021 | 9:01 PM

ಶಾರುಖ್​ ಖಾನ್​ ಕಳೆದ ಅರ್ಧ ತಿಂಗಳಿಂದ ಚಿಂತೆಗೆ ಒಳಗಾಗಿದ್ದಾರೆ. ಆರ್ಯನ್​ ಖಾನ್​ ಬಂಧನದ ನಂತರದಲ್ಲಿ ಅವರು ಸಂಪೂರ್ಣವಾಗಿ ಚಿಂತೆಗೆ ಒಳಗಾಗಿದ್ದಾರೆ. ಆರ್ಯನ್​ ಖಾನ್​ ಅವರನ್ನು ಹೇಗೆ ಜೈಲಿನಿಂದ ಹೊರಗೆ ತರಬೇಕು ಎನ್ನುವ ಚಿಂತೆ ಬಿಟ್ಟೂ ಬಿಡದೇ ಕಾಡುತ್ತಿದೆ. ಅವರು ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಇಂದು (ಅಕ್ಟೋಬರ್​ 21) ಜೈಲಿನಲ್ಲಿ ಆರ್ಯನ್​ ಅವರನ್ನು ಶಾರುಖ್​ ಭೇಟಿ ಮಾಡಿದ್ದಾರೆ. ಈ ಮಧ್ಯೆ ಶಾರುಖ್​ ಮಹತ್ವದ ನಿರ್ಧಾರ ಒಂದನ್ನು ತೆಗೆದುಕೊಂಡಿದ್ದಾರೆ.

ಆರ್ಯನ್​ ಖಾನ್​ ಪ್ರಕರಣ ದಿನ ಕಳೆದಂತೆ ಜಟಿಲವಾಗುತ್ತಲೇ ಇದೆ. ಎನ್​ಸಿಬಿ ನಿತ್ಯ ಹೊಸಹೊಸ ಸಾಕ್ಷ್ಯಗಳೊಂದಿಗೆ ಕೋರ್ಟ್​ ಮುಂದೆ ಹಾಜರಿ ಹಾಕುತ್ತಿದೆ. ಆರ್ಯನ್​ಗಿಂತಲೂ ಬಲವಾಗಿ ಎನ್​ಸಿಬಿ ಪರ ವಕೀಲರು ವಾದ ಮಂಡಿಸುತ್ತಿದ್ದಾರೆ. ಈ ಕಾರಣಕ್ಕೆ ಆರ್ಯನ್​ಗೆ ಜಾಮೀನು ಸಿಗುತ್ತಿಲ್ಲ. ಈ ಮಧ್ಯೆ ಆರ್ಯನ್​ ನ್ಯಾಯಾಂಗ ಬಂಧನದ ಅವಧಿ ಅಕ್ಟೋಬರ್​ 30ರವರೆಗೆ ವಿಸ್ತರಣೆ ಆಗಿದೆ. ಸದ್ಯ, ಆರ್ಯನ್​ ಪರ ವಕೀಲರು ಆರ್ಯನ್​ಗೆ ಜಾಮೀನು ನೀಡುವಂತೆ ಬಾಂಬೆ ಹೈಕೋರ್ಟ್​​ ಮೆಟ್ಟಿಲೇರಿದ್ದಾರೆ.  ಇದರ ವಿಚಾರಣೆಗೆ ಕೊಂಚ ಸಮಯ ಹಿಡಿಯಬಹುದು. ಈ ಎಲ್ಲಾ ಕಾರಣಕ್ಕೆ ಆರ್ಯನ್​ಗೆ ಸದ್ಯಕ್ಕೆ ಜಾಮೀನು ಸಿಗುವ ಸಾದ್ಯತೆ ಇಲ್ಲ. ಇದು ಶಾರುಖ್​ ಅವರನ್ನು ಚಿಂತೆಗೆ ಈಡು ಮಾಡಿದೆ.

ನವೆಂಬರ್ 2ರಂದು ಶಾರುಖ್​ ಖಾನ್​ ಜನ್ಮದಿನ. ಮಗನ ಸಮಸ್ಯೆಯಿಂದ ಶಾರುಖ್​ ಚಿಂತೆಗೆ ಒಳಗಾಗಿದ್ದಾರೆ. ಇಂದು ಮಗನ ಭೇಟಿ ಮಾಡಿದ ಅವರು ಈ ಬಾರಿ ಜನ್ಮದಿನ ಆಚರಿಸಿಕೊಳ್ಳದೇ ಇರಲು​ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಅವರ ಜನ್ಮದಿನದಂದು ಮನ್ನತ್​ ಎದುರು ನೂರಾರು ಅಭಿಮಾನಿಗಳು ಸೇರುತ್ತಿದ್ದರು. ಆದರೆ, ಈ ಬಾರಿ ಮನೆ ಬಳಿ ಬರದೆ ಇರದಂತೆ ಅಭಿಮಾನಿಗಳ ಬಳಿ ಸೂಚಿಸಲು ಶಾರುಖ್​ ನಿರ್ಧರಿಸಿದ್ದಾರೆ ಎನ್ನುತ್ತಿವೆ ಮೂಲಗಳು. ಇದರ ಮಧ್ಯೆ ಮತ್ತೊಂದು ವಿಚಾರವೂ ಇದೆ.

ಶಾರುಖ್​ ಖಾನ್​ ಸದ್ಯ ಎರಡು ಸಿನಿಮಾಗಳ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಇದರ ಬಗ್ಗೆ ಈವರೆಗೆ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ. ಶಾರುಖ್​ ಜನ್ಮದಿನದಂದು ಈ ಬಗ್ಗೆ ಘೋಷಣೆ ಮಾಡುವ ಬಗ್ಗೆ ಚಿತ್ರತಂಡ ಚಿಂತನೆ ನಡೆಸಿತ್ತು. ಆದರೆ ಆರ್ಯನ್​ ಖಾನ್​ ಪ್ರಕರಣದಿಂದ ಶಾರುಖ್​ ಖ್ಯಾತಿಗೆ ಕಪ್ಪು ಚುಕ್ಕೆ ಬಿದ್ದಿದೆ. ಇನ್ನು, ಶಾರುಖ್​ ಕೂಡ ಬರ್ತ್​ಡೇ ಆಚರಿಸಿಕೊಳ್ಳುತ್ತಿಲ್ಲ. ಈ ಕಾರಣಕ್ಕೆ ಸಿನಿಮಾ ತಂಡದವರು ಯಾವುದೇ ಘೋಷಣೆ ಮಾಡದಿರಲು ನಿರ್ಧರಿಸಿದ್ದಾರೆ. ಇದರ ಜತೆಗೆ ಸಿನಿಮಾ ಕೆಲಸಗಳು ಕೂಡ ವಿಳಂಬವಾಗುತ್ತಿದೆ. ಈ ಎಲ್ಲಾ ಕಾರಣಕ್ಕೆ ಚಿತ್ರತಂಡದವರು ಚಿಂತೆಗೆ ಒಳಗಾಗಿದ್ದಾರೆ. ಹೀಗಾಗಿ, ಇದರ ನೇರ ಪರಿಣಾಮ ನಿರ್ಮಾಪಕರ ಮೇಲೆ ಬೀಳುತ್ತಿದೆ.

ಇದನ್ನೂ ಓದಿ: Shah Rukh Khan: ಬಾಲಿವುಡ್​ ನಟ ಶಾರುಖ್​ ಖಾನ್, ನಟಿ ಅನನ್ಯಾ ಪಾಂಡೆ ನಿವಾಸದ ಮೇಲೆ NCB ದಾಳಿ?; ಇಲ್ಲಿದೆ ಅಸಲಿ ಮಾಹಿತಿ

Ananya Panday: ‘ಶಾರುಖ್​ ಖಾನ್​ ನನ್ನ 2ನೇ ಅಪ್ಪ’ ಎಂದಿದ್ದ ಅನನ್ಯಾ ಪಾಂಡೆ; ಡ್ರಗ್ಸ್​ ಸುಳಿಯಲ್ಲಿ ನಟಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ