AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ananya Panday: ಎನ್​ಸಿಬಿ ಕಚೇರಿಗೆ ತೆರಳಿ ವಿಚಾರಣೆಗೆ ಹಾಜರಾದ ಅನನ್ಯಾ ಪಾಂಡೆ; ಇಲ್ಲಿಗೇ ಮುಗಿದಿಲ್ಲ ಕಂಟಕ

ಬಾಲಿವುಡ್​ನಲ್ಲಿ ಚಂಕಿ ಪಾಂಡೆ ಬೇಡಿಕೆಯ ನಟ ಆಗಿದ್ದರು. ನೂರಕ್ಕೂ ಅಧಿಕ ಹಿಂದಿ ಸಿನಿಮಾಗಳಲ್ಲಿ ನಟಿಸಿದ ಖ್ಯಾತಿ ಅವರಿಗಿದೆ. ಶಾರುಖ್​ ಮಗ ಆರ್ಯನ್​ಗೂ ಚಂಕಿ ಪಾಂಡೆ ಮಗಳು ಅನನ್ಯಾ ನಡುವೆ ಒಳ್ಳೆಯ ಗೆಳೆತನ ಇತ್ತು.

Ananya Panday: ಎನ್​ಸಿಬಿ ಕಚೇರಿಗೆ ತೆರಳಿ ವಿಚಾರಣೆಗೆ ಹಾಜರಾದ ಅನನ್ಯಾ ಪಾಂಡೆ; ಇಲ್ಲಿಗೇ ಮುಗಿದಿಲ್ಲ ಕಂಟಕ
ಅನನ್ಯಾ ಪಾಂಡೆ
TV9 Web
| Edited By: |

Updated on: Oct 21, 2021 | 4:27 PM

Share

ಬಾಲಿವುಡ್​ ಖ್ಯಾತ ನಟ ಶಾರುಖ್​ ಖಾನ್​ ಮಗ ಆರ್ಯನ್​ ಖಾನ್​ ಬಂಧನದ ನಂತರ ಎನ್​ಸಿಬಿ ಅಧಿಕಾರಿಗಳು ಯಾವುದೇ ಸೆಲೆಬ್ರಿಟಿ ಮನೆ ಮೇಲೆ ದಾಳಿ ಮಾಡಿರಲಿಲ್ಲ. ಆದರೆ, ಈಗ ಆರ್ಯನ್​ ಬಂಧನವಾಗಿ ಅರ್ಧ ತಿಂಗಳು ಕಳೆದ ನಂತರ ಒಬ್ಬೊಬ್ಬರಿಗೇ ಬಿಸಿ ಮುಟ್ಟಿಸಲು ಎನ್​ಸಿಬಿ ಅಣಿಯಾದಂತಿದೆ. ಇಂದು (ಅಕ್ಟೋಬರ್​ 21) ಎನ್​ಸಿಬಿ ಅಧಿಕಾರಿಗಳು ಶಾರುಖ್​ ಖಾನ್​ ಮನೆ ಮನ್ನತ್​ ಹಾಗೂ ನಟಿ ಅನನ್ಯಾ ಪಾಂಡೆ ಮನೆ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಅನನ್ಯಾಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಅದರಂತೆಯೇ ತಂದೆ, ಚಂಕಿ ಪಾಂಡೆ ಜತೆ ಅವರು ವಿಚಾರಣೆಗೆ ಹಾಜರಾಗಿದ್ದಾರೆ.

ಬಾಲಿವುಡ್​ನಲ್ಲಿ ಚಂಕಿ ಪಾಂಡೆ ಬೇಡಿಕೆಯ ನಟ ಆಗಿದ್ದರು. ನೂರಕ್ಕೂ ಅಧಿಕ ಹಿಂದಿ ಸಿನಿಮಾಗಳಲ್ಲಿ ನಟಿಸಿದ ಖ್ಯಾತಿ ಅವರಿಗಿದೆ. ಶಾರುಖ್​ ಮಗ ಆರ್ಯನ್​ಗೂ ಚಂಕಿ ಪಾಂಡೆ ಮಗಳು ಅನನ್ಯಾ ನಡುವೆ ಒಳ್ಳೆಯ ಗೆಳೆತನ ಇತ್ತು. ಇದು ಅವರಿಗೆ ಸಂಕಷ್ಟ ತಂದಿಟ್ಟಿದ್ದೆ. ಹೀಗಾಗಿ, ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಅಂತೆಯೇ ಅನನ್ಯಾ ಮುಂಬೈನ ಎನ್​ಸಿಬಿ ಕಚೇರಿಗೆ ತೆರಳಿ ವಿಚಾರಣೆಗೆ ಹಾಜರಾಗಿದ್ದಾರೆ.

ಆರ್ಯನ್​ ಮತ್ತು ನಿಮ್ಮ ನಡುವಿನ ಗೆಳೆತನ ಎಂಥದ್ದು? ಆರ್ಯನ್​ ಡ್ರಗ್ಸ್​ ತೆಗೆದುಕೊಳ್ಳುತ್ತಿದ್ದರೇ? ಆ ಬಗ್ಗೆ ನಿಮಗೆ ಮಾಹಿತಿ ಇತ್ತೇ? ಎಂಬಿತ್ಯಾದಿ ಪ್ರಶ್ನೆಗಳು ಎನ್​ಸಿಬಿ ಕಡೆಯಿಂದ ಅನನ್ಯಾಗೆ ಎದುರಾಗಿರುವ ಸಾಧ್ಯತೆ ಇದೆ. ಒಂದೊಮ್ಮೆ ಅನನ್ಯಾ ಬಗ್ಗೆ ಅನುಮಾನ ಹೆಚ್ಚಾದರೆ ಅವರನ್ನು ವಶಕ್ಕೆ ಪಡೆಯಬಹುದು. ಅವರ ವಿರುದ್ಧ ಸೂಕ್ತ ಸಾಕ್ಷ್ಯ ಸಿಕ್ಕರೆ ಬಂಧನ ಕೂಡ ನಡೆಯಬಹುದು. ಸದ್ಯ ವಿಜಯ್​ ದೇವರಕೊಂಡ ಜೊತೆ ‘ಲೈಗರ್​’ ಚಿತ್ರದಲ್ಲಿ ಅನನ್ಯಾ ಅಭಿನಯಿಸುತ್ತಿದ್ದಾರೆ. ಅಷ್ಟರಲ್ಲಾಗಲೇ ಅವರ ಹೆಸರು ಡ್ರಗ್ಸ್​ ಜಾಲದ ಜೊತೆ ತಳುಕು ಹಾಕಿಕೊಂಡಿದೆ.

ಶಾರುಖ್​ ಪುತ್ರಿ ಸುಹಾನಾ ಖಾನ್​, ಸಂಜಯ್​ ಕಪೂರ್​ ಮಗಳು ಶನಾಯಾ ಹಾಗೂ ಅನನ್ಯಾ ಪಾಂಡೆ ಬೆಸ್ಟ್​ ಫ್ರೆಂಡ್ಸ್​. ‘ಚಿಕ್ಕವರಿದ್ದಾಗ ನಾವೆಲ್ಲ ವಿಚಿತ್ರ ಕೆಲಸಗಳನ್ನು ಮಾಡುತ್ತಿದ್ದವು. ಅದಕ್ಕೆಲ್ಲ ಶಾರುಖ್ ಖಾನ್​ ಪ್ರೋತ್ಸಾಹ ನೀಡುತ್ತಿದ್ದರು. ಅವರು ನಮ್ಮ ಫೋಟೋಶೂಟ್​ ಮಾಡುತ್ತಿದ್ದರು. ನಮ್ಮ ವಿಡಿಯೋಗಳನ್ನು ಚಿತ್ರಿಸಿ ನಮ್ಮನ್ನು ಅತ್ಯುತ್ತಮ ನಟರು ಎಂಬಂತೆ ಟ್ರೀಟ್​ ಮಾಡುತ್ತಿದ್ದರು. ಅದನ್ನು ಎಲ್ಲರಿಗೂ ತೋರಿಸುತ್ತಿದ್ದರು’ ಎಂದು ಅನನ್ಯಾ ಹೇಳಿಕೊಂಡಿದ್ದರು.

ಇದನ್ನೂ ಓದಿ: ಇಲ್ಲೊಬ್ಬ ಬಡಪಾಯಿ, ನಕಲಿ ಶಾರುಖ್​ ಖಾನ್​ಗೆ ಮಕ್ಕಳ ಶಾಲೆ ಫೀಸ್​ ಕಟ್ಟಲು ದುಡ್ಡಿಲ್ಲ; ಯಾರಿದು?

Ananya Panday: ‘ಶಾರುಖ್​ ಖಾನ್​ ನನ್ನ 2ನೇ ಅಪ್ಪ’ ಎಂದಿದ್ದ ಅನನ್ಯಾ ಪಾಂಡೆ; ಡ್ರಗ್ಸ್​ ಸುಳಿಯಲ್ಲಿ ನಟಿ

ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ